newsfirstkannada.com

ಪ್ರಧಾನಿ ಮೋದಿ ‘ಫ್ಯಾಸಿಸ್ಟ್’ ಎಂದ ಜೆಮಿನಿ ಎಐ; ತಾರತಮ್ಯದ ಉತ್ತರ ನೀಡಿ ವಿವಾದಕ್ಕೆ ಸಿಲುಕಿದ ಗೂಗಲ್!

Share :

Published February 24, 2024 at 9:59pm

    ಪ್ರಧಾನಿ ಮೋದಿಗೆ ಫ್ಯಾಸಿಸ್ಟ್ ಎಂದ ಗೂಗಲ್​​ಗೆ ನೋಟಿಸ್

    ಹೊಸ ವಿವಾದಕ್ಕೆ ಕಾರಣವಾದ ಗೂಗಲ್​​ ಎಐ ಉತ್ತರ

    ಗೂಗಲ್​ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತರಾಟೆ

ಎಐ ಇದು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಸುದ್ದಿ ವಾಚಕಿ. ನ್ಯೂಸ್‌ಫಸ್ಟ್‌ ಸೇರಿದಂತೆ ಹಲವು ಭಾಷೆಗಳ ಸುದ್ದಿವಾಹಿನಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ನಿರೂಪಕರನ್ನು ಪರಿಚಯಿಸಿವೆ. ಇದೇ ವೇಳೆ ಗೂಗಲ್ ಸೃಷ್ಟಿಸಿದ್ದ ಜೆಮಿನಿ ಎಐ ಆ್ಯಂಕರ್ ಉತ್ತರ ಈಗ ಹೊಸ ವಿವಾದಕ್ಕೆ ಕಾರಣ ಆಗಿದೆ.

ಇತ್ತೀಚೆಗೆ ಮಾಧ್ಯಮಲೋಕದಲ್ಲಿ ಎಐ ಆ್ಯಂಕರ್​ಗಳು ಸಂಚಲನ ಸೃಷ್ಟಿಸಿವೆ. ಹಲವು ಸುದ್ದಿವಾಹಿನಿಗಳಲ್ಲಿ ಎಐ ಆ್ಯಂಕರ್​ಗಳು ಈಗಾಗಲೇ ಸುದ್ದಿ ನಿರೂಪಣೆ ಮಾಡ್ತಿವೆ. ಆದ್ರೆ ಗೂಗಲ್​​ ಸೃಷ್ಟಿಸಿದ್ದ ಜೆಮಿನಿ ಎಐ ಪ್ರಧಾನಿ ಮೋದಿ ಕುರಿತು ತಾರತಮ್ಯದ ಹಾಗೂ ಪೂರ್ವಾಗ್ರಹಪೀಡಿತ ಉತ್ತರ ನೀಡಿರುವ ಆರೋಪ ಕೇಳಿಬಂದಿದೆ.

ತಾರತಮ್ಯದ ಉತ್ತರ ನೀಡಿದ ಗೂಗಲ್ ಜೆಮಿನಿ ಎಐ

ವಿಶ್ವದ ಎಲ್ಲಾ ಮಾಹಿತಿಗಳನ್ನೂ ಅಂಗೈನಲ್ಲೇ ಒದಗಿಸುವ ಗೂಗಲ್ ಸೃಷ್ಟಿಸಿರೋ ಜೆಮಿನಿ ಅಐ ಪ್ರಧಾನಿ ಮೋದಿ ಕುರಿತು ವಿವಾದಾತ್ಮಕ ಉತ್ತರ ನೀಡಿದೆ. ಈಸ್ ಮೋದಿ ಎ ಫ್ಯಾಸಿಸ್ಟ್? ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಗೂಗಲ್ ಜೆಮಿನಿ ಎಐ ಹೌದು ಎನ್ನುವಂತೆ ಉತ್ತರ ನೀಡಿದೆ. ಕೆಲವು ತಜ್ಞರು ಫ್ಯಾಸಿಸ್ಟ್ ಎಂದು ನಿರೂಪಿಸಿದ ನೀತಿಗಳನ್ನು ಮೋದಿ ಜಾರಿಗೆ ತಂದಿದ್ದಾರೆ ಎಂಬ ಉತ್ತರ ನೀಡಿದೆ. ಇದೇ ಪ್ರಶ್ನೆಯನ್ನು ಅಮೆರಿಕ ಅಧ್ಯಕ್ಷ ಹಾಗೂ ಉಕ್ರೇನ್ ಅಧ್ಯಕ್ಷರ ಬಗ್ಗೆ ಕೇಳಿದಾಗ ನಿಖರವಾದ ಉತ್ತರವಿಲ್ಲ ಎನ್ನುವಂತೆ ಪ್ರತಿಕ್ರಿಯಿಸಿದೆ. ಜೆಮಿನಿ ಎಐನ ಉತ್ತರಗಳನ್ನು ಆ ಪತ್ರಕರ್ತ ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.

ಗೂಗಲ್​​ ಜೆಮಿನಿ ಎಐ ಉತ್ತರಕ್ಕೆ ಕೆರಳಿದ ಕೇಂದ್ರ ಸರ್ಕಾರ

ಇನ್ನು, ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್​​ ಗೂಗಲ್​ನ ಜೆಮಿನಿ ಎಐನ ಪಕ್ಷಪಾತಿ ನಿಲುವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಮಾಹಿತಿ ತಂತ್ರಜ್ಞಾನ ನಿಯಮ ಹಾಗೂ ಕಾಯ್ದೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಅಂತ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಗೂಗಲ್​​ಗೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ!

ಇನ್ನು ಪ್ರಧಾನಿ ಮೋದಿ ಕುರಿತ ಗೂಗಲ್ ಜೆಮಿನಿ ಎಐ ಉತ್ತರಕ್ಕೆ ಕೇಂದ್ರ ಸರ್ಕಾರ ಕೆರಳಿದ್ದು ಸ್ಪಷ್ಟನೆ ಕೋರಿ ನೋಟಿಸ್ ನೀಡಿದೆ. ಈ​ ಬೆನ್ನಲ್ಲೇ ಇ-ಮೇಲ್​ನಲ್ಲಿ ಉತ್ತರಿಸಿರುವ ಗೂಗಲ್ ಸಂಸ್ಥೆ ಈ ಸಮಸ್ಯೆಯನ್ನು ಪರಿಹರಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ ಅಂತ ಹೇಳಿದೆ. ಜೆಮಿನಿ ಎಐಯನ್ನು ಸೃಜನಶೀಲತೆ ಹಾಗೂ ಉತ್ಪಾದಕತೆಯ ಸಾಧನವಾಗಿ ಸೃಷ್ಟಿಸಲಾಗಿದೆ. ಇದನ್ನು ನಿರಂತರವಾಗಿ ಸುಧಾರಿಸಲು ಕೆಲಸ ಮಾಡ್ತಾ ಇದ್ದೇವೆ ಎಂದಿದೆ. ಇನ್ನು ಗೂಗಲ್‌ನ ಎಐ ಕಾನೂನುಬಾಹಿರ ಇಂತಹ ವಿವಾದ ಸೃಷ್ಟಿಸ್ತಿರೋದು ಇದೇ ಮೊದಲಲ್ಲ ಅಂತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಹಿಂದೆಯೂ ಪ್ರಧಾನಿ ಮೋದಿ ಬಗ್ಗೆ ಸಮಸ್ಯಾತ್ಮಕ ಉತ್ತರಗಳನ್ನು ನೀಡಿತ್ತು ಎನ್ನಲಾಗಿದೆ. ಮೋದಿ ಬಗ್ಗೆ ಜೆಮಿನಿ ನೀಡಿರುವ ಉತ್ತರ ತಾರತಮ್ಯದ ಧೋರಣೆಯಿಂದ ಕೂಡಿದೆ ಅಂತ ನೆಟ್ಟಿಗರು ಟೀಕಿಸಿದ್ದಾರೆ. ಇಟಲಿಯಲ್ಲಿ ಸರ್ವಾಧಿಕಾರಿಯಾಗಿ ಮೆರೆದಿದ್ದ ಬೆನಿಟೋ ಮುಸಲೋನಿ ಫ್ಯಾಸಿಸ್ಟ್ ಸಂಸ್ಕೃತಿಯ ನೇತಾರನಾಗಿದ್ದು ಗೂಗಲ್ ಜೆಮಿನಿ ಎಐ ಕೂಡ ಪ್ರಧಾನಿ ಮೋದಿ ಫ್ಯಾಸಿಸ್ಟ್ ಎನ್ನುವಂತೆ ಬಿಂಬಿಸಿದೆ. ಈ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಮತ್ತಷ್ಟು ಅನಾಹುತ ಸೃಷ್ಟಿಸಲಿದ್ಯಾ ಅನ್ನೋದು ದೇಶವಾಸಿಗಳ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ‘ಫ್ಯಾಸಿಸ್ಟ್’ ಎಂದ ಜೆಮಿನಿ ಎಐ; ತಾರತಮ್ಯದ ಉತ್ತರ ನೀಡಿ ವಿವಾದಕ್ಕೆ ಸಿಲುಕಿದ ಗೂಗಲ್!

https://newsfirstlive.com/wp-content/uploads/2024/02/pm-modi-2024-02-24T203832.390.jpg

Load More