/newsfirstlive-kannada/media/post_attachments/wp-content/uploads/2024/12/DIGITAL-FRAUD.jpg)
ಕೇಂದ್ರ ಗೃಹ ಇಲಾಖೆಯ ಅಂಗ ಸಂಸ್ಥೆಯಾದ ಇಂಡಿಯನ್ ಸೈಬರ್ ಕೋಆರ್ಡಿನೇಷನ್ ಸೆಂಟರ್ (14ಸಿ) ಒಟ್ಟು 1,700 ಸ್ಕೈಪ್ ಐಡಿ ಹಾಗೂ 59 ಸಾವಿರ ವಾಟ್ಸಾಪ್ ಖಾತೆಗಳನ್ನ ಬ್ಲಾಕ್ ಮಾಡಿದೆ. ಇತ್ತೀಚೆಗೆ ನಡೆಯುತ್ತಿರುವ ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ಗಳ ಪ್ರಕರಣಗಳ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದ ಕೇಂದ್ರ ಗೃಹ ಇಲಾಖೆ ಒಟ್ಟು 59 ಸಾವಿರ ವಾಟ್ಸಾಪ್ ಹಾಗೂ 1700 ಸ್ಕೈಪ್ ಐಡಿಗಳನ್ನು ಪತ್ತೆ ಮಾಡಿ ಬ್ಲಾಕ್ ಮಾಡಿದೆ.
ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಬಂಡಿ ಸಂಜಯ್ ಕುಮಾರ್. ಸಿಟಿಜಿನ್ ಫೈನಾನ್ಸಿಷಿಯಲ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೆಜ್ಮೆಂಟ್ ಸಿಸ್ಟಮ್ನ್ನು 14 ಸಿ ಅಡಿಯಲ್ಲಿ 2021ರಲ್ಲಿ ಲಾಂಚ್ ಮಾಡಲಾಗಿತ್ತು. ಹಣಕಾಸಿನ ವಂಚನೆ ನಡೆದಾಗಲೆಲ್ಲಾ ಕೂಡಲೇ ಕ್ರಮ ಕೈಗೊಂಡು ನಾಗರಿಕರ ಹಣವನ್ನು ಉಳಿಸಲಾಗಿದೆ. ಈ ಒಂದು ಇಲಾಖೆಗೆ ಒಟ್ಟು 9.94 ಲಕ್ಷ ದೂರುಗಳು ಬಂದಿದ್ದವು. ದೂರಿನನ್ವಯ ಒಟ್ಟು 3,431 ಕೋಟಿ ರೂಪಾಯಿ ನಾಗರಿಕರ ಹಣವನ್ನು ಸುರಕ್ಷಿತವಾಗಿ ಕಾಪಾಡಲಾಗಿದೆ
ಇದನ್ನೂ ಓದಿ:Fengal; ಮನೆ ಮೇಲೆ ಬೆಟ್ಟದ ಬಂಡೆ ಉರುಳಿದ ಘಟನೆ.. ಶಾಶ್ವತವಾಗಿ ಕಣ್ಮುಚ್ಚಿದ ಪೋಷಕರು, ಐವರು ಮಕ್ಕಳು
14ಸಿ ಸದ್ಯ ಡಿಜಿಟಲ್ ವಂಚನೆಯನ್ನು ಮಾಡುತ್ತಿದ್ದ 1700 ಸ್ಕೈಪ್ ಐಡಿಗಳನ್ನು ಹಾಗೂ 59 ಸಾವಿರ ವಾಟ್ಸಾಪ್ ಖಾತೆಗಳನ್ನು ಗುರುತಿಸಿ ಅವುಗಳನ್ನು ಸದಾಕಾಲಕ್ಕೆ ಬ್ಲಾಕ್ ಮಾಡಲಾಗಿದೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:72 ವರ್ಷದ ಬಳಿಕ ಭಾರತದ ಕಾಡಿಗೆ 2 ಚೀತಾ; ಅಗ್ನಿ, ವಾಯುಗೆ ಇಂದಿನಿಂದ ಸತ್ವಪರೀಕ್ಷೆ!
ನವೆಂಬರ್ 15 2024ರವರೆಗೆ ಒಟ್ಟು 6.69 ಲಕ್ಷ ಸಿಮ್ಕಾರ್ಡ್ ಹಾಗೂ 1.32 ಲಕ್ಷ ಐಎಇಐ ನಂಬರ್ಗಳನ್ನು ಪೊಲೀಸ್ ಅಧಿಕಾರಿಗಳು ವರದಿ ಮಾಡಿದ್ದರು. ಅವುಗಳನ್ನೆಲ್ಲಾ ಈಗ ಬ್ಲಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಗೃಹ ಸಚಿವಾಲಯ ಸೈಬರ್ ಕ್ರೈಂ ಹಾಗೂ ಡಿಜಿಟಲ್ ಪ್ರಾಡ್ಗಳನ್ನ ತಡೆಹಿಡಿಯುವಲ್ಲಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಹಾಗೂ ಟಿಲಿಕಾಂ ಸರ್ವಿಸ್ ಪ್ರೊವೈಡರ್ಸ್ ಅಂತಾರಾಷ್ಟ್ರೀಯ ವಂಚನೆಯ ಕರೆಗಳನ್ನು ಗುರುತಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇತ್ತೀಚಿನ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಸೈಬರ್ ವಂಚಕರು ಇಂತಹ ಕರೆಗಳ ಸಹಾಯದಿಂದ ಜನರನ್ನು ವಂಚಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಟಿಪಿಎಸ್ಗೆ ಇಂತಹ ಅಂತಾರಾಷ್ಟ್ರೀಯ ವಂಚನೆ ಕರೆಗಳನ್ನು ಬ್ಲಾಕ್ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ