/newsfirstlive-kannada/media/post_attachments/wp-content/uploads/2024/08/CET-EXAM-1.jpg)
CET ಪರೀಕ್ಷೆ ವಿಚಾರದಲ್ಲಿ ರಿಸಲ್ಟ್​ ವಿಚಾರದಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಕೆಂಗಣ್ಣಿಗೆ ಗುರಿಯಾಗಿರೋದು ಗೊತ್ತೇ ಇದೆ. ಆದ್ರೀಗ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೂ ಸಿಇಟಿ ಪರೀಕ್ಷೆ ಮಾಡುವ ಪ್ಲಾನ್​ ಹಾಕಲಾಗಿದ್ದು, ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ವೃತ್ತಿಪರ ಕೋರ್ಸ್​ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಅಂದ್ರೆ ಸಿಇಟಿ ಎಕ್ಸಾಂ ನಡೆಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೀಗ ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನೂತನ ಪ್ಲಾನ್​ಗೆ ಚಿಂತನೆ ಶುರುವಾಗಿದ್ದು, ಸಾಮಾನ್ಯ ಸ್ನಾತಕೋತ್ತರ ಕೋರ್ಸ್​ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ತಾಕೀತು ಮಾಡಿದೆ.
/newsfirstlive-kannada/media/post_attachments/wp-content/uploads/2024/08/CET-EXAM-3.jpg)
ಈ ನಿರ್ಧಾರದಿಂದ ವಿಶ್ವವಿದ್ಯಾಲಯಗಳ ಮುಕ್ತದ್ವಾರ ಮುಚ್ಚಲಿವೆ
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ ಅಭಯಾ, ಸರ್ಕಾರದ ಈ ನೀತಿಯನ್ನು ನಾವು ವಿರೋಧಿಸುತ್ತೇವೆ. ಸ್ನಾತಕೋತ್ತರ ಪದವಿ ಅಂದ್ರೆ ಅದು ಶೋಷಿತರ, ದಲಿತರ, ಬಡವರ ಪರವಾಗಿ ಮುಕ್ತವಾಗಿ ತೆರೆದುಕೊಂಡಿರಬೇಕು. ಅದು ಬಿಟ್ಟು ಪ್ರವೇಶ ಪರೀಕ್ಷೆ ಇಡೋದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/08/CET-EXAM-2.jpg)
ಖಾಸಗಿ ವಿಶ್ವವಿದ್ಯಾಲಯಗಳು ಈ ಶೈಕ್ಷಣಿಕ ವರ್ಷದಿಂದ ಸಿಇಟಿ ಮೂಲಕ ಪರೀಕ್ಷೆ ನಡೆಸುವ ಸಾಧ್ಯತೆ ಇದ್ದು, ಇದ್ರ ಆಧಾರದ ಮೇಲೆಯೇ ಪ್ರವೇಶಾತಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪಿಜಿ ಸೀಟುಗಳಲ್ಲಿ 40 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಸರ್ಕಾರಕ್ಕೆ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹೀಗಾಗಿ, ಅಧಿಕೃತವಾಗಿ ಕೆಲವೇ ದಿನಗಳಲ್ಲಿ ಈ ಬಗ್ಗೆ ಆದೇಶ ಪಾಸ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: PSI ಪರಶುರಾಮ ಸಾವಿನ ಬೆನ್ನಲ್ಲೇ CCB ಇನ್ಸ್‌ಪೆಕ್ಟರ್ ನಿಗೂಢ ಸಾವು; ಅಸಲಿ ಕಾರಣವೇನು?
ಆದ್ರೆ, ಈ ಪ್ಲಾನ್​ ಜಾರಿಯಾದಲ್ಲಿ ಉನ್ನತ ಶಿಕ್ಷಣ ಪ್ರವೇಶಾತಿಯಿಂದ ವಿದ್ಯಾರ್ಥಿಗಳು ದೂರ ಉಳಿಯುವ ಆತಂಕ ಹೆಚ್ಚಾಗಿದೆ. ಜೊತೆಗೆ ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ತಾಂಡವವಾಡುತ್ತಿರುವ ಕೋಚಿಂಗ್ ಲಾಬಿಗಳಿಗೆ ಅನೂಕೂಲ ಅಂತ ವಿದ್ಯಾರ್ಥಿಗಳು ಕಿಡಿ ಕಾರಿದ್ದಾರೆ.
ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು..?
ಇದೇ ವಿಚಾರವಾಗಿ ಮಾತನಾಡಿದ ಮತ್ತೊಬ್ಬ ವಿದ್ಯಾರ್ಥೀ, ಈಗಾಗಲೇ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಆಗಲೇ ಕಡಿಮೆಯಾಗಿದೆ. ಎಂಟರನ್ಸ್ ಎಕ್ಸಾಂ ಇಡೋದ್ರಿಂದ,ಇಂಜಿನಿಯರಿಂಗ್ ಮೆಡಿಕಲ್ ಎಕ್ಸಾಂಗಳಿಗೆ ಅಂತ ಲಕ್ಷ, ಲಕ್ಷ ಹಣ ಪೀಕುವ ಕೋಚಿಂಗ್ ಸೆಂಟರ್​ಗಳು ಇಲ್ಲೂ ಕೂಡ ಬರಲಿವೆ. ದುಡ್ಡಿಲ್ಲದ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಹೇಳಿದ್ದಾರೆ
ಯಾವುದೇ ಕಾರಣಕ್ಕೂ ವಿಸಿಗಳು ಈ ಹೊಸ ರೂಲ್ಸ್ ಒಪ್ಪಬಾರದು ಅನ್ನೋದು ವಿದ್ಯಾರ್ಥಿಗಳ ಆಗ್ರಹ. ಆದ್ರೆ ಈ ಶೈಕ್ಷಣಿಕ ವರ್ಷದಿಂದಲೇ ರೂಲ್ಸ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us