ಕೇರಳದಲ್ಲಿ ಮತ್ತೊಂದು ಮಂಕಿಫಾಕ್ಸ್ ಪ್ರಕರಣ ಪತ್ತೆ, ಹೆಚ್ಚಿದ ಆತಂಕ
ಎಲ್ಲಾ ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದಿಂದ ಸಲಹೆ ಸೂಚನೆ
ಪ್ರತ್ಯೇಕ ವಾರ್ಡ್, ನುರಿತ ತಜ್ಞ ವೈದ್ಯರನ್ನು ಆಸ್ಪತ್ರೆಯಲ್ಲಿ ಇರಿಸುವಂತೆ ಸಲಹೆ
ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 32 ಮಂಕಿಫಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿ ಇತ್ತೀಚೆಗಷ್ಟೇ ಎರಡನೇ ಪ್ರಕರಣ ದಾಖಲಾಗಿದ್ದು. ದೇಶದಲ್ಲಿ ಒಂದು ರೀತಿಯ ಆತಂಕ ಹೆಚ್ಚಾಗಿದೆ. ಭಾರತದಲ್ಲಿ ಮಂಕಿಫಾಕ್ಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಸದ್ಯಕ್ಕೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿದೆ. ಕೂಡಲೇ ಮಂಕಫಾಕ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆಯನ್ನು ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ ಈ ಸಲಹೆಗಳು ಬಂದಿದ್ದು. ವಿಶ್ವ ಆರೋಗ್ಯ ಸಂಸ್ಥೆ ಆಗಸ್ಟ್ 14, 2024ರಂದು ಎಂಫಾಕ್ಸ್ ರೋಗವನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ವಿಶ್ವಸಂಸ್ಥೆ ಮಂಕಿಫಾಕ್ಸ್ನ್ನು 2005ರ ಬಳಿಕ ಎರಡನೇ ಬಾರಿ ಆರೋಗ್ಯ ತುರ್ತುಸ್ಥಿತಿಯೆಂದು ಘೋಷಿಸಿದೆ. ಹೀಗಾಗಿ ನಾವು ತುಂಬಾ ಎಚ್ಚರಿಕೆಯಿಂದ ಈ ಮಹಾಮಾರಿಯನ್ನು ಎದುರಿಸಬೇಕಿದ್ದು. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!
ಶಂಕಿತ ಹಾಗೂ ಎಂಫಾಕ್ಸ್ ಕಂಡು ಬಂದವರನ್ನು ಐಸೊಲೇಟ್ ಮಾಡಲು ಆಸ್ಪತ್ರೆಗಳಲ್ಲಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಸರಿಯಾದ ಅನುಭವವಿರುವ ತಜ್ಞರು ಇದ್ದಾರಾ, ಇಲ್ಲವಾ ಅನ್ನುವದನ್ನು ನೋಡಿ. ಇಲ್ಲವಾದಲ್ಲಿ ಅವುಗಳ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ
ಸದ್ಯ ವಿಶ್ವಸಂಸ್ಥೆಯೂ ಕೂಡ ಈ ಒಂದು ರೋಗವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು. ಇದನ್ನು ನಾವು ಹಿಂದೆ ಕೋವಿಡ್ನ್ನು ಎದುರಿಸಿದ ರೀತಿ ಎದುರಿಸಬೇಕಾಗಿದೆ. ಹೀಗಾಗಿ, ಎಂಫಾಕ್ಸ್ನ ಗುಣಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಐಸೋಲೆಟ್ ಮಾಡಿ ನೀಡಬೇಕಾದ ಚಿಕಿತ್ಸೆಯನ್ನು ನೀಡಿ ಇದರ ಹರಡುವಿಕೆ ತೀವ್ರತೆಯನ್ನು ತಡೆಯಬೇಕು ಎಂದು ಹೇಳಿದೆ.
ಇದನ್ನೂ ಓದಿ: ಸ್ಲ್ಯಾಪ್ ಫೈಟ್ನಿಂದ ಮೆದುಳಿಗೆ ಭಾರೀ ಅಪಾಯ; ನೀವು ಓದಲೇಬೇಕಾದ ಸ್ಟೋರಿ!
ಅದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕೂಡ ಈ ಮಹಾಮಾರಿಯನ್ನು ಕಟ್ಟಿಹಾಕಲು ಹಲವು ಸಲಹೆ ಸೂಚನೆಗಳನ್ನು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಎಲ್ಲಾ ಶಂಕಿತರನ್ನು ಕಡ್ಡಾಯವಾಗಿ ಐಸೋಲೆಟ್ ಮಾಡುವ ಮೂಲಕ ಈ ಸಾಂಕ್ರಾಮಿಕತೆಯನ್ನು ತಡೆಯಬೇಕು. ಚಿಕತ್ಸೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಸಲಹೆಗಳನ್ವಯ ನೀಡಬೇಕು. ಶಂಕಿತರು ಕಂಡು ಬಂದ ಕೂಡಲೇ ಅವರ ಚರ್ಮದ ಲೆಸಿಯನ್ಸ್ ಸ್ಯಾಂಪಲ್ ಪಡೆದು ಕೂಡಲೇ ಪರೀಕ್ಷೆಗೆ ಕೊಟ್ಟು ಕಳುಹಿಸಬೇಕು. ಪಾಸಿಟಿವ್ ಬಂದವರನ್ನು ಕೂಡಲೇ ಚಿಕಿತ್ಸೆಗೆ ಕಳುಹಿಸಿ, ಬಂದ ಸ್ಯಾಂಪಲ್ನ್ನು ಆದಷ್ಟೂ ಬೇಗ ಐಸಿಎಂಆರ್-ಎನ್ಐವಿಗೆ ರವಾನಿಸಬೇಕು ಎಂದು ಸಲಹೆ ಸೂಚನೆಗಳಲ್ಲಿ ಉಲ್ಲೇಖಿಸಲಾಗಿದೆ.
ಹೀಗೆ ಹತ್ತು ಹಲವಾರು ಸಲಹೆ ಸೂಚನೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ನೀಡಲಾಗಿದೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಂಕಿಫಾಕ್ಸ್ನ್ನು ಗಂಭೀರವಾಗಿ ಪರಿಗಣಿಸಿದ್ದು, ಸದ್ಯ ದೇಶದಲ್ಲಿ ಮಂಕಿಫಾಕ್ಸ್ನ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ