newsfirstkannada.com

×

ಕಾವಿ ತೊಟ್ಟಿಲ್ಲ, ಮಠ ಕಟ್ಟಿಲ್ಲ.. ಜಸ್ಟ್​ ಮುಟ್ಟಿದ್ರೆ ಎಲ್ಲಾ ನೋವು ಮಾಯ! ಇದು ‘ಚಡ್ಡಿ ಬಾಬಾ’ನ ಪವಾಡ

Share :

Published October 21, 2024 at 2:00pm

Update October 21, 2024 at 2:01pm

    ಅಣ್ಣಾವ್ರ ಹಾಡುಗಳೇ ಅಚ್ಚುಮೆಚ್ಚು, ಎಲ್ಲರನ್ನ ಸಂತೈಸಲ್ಲ ಈ ಬಾಬಾ!

    ಚಡ್ಡಿ ಬಾಬಾ ಹೇಳಿದಂಗೆ ಉರುಳಾಡಿದರೆ ಖಾಯಿಲೆ ವಾಸಿನಾ?

    ಬಾಬಾ ಮುಟ್ಟಿದ್ರೆ ಸೊಂಟ ನೋವು ನಿಜವಾಗಿಯೂ ಮಾಯವಾಗುತ್ತಾ?

ಇದು ಕಲಿಗಾಲ. ಯಾರ ಕೈಗುಣ ಏನು ಬೇಕಾದ್ರೂ ಮಾಡಬಹುದು. ಹಾಗಾಗಿಯೇ ಬೀದಿ ಬೀದಿಗೊಬ್ಬ ಬಾಬಾ. ಸಂದಿಗೊಬ್ಬ ಸ್ವಾಮೀಜಿ ಹುಟ್ಟಿಕೊಂಡಿದ್ದಾರೆ. ಆದರೀಗ ನ್ಯೂಸ್​​ ಫಸ್ಟ್​​ ಹೇಳುತ್ತಿರುವ ಬಾಬಾ ಸಾಮಾನ್ಯನಲ್ಲ. ಆತ ಬಿಗಿದಪ್ಪಿಕೊಂಡರೆ ಮೈಯಲ್ಲಿರೋ ಕಾಯಿಲೆಗಳೇ ಓಡಿ ಹೋಗುತ್ತವಂತೆ. ಈ ಬಿಗಿದಪ್ಪೋ ಬಾಬಾನಿಗಾಗಿ ಜನ ಸಾಲುಗಟ್ಟಿ ನಿಂತಿದ್ದಾರೆ. ನಂಬೋ ಜನರಿದ್ರೆ ನಂಬಿಸೋ ಮಂದಿಯೂ ಬೇಜಾನ್ ಇರ್ತಾರೆ ಅನ್ನೋದಕ್ಕೆ ಈ ಸ್ಟೋರಿ ಅಪ್ಪಟ ಸಾಕ್ಷಿ.

ಗುರುಪ್ರಸಾದ್ ನಿರ್ದೇಶನದ ಮಠ ಸಿನಿಮಾ ಢೋಂಗಿ ಬಾಬಾಗಳ, ಸೋಕಾಲ್ಡ್​ ಸ್ವಾಮೀಜಿಗಳ ಬಗ್ಗೆ ಕಟುವಾಗಿಯೇ ವಿಮರ್ಶೆ ಮಾಡಿತ್ತು. ಅದರಲ್ಲೂ ಈ ಗಜ್ಜಿ ಬಾಬಾನ ಲೈಫ್​​ ಬಾಯ್​ ಸೋಪ್ ಮೂಲಕ ಸಖತ್ತಾಗಿಯೇ ಭಟ್ಟಂಗಿ ಬಾಬಾಗಳ ಬೆತ್ತಲೆ ಜಗತ್ತನ್ನು ತೋರಿಸಿತ್ತು. ಆದ್ರೆ, ಇಂಥಾ ಬಾಬಾಗಳ ಮಧ್ಯೆಯೂ ಒಂದಷ್ಟು ಉತ್ತಮ ಆಧ್ಯಾತ್ಮಿಕ ನಾಯಕರ ಲೆಕ್ಕವೂ ಸಿಗುತ್ತದೆ. ಆದರೆ, ಇಲ್ಲೊಬ್ಬ ಬಾಬಾ ಬಿಗಿದಪ್ಪಿಕೊಂಡು ಕಾಯಿಲೆಗಳನ್ನು ಗುಣಪಡಿಸುತ್ತಿದ್ದಾರೆ. ಜನ ಈತನನ್ನ ಚಡ್ಡಿ ಬಾಬಾ ಅಂತಲೂ ಕರೀತಿದ್ದಾರೆ.

ಯುವಕನ ಬಿಗಿದಪ್ಪಿ ಬಾಬಾ ಮಾಡಿದ್ರಾ ಮಹಾ ಪವಾಡ?

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಅನ್ನೋ ಅಣ್ಣಾವ್ರ ಹಾಡು ಒಂದು ಕಡೆ. ಮತ್ತೊಂದು ಕಡೆ ಕೈಯಲ್ಲಿ ಫೋನ್ ಹಿಡಿದುಕೊಂಡು ಟೀ ಶರ್ಟ್​ ತೊಟ್ಟ ಯುವಕನನ್ನು ಅಪ್ಪಿಕೊಂಡು ಸಂತೈಸೋ ಕೈ ಮತ್ತೊಂದು ಕಡೆ. ಹೀಗೆ ನೋವಿನಿಂದ ಬಂದ ಒಬ್ಬೊಬ್ಬರನ್ನೇ ಮಾತಾಡಿಸುತ್ತಾ ಬಿಗಿದಪ್ಪಿಕೊಳ್ಳುತ್ತಾರೆ ಈ ಚಡ್ಡಿ ಬಾಬಾ.

ಈ ಚಡ್ಡಿ ಬಾಬಾನಿಗೂ ಅಣ್ಣಾವ್ರ ಹಾಡಿಗೂ ಸಂಬಂಧ ಇದ್ಯಾ? ಅಷ್ಟಕ್ಕೂ ಹೀಗೆ ಬಿಗಿದಪ್ಪಿಕೊಂಡರೆ ಕಾಯಿಲೆಗಳು ಓಡಿ ಹೋಗುತ್ತವಾ? ಬಿಗಿದಪ್ಪುತ್ತಲೇ ಈ ಸ್ವಾಮೀಜಿ ಪವಾಡ ಮಾಡ್ತಾರಾ? ಇಷ್ಟೆಲ್ಲಾ ಪ್ರಶ್ನೆಗಳ ಮಧ್ಯೆಯೇ ಒಂದಷ್ಟು ಜನರು ಇದೇ ಚಡ್ಡಿ ಬಾಬಾನಿಗಾಗಿ ಉರುಳು ಸೇವೆ ಕೂಡ ಮಾಡುತ್ತಿದ್ದಾರೆ.

ಚಡ್ಡಿ ಬಾಬಾ ಭಾರೀ ಫೇಮಸ್ಸು

ಹಳ್ಳಿಕಟ್ಟೆ ಮೇಲೆ ಸೀದಾಸಾದಾ ಸಾಮಾನ್ಯನಂತೆ ಕೂರುವ, ನೋಡಿದ ಕೂಡಲೇ ಕೆಲವರ ಬಳಿಯಷ್ಟೇ ಹೋಗಿ ಸಂತೈಸುವ ಈ ಅಜ್ಜನ ಬಗ್ಗೆಯೇ ಎಲ್ಲರೂ ಮಾತಾಡುತ್ತಿದ್ದಾರೆ. ಕಾವಿ ತೊಡದಿದ್ದರೂ, ಮಠ ಕಟ್ಟದಿದ್ದರೂ ಜನರ ಬಾಯಲ್ಲಿ ಚಡ್ಡಿ ಬಾಬಾ ಚಡ್ಡಿ ಬಾಬಾ ಅಂತ ಕರೆಸಿಕೊಳ್ಳುತ್ತಿದ್ದಾರೆ.

ಕೆಲವರು ಪ್ರೀತಿಯಿಂದ ತಾತ ಅಂತಾರೆ. ಅಷ್ಟೇ ಅಲ್ಲ, ಹತ್ತಾರು ಮಂದಿಗೆ ಕಾಯಿಲೆ ಗುಣಪಡಿಸಿ ಇವ್ರು ಅಚ್ಚರಿ ಮೂಡಿಸ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲಿ ಚಕಿತಗೊಳಿಸೋ ಸಂಗತಿ ಏನಂದ್ರೆ, ಅಣ್ಣಾವ್ರು ನಟಿಸಿರೋ ಮೂರು ಸಿನಿಮಾ ಹಾಡುಗಳನ್ನಷ್ಟೇ ಇವ್ರು ಪದೇ ಪದೆ ಕೇಳ್ತಾರೆ. ಮೈಸೂರು ದಸರಾ ಎಷ್ಟೊಂದು ಸುಂದರ ಅನ್ನೋದು ಒಂದು ಹಾಡಾದ್ರೆ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಅನ್ನೋದು ಮತ್ತೊಂದು ಹಾಡು. ಮುತ್ತಿನಂಥಾ ಮಾತೊಂದು ಗೊತ್ತೇನಮ್ಮ ಅನ್ನೋ ಹಾಡೂ ಕೂಡ ಈತನಿಗೆ ಪಂಚಪ್ರಾಣ. ಈ ಹಾಡುಗಳಿಗೂ, ವಿಸ್ಮಯಕಾರಿಯಾಗಿ ಕಾಯಿಲೆ ಗುಣಪಡಿಸೋ ಚಡ್ಡಿ ಬಾಬಾಗೂ ಸಂಬಂಧ ಏನು ಅನ್ನೋ ಅನುಮಾನ ಕೂಡ ಈ ಜನರನ್ನು ಕಾಡುತ್ತಲೇ ಇದೆ. ಈತ ಇಲ್ಲಿ ಮಾಡ್ತಿರೋ ಒಂದೊಂದೇ ಪವಾಡ ಇದೀಗ ಈ ಭಾಗದಲ್ಲಿ ಮನೆ ಮಾತಾಗಿದೆ.

ಕಾವಿ ತೊಡದ ಸಂತನ ಚಡ್ಡಿ ಬಾಬಾ ಅನ್ನೋದೇಕೆ?

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರದಲ್ಲಿ ಇದೀಗ ಚಡ್ಡಿ ಬಾಬಾ ಹವಾ ಜೋರಾಗಿ ನಡೀತಿದೆ. ಈ ಅಜ್ಜ ಹೇಳೋ ಮಾತುಗಳು ನಿಜ ಆಗ್ತಿವೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಕಾವಿ ತೊಡದ ಸಂತನನ್ನು ಚಡ್ಡಿ ಬಾಬಾ ಅನ್ನೋದೇಕೆ ಗೊತ್ತಾ? ಇಲ್ಲೇ ಇರೋದು ಅಸಲಿ ವಿಚಾರ. ಸದಾ ಚಡ್ಡಿ ಲುಂಗಿಯಲ್ಲೇ ಕಾಣಿಸೋ ಈತನನ್ನ ಮುದಲಿಗೆ ಮಾನಸಿಕ ಅಸ್ವಸ್ಥ ಅಂತಲೇ ಅಂದ್ಕೊಂಡಿದ್ರಂತೆ. ಯಾರೋ ಒಬ್ಬರನ್ನು ಈ ಬಾಬಾ ಸ್ಪರ್ಶಿಸಿದ ಕೂಡಲೇ ಆತನ ಸಮಸ್ಯೆಗಳೇ ದೂರವಾದವಂತೆ. ಸೊಂಟ ನೋವಿದ್ರೆ ಓಡಿ ಹೋಗುತ್ತಂತೆ. ಕಾಲು ನೋವು, ಮಂಡಿ ನೋವಿಗೆಲ್ಲಾ ಇವರ ಸ್ಪರ್ಶಾನೆ ರಾಮಬಾಣವಂತೆ.ಆ ದಿನದಿಂದ ಇಲ್ಲಿಯತನಕ ಈತನ ಒಂದು ಸ್ಪರ್ಶಕ್ಕಾಗಿ ಜನ ಸಾಲು ಗಟ್ಟಿ ನಿಂತು ಚಡ್ಡಿ ಬಾಬಾ ಕೀ ಜೈ ಅಂತಿದ್ದಾರೆ.

ಎದ್ದು ನಿಲ್ಲೋದಕ್ಕೂ ಆಗದ ವ್ಯಕ್ತಿ ಕೂಡ ಬಾಬಾನದ್ದು ಪವಾಡ ಅಂತಿದ್ದಾನೆ!

ಹುಲಿಗೆಪ್ಪ ಅನ್ನೋ 57 ವರ್ಷದ ಅಜ್ಜ ಚಡ್ಡಿ ತಾತ ನಿಜಕ್ಕೂ ಪವಾಡ ಪುರುಷ ಅಂತಿದ್ದಾರೆ. ಇವರು ಹಲವು ವರ್ಷಗಳಿಂದ ಎದ್ದು ನಿಲ್ಲೋದಕ್ಕೂ ಆಗದಷ್ಟು ನೋವು ಸಂಕಟ ಅನುಭವಿಸುತ್ತಿದ್ದರಂತೆ. ಒಮ್ಮೆ ಇದೇ ಚಡ್ಡಿ ತಾತನನ್ನ ಹುಲಿಗೆಪ್ಪಜ್ಜನ ಮಗ ಮನೆಗೆ ಕರೆತಂದಿದ್ದರಂತೆ. ಆಗ ತಾತ ಇವ್ರನ್ನ ನೋಡಿ ಹೊರಕ್ಕೆ ಕರೆದುಕೊಂಡು ಬಂದು ಬೀದಿಯಲ್ಲಿ ಉರುಳಾಡುವಂತೆ ಹೇಳಿದ್ರಂತೆ. ಹಾಗೆ ಉರುಳಾಡಿದ್ದೇ ತಡ ಕೆಲವೇ ನಿಮಿಷಗಳಲ್ಲಿ ಹುಲಿಗೆಪ್ಪ ತನಗೆ ಯಾವುದೇ ದೌರ್ಬಲ್ಯವೇ ಇಲ್ಲ ಅನ್ನೋ ರೀತಿ ಸಲೀಸಾಗಿ ಓಡಾಡೋಕೆ ಶುರು ಮಾಡಿದ್ರಂತೆ. ಹಾಗಾಗಿಯೇ ಚಡ್ಡಿ ತಾತ ಮಹಾನ್ ಪವಾಡ ಪುರುಷ ಅಂತ ಹುಲಿಗೆಪ್ಪ ಅಜ್ಜ ಹೇಳುತ್ತಿದ್ದಾರೆ. ಮೊದಲಿಗೆ ಇದೇ ಹುಲಿಗೆಪ್ಪನೇ ಅದ್ಯಾವ ತಾತ ನಡಿಯೋ ಅಂತ ಗೇಲಿ ಮಾಡಿದ್ರಂತೆ. ಆದ್ರೀಗ, ಚಡ್ಡಿ ತಾತ ಅಂದ್ರೆ ಅತೀವ ಭಕ್ತಿ ಭಾವವನ್ನು ತೋರಿಸುತ್ತಿದ್ದಾರೆ.

ತಾತನಿಂದಾಗಿಯೇ ನಾನು ಆರಾಮಾಗಿದ್ದೀನಿ. ಇದೀಗ ಹುಡುಗನಂತೆಯೇ ಕೆಲಸ ಮಾಡಬಲ್ಲೇ ಅಂತ ಹುಲಿಗೆಪ್ಪ ಸಹ ಚಡ್ಡಿ ಬಾಬಾ ಕೀ ಜೈ ಅನ್ನೋ ಮಾತನ್ನು ಹೇಳುತ್ತಿದ್ದಾರೆ.

ಮಂಡಿನೋವಿನಿಂದ ಅಳುತ್ತಿದ್ದ ಅಮ್ಮ ಚಕ್ಕಂಬಕ್ಕಳ ಹಾಕುವಂತಾಯ್ತು!

ಧರ್ಮಸಾಗರ ಗ್ರಾಮದ ವೀರೇಶ್​​ ಎಂಬವರ ತಾಯಿ ಹಲವು ವರ್ಷಗಳಿಂದ ಮಂಡಿ ನೋವು ಅಂತ ಅಕ್ಷರಶಃ ಗೋಳಾಡುತ್ತಿದ್ದರಂತೆ. ರಾತ್ರಿಯಾದ್ರೆ ಸಾಕು ಮಗನೇ ನನ್ನ ಕೈಯಲ್ಲಿ ಆಗುತ್ತಿಲ್ಲ ಅಂತ ಅಳುತ್ತಿದ್ದರಂತೆ. ಯಾರೋ ಚಡ್ಡಿ ತಾತನ ಬಗ್ಗೆ ಹೇಳಿದ್ದಕ್ಕೆ ವೀರೇಶ್​​ ಸಹ ತಮ್ಮ ತಾಯಿಯನ್ನು ಚಡ್ಡಿ ತಾತನ ಎದುರು ನಿಲ್ಲಿಸಿ ಸಂಕಟ ಹೇಳಿಕೊಂಡಿದ್ದರಂತೆ. ಆ ಕ್ಷಣ ಚಡ್ಡಿ ತಾತ ಸ್ಪರ್ಶಿಸಿದ ಕೆಲವೇ ನಿಮಿಷಗಳಲ್ಲ ವೀರೇಶ್​ ಅವರ ತಾಯಿ ಅಚ್ಚರಿ ಎನ್ನುವಂತೆ ವರ್ತಿಸಿದ್ರು ಅಂತಿದ್ದಾರೆ. ಅಷ್ಟೇ ಅಲ್ಲ, ಇವತ್ತು ನಮ್ಮ ತಾಯಿ ಚಕ್ಕಂಬಕ್ಕಳ ಹಾಕಿ ಕೂರುತ್ತಾರೆ. ಇದಕ್ಕೆಲ್ಲಾ ಕಾರಣ ಚಡ್ಡಿ ತಾತ ಅಂತ ವೀರೇಶ್​ ಹೆಮ್ಮೆಯಿಂದ ಹೇಳುತ್ತಾರೆ.

ಹಾಗಂತ ಚಡ್ಡಿ ತಾತ ಎಲ್ಲರನ್ನೂ ಮುಟ್ಟೋದಿಲ್ಲವಂತೆ. ಅದರಲ್ಲೂ ಹೆಣ್ಣು ಮಕ್ಕಳು ಅಂದ್ರೆ ಕಾಲಿಗೆ ಬಿದ್ರೂ ಬೇಡ ಅಂತಾರಂತೆ. ಇಂಥ ಚಡ್ಡಿ ತಾತ ಇದೀಗ ವಿಜಯನಗರ ಜಿಲ್ಲೆಯಾದ್ಯಂತ ಜನಕ್ಕೆ ಬಹುದೊಡ್ಡ ಬಾಬಾನಂತೆಯೇ ಕಾಣುತ್ತಿದ್ದಾರೆ. ಇದೆಲ್ಲಕ್ಕಿಂತಲ್ಲೂ ಅಚ್ಚರಿಯ ಸಂಗತಿ ಚಡ್ಡಿ ಬಾಬಾ ಮಾಡ್ತಿರೋ ಪವಾಡಗಳು. ಕೈಯಲ್ಲೊಂದು ಮೊಬೈಲ್ ಹಿಡ್ಕೊಂಡು, ಅದರಲ್ಲಿ ಸದಾ ಅಣ್ಣಾವ್ರ ಹಾಡುಗಳನ್ನು ಕೇಳಿಕೊಂಡು ಓಡಾಡುತ್ತಿದ್ದಾರೆ. ಇಂಥಾ ಸೀದಾಸಾದಾ ಚಡ್ಡಿ ತಾತಾ ಎಲ್ಲಿಂದ ಬಂದ? ಈತನ ಹೆಸರು ಏನು? ಅದ್ಯಾವ ಕಾರಣಕ್ಕೆ ಈತ ಮುಟ್ಟಿದ್ರೆ, ಮಣ್ಣಲ್ಲಿ ಉರುಳಿಸಿದ್ರೆ ಕಾಯಿಲೆ ಗುಣವಾಗುತ್ತೆ? ಈ ಬಗ್ಗೆ ಈ ಜನಕ್ಕೂ ಗೊತ್ತಿಲ್ಲ. ಅಲ್ಲದೇ, ಈ ಅಜ್ಜನ ಎಲ್ಲಿರ್ತಾರೆ? ಏನು ಮಾಡ್ತಾರೆ? ಇದೆಲ್ಲವೂ ಸಹ ವಿಸ್ಮಯದಂತೆಯೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವಿ ತೊಟ್ಟಿಲ್ಲ, ಮಠ ಕಟ್ಟಿಲ್ಲ.. ಜಸ್ಟ್​ ಮುಟ್ಟಿದ್ರೆ ಎಲ್ಲಾ ನೋವು ಮಾಯ! ಇದು ‘ಚಡ್ಡಿ ಬಾಬಾ’ನ ಪವಾಡ

https://newsfirstlive.com/wp-content/uploads/2024/10/Chaddi-Baba.jpg

Load More