ಪೀಕ್​ ಸಮಯದಲ್ಲಿ ನಿಮ್ಮ ಜೇಬಿಗೆ ಡಬಲ್ ಕತ್ತರಿ -ಓಲಾ, ಊಬರ್​ ಪ್ರಯಾಣಕ್ಕೆ ಹೊಸ ನಿಯಮ..!

author-image
Ganesh
ಪೀಕ್​ ಸಮಯದಲ್ಲಿ ನಿಮ್ಮ ಜೇಬಿಗೆ ಡಬಲ್ ಕತ್ತರಿ -ಓಲಾ, ಊಬರ್​ ಪ್ರಯಾಣಕ್ಕೆ ಹೊಸ ನಿಯಮ..!
Advertisment
  • ಬೈಕ್ ಟ್ಯಾಕ್ಸಿಗೆ ಕೇಂದ್ರ ಅನುಮತಿ, ಗೈಡ್​ಲೈನ್ಸ್​ ಬಿಡುಗಡೆ
  • ಬೈಕ್​ ಟ್ಯಾಕ್ಸಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ
  • ಕೇಂದ್ರ ಸರ್ಕಾರ ಬೈಕ್​ ಟ್ಯಾಕ್ಸಿ ಸಂಬಂಧ ಹೇಳಿದ್ದೇನು..?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಿನ್ನೆ ಮೋಟಾರ್ ವಾಹನ ಸಂಗ್ರಾಹಕ ಮಾರ್ಗಸೂಚಿಗಳನ್ನು (MVAG) ಬಿಡುಗಡೆ ಮಾಡಿದೆ. ಅದರಲ್ಲಿ ಓಲಾ, ಊಬರ್​, ಇನ್ನಿತರೆ ಕ್ಯಾಬ್ ಅಗ್ರಿಗೇಟರ್​ ಸಂಸ್ಥೆಗಳಿಗೆ ದೊಡ್ಡ ಪರಿಹಾರ ಸಿಕ್ಕಿದೆ.

ಪ್ರಯಾಣದ ಅವಧಿಯಲ್ಲಿ ನೀವು ಓಲಾ, ಊಬರ್ ಬುಕ್ ಮಾಡಿದಾಗ ಚಾಲಕರು ಪೀಕ್ ಸಮಯದಲ್ಲಿ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಾರೆ ಎಂಬ ದೂರು ಇತ್ತು. ಇದೀಗ ಸರ್ಕಾರ ಅದಕ್ಕೆ ಪರಿಹಾರ ನೀಡಿದೆ. ಉಬರ್, ಓಲಾ, ಇನ್‌ಡ್ರೈವ್ ಮತ್ತು ಱಪಿಡೊದಂತಹ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪೀಕ್ ಸಮಯದಲ್ಲಿ ಸರ್ಜ್ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಅವಕಾಶ ನೀಡಿದೆ. ಅದರ ಪ್ರಕಾರ, ಈಗ ಅಗ್ರಿಗೇಟರ್‌ಗಳು ಮೂಲ ದರವನ್ನು ದ್ವಿಗುಣಗೊಳಿಸಬಹುದು.

ಇದನ್ನೂ ಓದಿ: ಬರೋಬ್ಬರಿ 13 ಸಾವಿರ ಅಡಿ ಎತ್ತರದಿಂದ ಕೆಳಗೆ ಜಿಗಿದ ಬಿಗ್​ಬಾಸ್​ ಖ್ಯಾತಿಯ ದಿವ್ಯಾ ಉರುಡುಗ.. VIDEO

ಈ ಹಿಂದೆ ಈ ಕಂಪನಿಗಳು ದರವನ್ನು ಒಂದೂವರೆ ಪಟ್ಟು ಮಾತ್ರ ಹೆಚ್ಚಿಸಬಹುದಿತ್ತು. ಈಗ ಪೀಕ್ ಸಮಯದಲ್ಲಿ ದರವನ್ನು ದ್ವಿಗುಣಗೊಳಿಸಲು ಅನುಮತಿ ಸಿಕ್ಕಿದೆ. ಅಂದರೆ ಮೂಲ ದರದ ಎರಡು ಪಟ್ಟು ಹೆಚ್ಚಿಸಲು ಅನುಮತಿ ನೀಡಿದೆ. ಈ ನಿಯಮವನ್ನು ಮುಂದಿನ ಮೂರು ತಿಂಗಳಲ್ಲಿ ರಾಜ್ಯಗಳು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕಡಿಮೆ ಜನಸಂದಣಿ ಇದ್ದಲ್ಲಿ ಶುಲ್ಕವು ಮೂಲ ಬೆಲೆಯ ಅರ್ಧಕ್ಕಿಂತ ಕಡಿಮೆಯಿರುವುದಿಲ್ಲ.

ಇನ್ನು, ಡ್ರೈವರ್​ಗಳು ನಿಮ್ಮ ಟ್ರಾವೆಲ್ ಬೇಡಿಕೆಯನ್ನು ಸ್ವೀಕರಿಸಿ ಸರಿಯಾದ ಕಾರಣ ನೀಡದೇ ಕ್ಯಾನ್ಸಲ್ ಮಾಡಿದರೆ ಶೇಕಡಾ 10 ರಷ್ಟು ದಂಡ ವಿಧಿಸಲಾಗುತ್ತದೆ. ಈ ದಂಡದ ಕೊನೆಯ ಮಿತಿ ನೂರು ರೂಪಾಯಿ ಆಗಿದೆ. ಇನ್ನು, ದಂಡವನ್ನು ಡ್ರೈವರ್ ಹಾಗೂ ಅಗ್ರಿಗೇಟರ್ ಕಂಪನಿಗಳಿಂದ ಸಮನಾಗಿ ಹಂಚಿಕೊಳ್ಳಬೇಕಾಗುತ್ತದೆ.

ಇನ್ನು, ಱಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದ್ದು, ಅದರನ್ವಯ ಪ್ರಯಾಣಿಕರ ಖಾಸಗಿ ಮೋಟಾರ್‌ ಸೈಕಲ್‌ಗಳ ಬಳಕೆಯನ್ನ ಅನುಮತಿಸಲಾಗಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಕರ್ನಾಟಕದಲ್ಲೂ ಅಗ್ರಿಗೇಟರ್ ಸೇವೆ ಪುನರಾರಂಭ ಆಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳು 2025 ನ್ನು ಹೊರಡಿಸಿದ್ದು, ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯವೆಂದು ಕೇಂದ್ರ ಹೇಳಿದೆ.

ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರ ಅನುಮತಿ, ರಾಜ್ಯ ಅನುಮತಿಸಿದ್ರೆ ಅಗ್ರಿಗೇಟರ್ ಸೇವೆ..! ಗೈಡ್​ಲೈನ್ಸ್​ನಲ್ಲಿ ಏನಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment