ಡಿಸಿಎಂ ಪವನ್​ ಕಲ್ಯಾಣ್​​ ಹತ್ಯೆಗೆ ಭಾರೀ ಸಂಚು.. ಕೇಂದ್ರ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ!

author-image
Ganesh Nachikethu
Updated On
ಆಂಧ್ರದಲ್ಲಿ ಸಿಎಂ ಜಗನ್​ಗೆ ಹಿನ್ನಡೆ.. ಪವನ್​ ಕಲ್ಯಾಣ್, ಚಂದ್ರಬಾಬು ನಾಯ್ಡು ಕಡೆಗೆ ವಿಜಯ ಲಕ್ಷ್ಮಿ?
Advertisment
  • ಆಂಧ್ರದ ಡಿಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿರೋ ಪವನ್​ ಕಲ್ಯಾಣ್​​​
  • ಪೀಠಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರೋ ಸ್ಟಾರ್​​ ನಟ ಪವನ್​​
  • ಜನಸೇನಾ ಮುಖ್ಯಸ್ಥ ನಟ ಪವನ್​ ಕಲ್ಯಾಣ್​​​ ಹತ್ಯೆಗೆ ಹಂತಕರಿಂದ ಸ್ಕೆಚ್​​​!

ಇತ್ತೀಚೆಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಗನ್​​ ನೇತೃತ್ವದ ವೈಎಸ್​​ಆರ್​​ ಕಾಂಗ್ರೆಸ್ಸನ್ನು ಸೋಲಿಸಿ ಜನಸೇನಾ, ಟಿಡಿಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಸೂಪರ್​ ಸ್ಟಾರ್​​ ಪವನ್​ ಕಲ್ಯಾಣ್​​ ಅವರು ಪೀಠಪುರಂ ವಿಧಾನಸಭಾ ಕ್ಷೇತ್ರದಿಂದ ಜನಸೇನಾ ಪಾರ್ಟಿಯಿಂದ ಗೆದ್ದು ಈಗ ಡಿಸಿಎಂ ಆಗಿದ್ದಾರೆ. ಸದ್ಯ ಡಿಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿರೋ ಜನಸೇನಾ ಮುಖ್ಯಸ್ಥ ನಟ ಪವನ್​ ಕಲ್ಯಾಣ್​​​ ಅವರಿಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಪವನ್ ಕಲ್ಯಾಣ್ ಹತ್ಯೆಗೆ ಸ್ಕೆಚ್​​ ಆಗಿದ್ದು, ಇವರ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿವೆ.

ಡಿಸಿಎಂ ಪವನ್​ ಕಲ್ಯಾಣ್​ ಹತ್ಯೆಗೆ ಸಂಚು ನಡೆಸಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾಗಿ ಪವನ್​ ಕಲ್ಯಾಣ್​​​ ಅಭಿಮಾನಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ ಕೇಂದ್ರದಿಂದ ಪವನ್​ ಕಲ್ಯಾಣ್​ ಅವರಿಗೆ ಸ್ಪೆಷಲ್​ ಸೆಕ್ಯೂರಿಟಿ ಕೂಡ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸುದ್ದಿ ಇಡೀ ಆಂಧ್ರವನ್ನೇ ಬೆಚ್ಚಿಬೀಳಿಸಿದೆ.

ಕೇಂದ್ರ ಗುಪ್ತಚರ ಸಂಸ್ಥೆ ಕೊಟ್ಟ ಎಚ್ಚರಿಕೆಯೇನು?

ಪವನ್ ಕಲ್ಯಾಣ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕೇಂದ್ರ ಗುಪ್ತಚರ ದಳದ ಟ್ರ್ಯಾಕಿಂಗ್ ವೇಳೆ ಪವನ್​​ ಜೀವಕ್ಕೆ ಅಪಾಯ ಇರುವುದು ಕಂಡು ಬಂದಿದೆ. ಹಾಗಾಗಿ ಪವನ್​ ಕಲ್ಯಾಣ್​​ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗುಪ್ತಚರ ಮೂಲಗಳು ಸೂಚಿಸಿವೆ.

ಇದನ್ನೂ ಓದಿ: Budget2024: ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ಮಾಹಿತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment