/newsfirstlive-kannada/media/post_attachments/wp-content/uploads/2024/07/KERALA-6.jpg)
ನವದೆಹಲಿ: ನಾವು ಕೊಟ್ಟ ಎಚ್ಚರಿಕೆಯನ್ನು ಕೇರಳ ಸರ್ಕಾರ ನಿರ್ಲಕ್ಷ್ಯ ಮಾಡಿದ್ದೇ ಈ ನೂರಾರು ಸಾವು-ನೋವಿಗೆ ಕಾರಣ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆಯಿಂದ ಭೂಕುಸಿತಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸಿ, ಭೂಕುಸಿತದಿಂದ ನೂರಾರು ಜನ ಜೀವ ಕಳೆದುಕೊಂಡ ಕುರಿತು ಸ್ಪಷ್ಟನೆ ನೀಡಿದರು. ಭಾರೀ ಮಳೆಯಿಂದ ಅನಾಹುತ ಸಂಭವಿಸಲಿದೆ ಎಂದು ಜುಲೈ 23 ರಂದೇ ಅಂದರೆ ಘಟನೆ ನಡೆಯುವ 7 ದಿನ ಮೊದಲೇ ಕೇರಳ ಸರ್ಕಾರಕ್ಕೆ ಅಲರ್ಟ್ ನೀಡಲಾಗಿತ್ತು. ಆದರೆ ಭೂಕುಸಿತದ ಸ್ಥಳದ ಜನರನ್ನು ಸರ್ಕಾರ ಬೇರೆಡೆಗೆ ಸ್ಥಳಾಂತರ ಮಾಡಿರಲಿಲ್ಲ. ಜನರನ್ನು ಏಕೆ ಬೇರೆಡೆಗೆ ಶಿಫ್ಟ್ ಮಾಡಲಿಲ್ಲ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಒಳ್ಳೆ ಜಾಬ್, ಡಿಸೆಂಬರ್​ನಲ್ಲಿ ಮದುವೆ.. ಆದ್ರೆ ದುರಂತ ಅಂತ್ಯಕಂಡ ಯುವಕ; ಕಾರಣವೇನು?
/newsfirstlive-kannada/media/post_attachments/wp-content/uploads/2024/07/kerala25.jpg)
ಇದು ಅಲ್ಲದೇ ಜುಲೈ 26ರಂದು ಈ ಬಗ್ಗೆ ಮತ್ತೊಮ್ಮೆ ವಾರ್ನಿಂಗ್ ನೀಡಲಾಗಿತ್ತು. ಇದನ್ನೂ ಕೂಡ ಅವರು ಪರಿಗಣಿಸಲಿಲ್ಲ. ಸರ್ಕಾರದ ವಿಳಂಬ ಧೋರಣೆಯಿಂದ ದುರಂತ ಸಂಭವಿಸಿ ಹೆಚ್ಚಿನ ಸಾವು- ನೋವಿಗೆ ಕಾರಣವಾಗಿದೆ. ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಜುಲೈ 23 ರಂದೇ 9 ಎನ್‌ಡಿಆರ್​ಎಫ್ ತಂಡಗಳನ್ನು ರಕ್ಷಣೆಗಾಗಿ ಕಳಿಸಲಾಗಿದೆ. ಕೇಂದ್ರದ ರಾಜ್ಯ ಖಾತೆ ಸಚಿವರಾದ ಜಾರ್ಜ್ ಕುರಿಯನ್ ಅವರು ಘಟನಾ ಸ್ಥಳದಲ್ಲಿದ್ದಾರೆ. ಸಾಧ್ಯವಿರುವ ಎಲ್ಲಾ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಪ್ರಧಾನಿ ಮೋದಿ ಕೂಡ ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದ್ದಾರೆ. ಭಾರತ ಸೇನೆಯ 4 ತುಕಡಿಗಳನ್ನು ಈಗಾಗಲೇ ಕಳಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಕೇರಳದ ವಯನಾಡ್ ಭೂಕುಸಿತ ದುರಂತದಲ್ಲಿ ಇದುವರೆಗೂ 172 ಜನರು ಮೃತಪಟ್ಟಿದ್ದಾರೆ. ಇಷ್ಟೇ ಅಲ್ಲದೇ ಇನ್ನೂ 100ಕ್ಕೂ ಅಧಿಕ ಜನರು ನಾಪತ್ತೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಘಟನೆ ನಡೆದ ಸ್ಥಳಗಳಲ್ಲಿ ರಕ್ಷಣಾ ಪಡೆಗಳು, ಭಾರತದ ಸೇನೆ, ಎನ್​ಡಿಆರ್​ಎಫ್​ ಟೀಮ್​ಗಳು ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us