newsfirstkannada.com

CET ರಿಸಲ್ಟ್ ಔಟ್.. ಮೊದಲ 3 ಸ್ಥಾನ ಪಡೆದುಕೊಂಡ ಸಿಲಿಕಾನ್ ಸಿಟಿ ಪ್ರತಿಭೆಗಳು

Share :

Published June 2, 2024 at 8:41am

  ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಱಂಕಿಂಗ್ ಪಡೆದ ಅಭ್ಯರ್ಥಿಗಳು

  ಏಪ್ರಿಲ್ 18, 19ರಂದು ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪರೀಕ್ಷೆ

  ಬಿ.ಇ, ಬಿಎಸ್ಸಿ (ಕೃಷಿ)ಗೆ ತಲಾ 2.15 ಲಕ್ಷ ಅರ್ಹತೆ ಪಡೆದ ಅಭ್ಯರ್ಥಿಗಳು

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET-2024)ಯ ಫಲಿತಾಂಶ ಪ್ರಕಟಿಸಿದೆ. ಬಿ.ಇ, ಬಿಎಸ್ಸಿ (ಕೃಷಿ)ಗೆ ತಲಾ 2.15 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆ ಮೂಲಕ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚುನಾವಣೋತ್ತರ ಲೆಕ್ಕಾಚಾರ; ಬಿಜೆಪಿ ನೇತೃತ್ವದ ಎನ್​ಡಿಎ 400 ಸೀಟು ಗೆಲ್ಲೋದು ಗ್ಯಾರಂಟಿ!

2024-25ನೇ ಸಾಲಿನ ಕೃಷಿ ವಿಜ್ಞಾನ, ಬಿ-ಫಾರ್ಮ್‌, ವೆಟರಿನರಿ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಇದು ಏಪ್ರಿಲ್​ 18 ಮತ್ತು 19ರಂದು ನಡೆಸಲಾಗಿತ್ತು. ಸದ್ಯ ಈ ಸಿಇಟಿ ಪರೀಕ್ಷೆಯ ರಿಸಲ್ಟ್ ಅನ್ನು ಕೆಇಎ ರಿಲೀಸ್ ಮಾಡಿದೆ. ಫಲಿತಾಂಶ ನೋಡಲು ಇಚ್ಚೀಸುವವರು ಪ್ರಾಧಿಕಾರದ ಜಾಲತಾಣ http://kea.kar.nic.in ನಲ್ಲಿ ನೋಡಬಹುದು.

ಒಟ್ಟು ಈ ಬಾರಿ ಪರೀಕ್ಷೆಗೆ 3,49,653 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಅಂತಿಮವಾಗಿ 3,10,314 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಸಿಇಟಿ ಪರೀಕ್ಷೆಯಲ್ಲಿ ಎಲ್ಲ 4 ವಿಷಯಗಳಲ್ಲೂ ಪಠ್ಯಕ್ಕೆ ಹೊರತಾದ 50 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಷಯ ತಜ್ಞರ ನಿರ್ದೇಶನದ ಮೇರೆಗೆ ಈ ಪ್ರಶ್ನೆಗಳನ್ನು ಮೌಲ್ಯಮಾಪನದ ಸಂದರ್ಭದಲ್ಲಿ ಪರಿಗಣಿಸಿಲ್ಲ. ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ. ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗಿದೆ. 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್​ಗೆ, 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.

ಸಿಇಟಿಯಲ್ಲಿ ರ್ಯಾಂಕಿಂಗ್ ಪಡೆದಿರುವ ಸಿಲಿಕಾನ್ ಸಿಟಿ ವಿದ್ಯಾರ್ಥಿಗಳು

 • ಮೊದಲ ಱಂಕ್- ಬೆಂಗಳೂರಿನ ಹರ್ಷ ಕಾರ್ತಿಕೇಯ ​
 • ಎರಡನೇ ಱಂಕ್​- ಬೆಂಗಳೂರಿನ ಮನೋಜ್​ ಸೋಹನ್​
 • ಮೂರನೇ ಱಂಕ್- ಬೆಂಗಳೂರಿನ ಅಭಿನವ್.ಪಿ.ಜೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CET ರಿಸಲ್ಟ್ ಔಟ್.. ಮೊದಲ 3 ಸ್ಥಾನ ಪಡೆದುಕೊಂಡ ಸಿಲಿಕಾನ್ ಸಿಟಿ ಪ್ರತಿಭೆಗಳು

https://newsfirstlive.com/wp-content/uploads/2024/06/CET_TOPERS.jpg

Load More