ಗಡಿಯಲ್ಲಿ ಭಾರತ, ಪಾಕ್ ಅಟ್ಯಾಕ್; ಏರ್​ಪೋರ್ಟ್​ಗಳು ತಾತ್ಕಾಲಿಕ ಬಂದ್, ದಿನಾಂಕ ವಿಸ್ತರಣೆ..!

author-image
Bheemappa
Updated On
ಗಡಿಯಲ್ಲಿ ಭಾರತ, ಪಾಕ್ ಅಟ್ಯಾಕ್; ಏರ್​ಪೋರ್ಟ್​ಗಳು ತಾತ್ಕಾಲಿಕ ಬಂದ್, ದಿನಾಂಕ ವಿಸ್ತರಣೆ..!
Advertisment
  • ಪ್ರಯಾಣಿಕರು ಮೂರು ಗಂಟೆ ಮೊದಲೇ ನಿಲ್ದಾಣಕ್ಕೆ ಬರಬೇಕು
  • ದೇಶದ್ಯಾಂತ ಇರೋ ಏರ್​ಪೋರ್ಟ್​ಗಳಲ್ಲಿ ಭದ್ರತೆ ಹೆಚ್ಚಿಸಿದೆ
  • ಭಾರತದ ಬಹುತೇಕ ಏರ್​ಪೋರ್ಟ್​ಗಳು ಬಂದ್ ಆಗಿರುತ್ತವೆ

ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಏರ್​ಪೋರ್ಟ್​ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆಯಿಂದ ದೇಶದ 24 ಏರ್​ಪೋರ್ಟ್​ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಈ ಮೊದಲು ಹೇಳಿತ್ತು. ಅದರಂತೆ ಇದೀಗ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಮೇ 15ರ ವರೆಗೆ ಉತ್ತರ ಭಾರತದ ಬಹುತೇಕ ಏರ್​ಪೋರ್ಟ್​ಗಳು ಬಂದ್ ಆಗಿರುತ್ತವೆ.

ಇದನ್ನೂ ಓದಿ: ಜಮ್ಮು ಕಂಪ್ಲೀಟ್‌ ಬ್ಲಾಕ್ ಔಟ್‌; ಮನೆಯಲ್ಲೇ ಇರಿ ಎಂದು ಸಿಎಂ ಒಮರ್ ಅಬ್ದುಲ್ಲಾ ಮನವಿ; ಗಡಿಯಲ್ಲಿ ಆತಂಕ!

publive-image

ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರುವಂತೆ ಈಗಾಗಲೇ ಸೂಚಿಸಲಾಗಿದೆ. ದೇಶದ್ಯಾಂತ ಇರುವ ಏರ್​ಪೋರ್ಟ್​ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗೆ ಬರಬೇಕೆಂದು ಹೇಳಿದೆ. ನೆರೆಯ ರಾಷ್ಟ್ರಗಳ ಮಧ್ಯ ಘರ್ಷಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಮೇ 15ರ ವರೆಗೆ ಉತ್ತರ ಭಾರತದ ಏರ್ ಪೋರ್ಟ್​​​ಗಳು ಬಂದ್ ಆಗಿರಲಿವೆ. ಹೀಗಾಗಿ ಉತ್ತರದ ಕಡೆಗೆ ಹೋಗುವ ಮೊದಲು ಸಾರಿಗೆಗೆ ಉತ್ತಮವಾದ ವಾಹನವನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮ್ಮು, ಶ್ರೀನಗರ, ಅಮೃತಸರ, ಪಂಜಾಬ್​ನ, ಲೂಧಿಯಾನ, ಪಾಟಿಯಾಲ, ಬಥಿಂದಾ, ಹಲ್ವಾರಾ, ಪಠಣ್​ಕೋಟ್, ಹಿಮಾಚಲ ಪ್ರದೇಶದ ಭೂಂತರ್ ಸೇರಿದಂತೆ ಒಟ್ಟು 24 ಏರ್ ಪೋರ್ಟ್​ಗಳನ್ನು ಬಿಟ್ಟು ಬಂದುಬಿಡು ಎಂದು ಹೇಳಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment