/newsfirstlive-kannada/media/post_attachments/wp-content/uploads/2024/05/HDK_DKSHI.jpg)
ನವದೆಹಲಿ: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಡಿ.ಕೆ ಶಿವಕುಮಾರ್ ಪ್ರಸ್ತಾಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಸರ್ಕಾರ ರಚನೆ ಮಾಡಿದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ರಾಮನಗರ ಜಿಲ್ಲೆ ಮಾಡಿದ್ದರ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ. ರಾಮನ ಹೆಸರಿರುವ ರಾಮನಗರಕ್ಕೆ ಅದರದೇ ಆದ ಇತಿಹಾಸ ಇದೆ. ಅಲ್ಲಿ ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಗೊತ್ತಿದೆ. ಇದೆಲ್ಲ ಬಿಟ್ಟು ಅಭಿವೃದ್ಧಿ ಮಾಡುವುದು ಕಲಿಯಲಿ ಎಂದು ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು ವಂಶಸ್ಥರು ನಾವು, ಅಲ್ಲಿಗೆ ಸೇರಬೇಕು. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ತುಂಬಬಹುದು. ನಾನು ಬೆಂಗಳೂರಿಗೆ ನಾಲ್ಕು ತಾಲೂಕುಗಳನ್ನು ಸೇರಿಸುತ್ತೇನೆ. ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು. ರಾಮನಗರ ನಾವು ಮಾಡಿದ್ದು ತೆಗೆಯಬೇಕು ಎನ್ನುವುದು ಅವರ ಉದ್ದೇಶ. ದೇವೇಗೌಡರು, ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಅನ್ನೋದು ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ.
ಇದನ್ನೂ ಓದಿ: ರಾಮನಗರ ಜಿಲ್ಲೆ ಹಾಗೇ ಇರುತ್ತೆ, ಅದರ ಹೆಸರು ಮಾತ್ರ ಬದಲಾಗುತ್ತದೆ; ಡಿ ಕೆ ಶಿವಕುಮಾರ್
ಈ ಹಿಂದೆ ಕನಕಪುರ ಸಾತನೂರು ಹೇಗಿತ್ತು. ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು. ಈಗ ರಾಮನಗರ ಹೆಸರು ಬದಲಾಯಿಸಿದರೂ ನಾನು ಮತ್ತೆ ಬಂದೇ ಬರ್ತಿನಿ ಆ ವಿಶ್ವಾಸ ಇದ್ದೇ ಇದೆ. ನಾಲ್ಕು ತಾಲೂಕು ಸೇರಿ ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರ ಅಂತಾ ಇದೆಯಲ್ಲ. ಬೇರೆ ಹೆಸರು ಇಟ್ಟಿದ್ದರೆ ಆಗಿರೋದು ಆದರೆ ಅದು ಮಾಡ್ತಿಲ್ಲ.
ಅವರು ಮಾತ್ರ ಬೆಂಗಳೂರಿನವರು ಅವರ ಸಾಧನೆ ಚಿರಾಯುವಾಗಿ ಉಳಿಯಬೇಕು. ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತೆ ಅವರು ಹೇಳಬೇಕು. ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರೆಯಾಗಲಿದೆ. ಹೊಸ ಪ್ರಕ್ರಿಯೆ ಶುರುವಾಗಲಿದೆ. ರಾಮನಗರ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಬಂದಿರೋದು. ನೋಡೋಣ ಮುಂದೇನಾಗುತ್ತೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ