2025ರ CET ಫಲಿತಾಂಶ ಪ್ರಕಟ; ಈ ಬಾರಿ ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ

author-image
admin
Updated On
2025ರ CET ಫಲಿತಾಂಶ ಪ್ರಕಟ; ಈ ಬಾರಿ ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ
Advertisment
  • 2025/26ನೇ ಸಾಲಿನ CET ಫಲಿತಾಂಶ ಪ್ರಕಟಿಸಿದ ಸಚಿವ MC ಸುಧಾಕರ್
  • ಈ ಬಾರಿ ಒಂದು ಅಂಕ ಗ್ರೇಸ್ ಮಾರ್ಕ್ಸ್ ಯಾವ ವಿಷಯಕ್ಕೆ ಗೊತ್ತಾ?
  • ಸಿಇಟಿಯಲ್ಲಿ 2 ಲಕ್ಷ 62 ಸಾವಿರದ 195 ಮಂದಿ ಇಂಜಿನಿಯರ್ Ranking

ಬೆಂಗಳೂರು: 2025/26ನೇ ಸಾಲಿನ CET ಫಲಿತಾಂಶ ಪ್ರಕಟವಾಗಿದೆ. ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ MC ಸುಧಾಕರ್ ಅವರು ಫಲಿತಾಂಶದ ವಿವರವನ್ನು ಪ್ರಕಟಿಸಿದ್ದಾರೆ. ಕಳೆದ ಏಪ್ರಿಲ್ 15, 16, 17ರಂದು ರಾಜ್ಯದಲ್ಲಿ CET ಪರೀಕ್ಷೆ ನಡೆದಿತ್ತು.

2025/26 ಸಾಲಿನ ಸಿಇಟಿ ಪರೀಕ್ಷೆಗೆ ಸುಮಾರು 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಅರ್ಜಿ ಹಾಕಿದ್ರು. ಅದರಲ್ಲಿ ಪರೀಕ್ಷೆಗೆ 3 ಲಕ್ಷ 11 ಸಾವಿರ 91 ಹಾಜರಾಗಿದ್ದರು.

publive-image

ರಸಾಯನಶಾಸ್ತ್ರ 3 ಲಕ್ಷ 11 ಸಾವಿರ 762, ಗಣಿತಶಾಸ್ತ್ರ 3 ಲಕ್ಷ 4 ಸಾವಿರ 170, ಜೀವಶಾಸ್ತ್ರ 2 ಲಕ್ಷ 39 ಸಾವಿರದ 459 ಮಂದಿ ಹಾಜರಾಗಿದ್ದರು. ಭೌತಶಾಸ್ತ್ರಕ್ಕೆ ಮಾತ್ರ ಒಂದು ಅಂಕ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ.
ಈ ಬಾರಿಯ ಸಿಇಟಿಯಲ್ಲಿ 2 ಲಕ್ಷ 62 ಸಾವಿರದ 195 ಮಂದಿ ಇಂಜಿನಿಯರ್ ರ್ಯಾಂಕಿಂಗ್ ಪಡೆದಿದ್ದಾರೆ.

ಇದನ್ನೂ ಓದಿ: ಇಂದು CET ಫಲಿತಾಂಶ ಪ್ರಕಟ.. ರಿಸಲ್ಟ್​ ನೋಡೋದು ಹೇಗೆ? ತಿಳಿದುಕೊಳ್ಳಲು ಈ ಸ್ಟೋರಿ ಓದಿ! 

ಮೊದಲ Rank ಯಾರು? 
ಕರ್ನಾಟಕ ಚೈತನ್ಯ ಟೆಕ್ನೋ ಸ್ಕೂಲ್‌ನ ವಿದ್ಯಾರ್ಥಿ ಭವೇಶ್ ಜಯಂತಿ ಅವರು ಶೇಕಡಾ 99.06ರಷ್ಟು ಅಂಕದೊಂದಿಗೆ ಇಂಜಿನಿಯರಿಂಗ್‌ನಲ್ಲಿ ಮೊದಲ Rank ಪಡೆದಿದ್ದಾರೆ. ಸಾತ್ವಿಕ್ ಬಿ. ಬಿರಾದರ್ ಅವರು ಶೇಕಡಾ 98.83 ಅಂಕದೊಂದಿಗೆ 2ನೇ Rank ಗಳಿಸಿದ್ದಾರೆ.

B- ಫಾರ್ಮ್
ಪ್ರಥಮ - ಆತ್ರೆಯಾ ವೆಂಕಟಚಲಂ
ದ್ವಿತೀಯ - ಭವೇಶ್ ಜಯಂತಿ
ತೃತೀಯ - ಹರೀಶ್ ರಾಜ್ .ಡಿ.ವಿ

ಅಗ್ರಿಕಲ್ಚರ್
ಪ್ರಥಮ - ಅಕ್ಷಯ್ ಎಂ
ದ್ವಿತೀಯ - ಸಾಯಿಶ್ ಶರವಣ ಪಂಡಿತ್
ತೃತೀಯ - ಸುಚಿತ್.ಪಿ. ಪ್ರಸಾದ್

ಪಶುವೈದ್ಯಕೀಯ rank
ಪ್ರಥಮ- ಹರೀಶ್ ರಾಜ್
ದ್ವಿತೀಯ- ಆತ್ರೆಯಾ ವೆಂಕಟಚಲಂ
ತೃತೀಯ- ಸಫಲ್ ಎಸ್ ಶೆಟ್ಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment