newsfirstkannada.com

ವಿದ್ಯಾರ್ಥಿಗಳಿಗೆ ಶುರುವಾಯ್ತು ಮತ್ತೊಂದು ತಲೆನೋವು.. ಈ ವರ್ಷದಿಂದಲೇ PG ಕೋರ್ಸ್​ಗಳಿಗೂ CET ಪರೀಕ್ಷೆ ನಡೆಸೋ ಸಾಧ್ಯತೆ

ಪ್ರಾತಿನಿಧಿಕ ಚಿತ್ರ

Share :

Published August 22, 2024 at 9:00am

Update August 22, 2024 at 10:20am

    ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನೂತನ ಪ್ಲಾನ್​ಗೆ ಚಿಂತನೆ

    ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ತಾಕೀತು

    ಕೆಲವೇ ದಿನಗಳಲ್ಲಿ ಈ ಆದೇಶ ಪಾಸ್ ಆಗುವ ಸಾಧ್ಯತೆ

CET ಪರೀಕ್ಷೆ ವಿಚಾರದಲ್ಲಿ, ರಿಸಲ್ಟ್​ ವಿಚಾರದಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಕೆಂಗಣ್ಣಿಗೆ ಗುರಿಯಾಗಿರೋದು ಗೊತ್ತೇ ಇದೆ. ಆದರೀಗ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ ಮಾಡುವ ಪ್ಲಾನ್​ ಹಾಕಲಾಗಿದ್ದು, ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೃತ್ತಿಪರ ಕೋರ್ಸ್​ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಅಂದ್ರೆ ಸಿಇಟಿ ಎಕ್ಸಾಂ ನಡೆಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೀಗ ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನೂತನ ಪ್ಲಾನ್​ಗೆ ಚಿಂತನೆ ಶುರುವಾಗಿದ್ದು, ಸಾಮಾನ್ಯ ಸ್ನಾತಕೋತ್ತರ ಕೋರ್ಸ್​ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ತಾಕೀತು ಮಾಡಿದೆ.

ಇದನ್ನೂ ಓದಿ: ಪ್ರೀತ್ಸೆ ಪ್ರೀತ್ಸೆ ಅಂತ 38 ವರ್ಷದ ಮಹಿಳೆ ಹಿಂದೆ ಬಿದ್ದ 20ರ ಯುವಕ.. ಆ ಮೇಲೆ ಆಗಿದ್ದೆ ಫುಲ್​ ಥ್ರಿಲ್ಲಿಂಗ್

ಖಾಸಗಿ ವಿಶ್ವವಿದ್ಯಾಲಯಗಳು ಈ ಶೈಕ್ಷಣಿಕ ವರ್ಷದಿಂದ ಸಿಇಟಿ ಮೂಲಕ ಪರೀಕ್ಷೆ ನಡೆಸುವ ಸಾಧ್ಯತೆ ಇದ್ದು, ಇದರ ಆಧಾರದ ಮೇಲೆಯೇ ಪ್ರವೇಶಾತಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪಿಜಿ ಸೀಟುಗಳಲ್ಲಿ 40ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಸರ್ಕಾರಕ್ಕೆ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹೀಗಾಗಿ, ಅಧಿಕೃತವಾಗಿ ಕೆಲವೇ ದಿನಗಳಲ್ಲಿ ಈ ಬಗ್ಗೆ ಆದೇಶ ಪಾಸ್ ಆಗುವ ಸಾಧ್ಯತೆ ದಟ್ಟವಾಗಿದೆ.

ಆದ್ರೆ, ಈ ಪ್ಲಾನ್​ ಜಾರಿಯಾದಲ್ಲಿ ಉನ್ನತ ಶಿಕ್ಷಣ ಪ್ರವೇಶಾತಿಯಿಂದ ವಿದ್ಯಾರ್ಥಿಗಳು ದೂರ ಉಳಿಯುವ ಆತಂಕ ಹೆಚ್ಚಾಗಿದೆ. ಜೊತೆಗೆ ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ತಾಂಡವವಾಡುತ್ತಿರುವ ಕೋಚಿಂಗ್ ಲಾಬಿಗಳಿಗೆ ಅನೂಕೂಲ ಅಂತ ವಿದ್ಯಾರ್ಥಿಗಳು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಗಂಡ-ಹೆಂಡತಿ ಜಗಳ ಕೊ*ಲೆಯಲ್ಲಿ ಅಂತ್ಯ.. ಸ್ಕ್ರೂಡ್ರೈವರ್​ನಿಂದ ಚುಚ್ಚಿ, ಕೊಡಲಿಯಿಂದ ಕೊಚ್ಚಿ ಕೊಂ*ದೇ ಬಿಟ್ಟ

ಯಾವುದೇ ಕಾರಣಕ್ಕೂ ವಿಸಿಗಳು ಈ ನಯಾ ರೂಲ್ ಒಪ್ಪಬಾರದು ಅನ್ನೋದು ವಿದ್ಯಾರ್ಥಿಗಳ ಆಗ್ರಹ. ಆದ್ರೆ ಈ ಶೈಕ್ಷಣಿಕ ವರ್ಷದಿಂದಲೇ ರೂಲ್ಸ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳಿಗೆ ಶುರುವಾಯ್ತು ಮತ್ತೊಂದು ತಲೆನೋವು.. ಈ ವರ್ಷದಿಂದಲೇ PG ಕೋರ್ಸ್​ಗಳಿಗೂ CET ಪರೀಕ್ಷೆ ನಡೆಸೋ ಸಾಧ್ಯತೆ

https://newsfirstlive.com/wp-content/uploads/2024/08/Exam.jpg

Load More