ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?

author-image
Ganesh
Updated On
ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?
Advertisment
  • ಮುಂದಿನ ದಾರಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಚಾಣಕ್ಯ
  • ನಿವೃತ್ತಿ ಹೊಂದಿದ ನಂತರ ಏನ್ಮಾಡುವೆ ಅನ್ನೋ ಬಗ್ಗೆ ಶಾ ಮಾತು
  • ಈ 3 ವಿಚಾರಗಳ ಬಗ್ಗೆ ಅಧ್ಯಯನ ಮಾಡುವೆ ಎಂದ ಅಮಿತ್ ಶಾ

ಅಮಿತ್ ಶಾ ಪಾಲಿಟಿಕ್ಸ್ ಬಿಡ್ತಿದ್ದಾರಾ? ರಾಜಕೀಯ ನಿವೃತ್ತಿ ತೆಗೆದುಕೊಳ್ತಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ. ಇಂಥದ್ದೊಂದು ಪ್ರಶ್ನೆ ಹುಟ್ಟೋದಕ್ಕೆ ಕಾರಣ ಬೇಱರು ಅಲ್ಲ ಖುದ್ದು ಅಮಿತ್ ಶಾ ಆಡಿರೋ ಮಾತುಗಳು.

ಅಮಿತ್​ ಶಾ.. ಬಿಜೆಪಿಯ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ.. ಎಲೆಕ್ಷನ್​ ಟೈಮಲ್ಲಿ ಈ ಹೆಸ್ರು ಕೇಳಿದ್ರೆ ಸಾಕು ಬಿಜೆಪಿ ಅಭ್ಯರ್ಥಿಯಗಳಿಗೆ ಭೀಮಬಲ ಇದ್ದಂತೆ. ಅದ್ಯಾವ ಮ್ಯಾಜಿಕ್‌ ಮಾಡಿಯಾದ್ರೂ ಕಮಲ ಪಾಳಯದ ಚಾಣಕ್ಯ ತಮ್ಮನ್ನ ದಡ ಸೇರಿಸಿ ಬಿಡ್ತಾರೆ ಅನ್ನೋ ಅದಮ್ಯ ಆತ್ಮವಿಶ್ವಾಸ ಕೇಸರಿ ಕಲಿಗಳಿರುತ್ತೆ. ಅಮಿತ್​ ಶಾ ಎಲ್ಲಿ ಎಂಟ್ರಿಕೊಡ್ತಾರೋ, ಅಲ್ಲಿ ಪ್ರತಿಪಕ್ಷದ ಸ್ಪರ್ಧಿಗಳಿಗೆ ನಡುಕ ಶುರು ಅಂತಲೇ ಅರ್ಥ. ಇತ್ತ ಅಧಿಕಾರದಲ್ಲೂ ಅಮಿತ್ ಶಕ್ತಿ ಪ್ರದರ್ಶನ ನಡೆದಿದೆ. ಚಂಡಮಾರುತವನ್ನ ಎದುರಿಸವಷ್ಟು ಸವಾಲಿದ್ರೂ ಆರ್ಟಿಕಲ್ 370 ರದ್ಧತಿಯನ್ನ ಯಶಸ್ವಿಯಾಗಿಸಿದ್ದು, ಶಾ ನಾಯಕತ್ವದಲ್ಲೇ.. ಇದು ಒಂದು ಲೆಕ್ಕವಷ್ಟೇ ಇಂಥಾ ಹಲವಿದೆ. ಅಮಿತ್ ಶಾ ಸಾಧನೆಯನ್ನ ನೆನೆಯುತ್ತಿರೋದಕ್ಕೆ ಕಾರಣ, ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿರೋದು.

ಇದನ್ನೂ ಓದಿ:ಸಿದ್ದರಾಮಯ್ಯಕ್ಕೆ AICC ಮಹತ್ವದ ಜವಾಬ್ದಾರಿ.. ರಾಷ್ಟ್ರ ರಾಜಕಾರಣದಲ್ಲೂ ಸಿಎಂ ಸಿದ್ದು..!

publive-image

ಮುಂದಿನ ದಾರಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಚಾಣಕ್ಯ

ಪ್ರಧಾನಿ ಮೋದಿ ಬಳಿಕ ಅಮಿತ್ ಶಾ ಆ ದೊಡ್ಡ ಹುದ್ದೆ ಏರಬಹುದು ಅನ್ನೋ ಚರ್ಚೆಯಲ್ಲಿದೆ. ಈ ನಡುವೆ ಅಚ್ಚರಿ ಎಂಬಂತೆ ಅಮಿತ್ ಶಾ, ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರೋದು ಬಹುದೊಡ್ಡ ಚರ್ಚಾ ಸುಂಟರಗಾಳಿ ಎಬ್ಬಿಸಿದೆ.

ನಾನು ರಾಜಕೀಯ ನಿವೃತ್ತಿ ಆದ್ಮೇಲೆ..

ಅಹಮದಾಬಾದ್​ನಲ್ಲಿನ ಸಹಕಾರಿ ಸಂವಾದ ಕಾರ್ಯಕ್ರಮ.. ಇದರಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ. ತಾವು ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಏನ್ಮಾಡಬೇಕು ಅಂದ್ಕೊಂಡಿದ್ದೀನಿ ಅನ್ನೋದನ್ನ ಕಾರ್ಯಕ್ರಮದಲ್ಲಿ ನೆರದಿದ್ದವರಿಗೆ ತಿಳಿಸಿದ್ರು. ತಮ್ಮ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಮೂರು ವಿಚಾರಗಳ ಬಗ್ಗೆ ಅಧ್ಯಯನ ಮಾಡುವೆ ಅನ್ನೋ ಮೂಲಕ ಅಲ್ಲಿ ನೆರದಿದ್ದವರ ಅಚ್ಚರಿಯ ಕಣ್ಣು ಅರಳಿಸುವಂತೆ ಮಾಡಿದ್ರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..!

publive-image

ನಾನು ನಿರ್ಧರಿಸಿದ್ದೇನೆ.. ನಾನು ನಿವೃತ್ತಿ ಆದ್ಮೇಲೆ ಏನ್ಮಾಡಬೇಕು ಅಂತಾ.. ನಾನು ನನ್ನ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡಲು ಬಯಸುತ್ತೇನೆ -ಅಮಿತ್ ಶಾ, ಕೇಂದ್ರ ಗೃಹ ಸಚಿವ
ಹೀಗೆ ಅಮಿತ್ ಶಾ ದಿಢೀರ್ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿರೋದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕಾರ್ಯಕ್ರಮದಲ್ಲಿ ತಮ್ಮ ನಿವೃತ್ತಿ ಪ್ಲಾನ್​ನಷ್ಟೇ ಶಾ ಬಿಚ್ಚಿಟ್ಟಿದ್ದು, ಆ ಸಮಯವಿನ್ನೂ ದೂರ ಇದೆ. ಆದ್ರೆ, ಚಾಣಕ್ಯನ ಹೆಜ್ಜೆ ಬಲ್ಲವಱರು ಅನ್ನೋ ರೀತಿ ಅಮಿತ್ ಶಾ ಮರ್ಮ ಬಲ್ಲವಱರು ಅಲ್ವಾ? ಅದರೊಳಗೊಂದು ತಂತ್ರ.. ಅದ್ದಕ್ಕೊಂದು ಮಂತ್ರ.. ಒಗ್ಗೂಡಿ ಒಂದು ಸೂತ್ರ ಬಹಿರಂಗವಾಗಲಬಹುದು. ಇದೇ ಚರ್ಚೆಯನ್ನ ರಾಜಕೀಯ ತಜ್ಞರು ಮುಂದಿಡ್ತಿದ್ದಾರೆ.

ಇದನ್ನೂ ಓದಿ: ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment