Advertisment

ಪ್ರಧಾನಿ ಮೋದಿ ಸರ್ಕಾರದಿಂದ ದಿಟ್ಟ ಹೆಜ್ಜೆ; ಕೊನೆಗೂ ಒನ್​ ನೇಷನ್​, ಒನ್​ ಎಲೆಕ್ಷನ್‌ಗಾಗಿ ಸಮಿತಿ ರಚನೆ; ಏನಿದರ ವಿವಾದ?

author-image
Bheemappa
Updated On
ಪ್ರಧಾನಿ ಮೋದಿ ಸರ್ಕಾರದಿಂದ ದಿಟ್ಟ ಹೆಜ್ಜೆ; ಕೊನೆಗೂ ಒನ್​ ನೇಷನ್​, ಒನ್​ ಎಲೆಕ್ಷನ್‌ಗಾಗಿ ಸಮಿತಿ ರಚನೆ; ಏನಿದರ ವಿವಾದ?
Advertisment
  • 2014 ಲೋಕಸಭಾ ಚುನಾವಣೆ; ಬಿಜೆಪಿ ಪ್ರಣಾಳಿಕೆಯಲ್ಲಿನ ಅಂಶ
  • ಒನ್​ ನೇಷನ್​, ಒನ್​ ಎಲೆಕ್ಷನ್​ನಿಂದ ಆಗುವ ಉಪಯೋಗಗಳು ಏನು?
  • ದೇಶದಲ್ಲಿ ಒಂದೇ ಬಾರಿ ಲೋಕಸಭೆ, ವಿಧಾನಸಭೆ ಎಲೆಕ್ಷನ್​ ಸಾಧ್ಯನಾ?

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿದೆ.

Advertisment

ಪ್ರಧಾನಿ ಮೋದಿ ಸರ್ಕಾರ ನಿನ್ನೆಯಷ್ಟೇ ದಿಢೀರನೇ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ. ಸೆಪ್ಟೆಂಬರ್ 18 ರಿಂದ 22ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ಒನ್​ ನೇಷನ್​ ಒನ್​ ಎಲೆಕ್ಷನ್​ನ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡನೆ ಮಾಡುವ ಸಾಧ್ಯತೆ ಇದೆ. ಆದ್ರೆ ವಿರೋಧ ಪಕ್ಷಗಳಲ್ಲಿ ಈ ಮಸೂದೆ ಬಗ್ಗೆ ಸಹಮತವಿಲ್ಲ. ಬೇರೆ ಬೇರೆ ಸಮಯಗಳಲ್ಲಿ ರಾಜ್ಯಗಳ ವಿಧಾನಸಭೆ ಮುಗಿಯುತ್ತವೆ. ಹೀಗಾಗಿ ಇದು ಕಾರ್ಯಸಾಧುವಲ್ಲ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಒನ್​ ನೇಷನ್​, ಒನ್​ ಎಲೆಕ್ಷನ್​ ಎಂದರೆ ದೇಶಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದಾಗಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ಹಲವಾರು ಸಂದರ್ಭಗಳಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ 2014 ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಈ ಅಂಶವಿತ್ತು. ಒನ್​ ನೇಷನ್​, ಒನ್​ ಎಲೆಕ್ಷನ್​ನಿಂದ ಉಪಯೋಗ ಜಾಸ್ತಿ ಇದೆ ಎನ್ನಲಾಗಿದೆ. ಇದರಿಂದ ಸಮಯ, ಖರ್ಚುಗಳನ್ನು ಕಡಿಮೆ ಮಾಡಬಹುದು. ದುಂದುವೆಚ್ಚಗಳನ್ನು ತಡೆಯಬಹದು ಎಂದು ಈಗಾಗಲೇ ಸಾಕಷ್ಟು ಬಾರಿ ಕೇಂದ್ರ ಸರ್ಕಾರ ಈ ಬಗ್ಗೆ ಹೇಳಿದೆ.

ಇನ್ನು ಒನ್​ ನೇಷನ್​, ಒನ್​ ಎಲೆಕ್ಷನ್​ ಸಮಿತಿಗೆ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದಂತೆ ಅವರ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ನೀಡಿ ಹೂಗುಚ್ಚ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment