/newsfirstlive-kannada/media/post_attachments/wp-content/uploads/2024/11/CHAITRA_KOTTURU_GURUPRASAD.jpg)
ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಅವರ ಕುರಿತು ಕಣ್ಣೀರು ಹಾಕಿದ್ದ ನಟಿ ಚೈತ್ರಾ ಕೊಟೂರು ಅವರು ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದರು. ನನ್ನನ್ನು ಮೊದಲ ಬಾರಿಗೆ ಕೆಲಸಕ್ಕೆ ಕರೆದು, ಕೆಲಸ ಮಾಡು ಪುಟ್ಟಿ.. ಎಂದು ಹೇಳಿ ಕೆಲಸ ಕೊಟ್ಟಿದ್ದರು ಅಂತ ಗಳ ಗಳನೆ ಅಳುತ್ತಲೇ ಚೈತ್ರಾ ಕೊಟೂರು ನೋವು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಡೈರೆಕ್ಟರ್ ಗುರುಪ್ರಸಾದ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಆಗಿ ಎರಡು ದಿನ ಕಳೆದರೂ ಗುರುಪ್ರಸಾದ್ ಅವರು ಇಲ್ಲ ಎನ್ನುವುದು ನಂಬೋಕೆ ಹಾಗುತ್ತಿಲ್ಲ. ತುಂಬಾ ನೋವಾಗುತ್ತಿದೆ, ಕಷ್ಟವಾಗುತ್ತಿದೆ, ಅರಗಿಸಿಕೊಳ್ಳಲಾಗುತ್ತಿಲ್ಲ. ಕೆಟ್ಟದ್ದು, ಒಳ್ಳೆಯದು ಎಂದು ಗುರುತಿಸುವುದು ಕೆಲವೊಬ್ಬರಲ್ಲಿ ಇರುತ್ತೆ. ಅದು ಗುರುಪ್ರಸಾದ್ ಅವರಲ್ಲಿ ಇತ್ತು. ಅವರನ್ನ ಕಳೆದುಕೊಂಡು 2 ದಿನ ಆದರೂ ಅವರು ಇಲ್ಲ ಎನ್ನುವುದು ನನಗೆ ನಂಬಲು ಆಗುತ್ತಿಲ್ಲವೆಂದು ಚೈತ್ರಾ ಅವರು ಹೇಳಿದ್ದಾರೆ.
ಇದನ್ನೂ ಓದಿ:ನಿರ್ದೇಶಕ ಗುರುಪ್ರಸಾದ್ ಬಗ್ಗೆ ಬಿಗ್ಬಾಸ್ ಮಾಜಿ ಸ್ಪರ್ಧಿ ಕಣ್ಣೀರು.. ವಿಡಿಯೋದಲ್ಲಿ ಅಳುತ್ತಲೇ ನಟಿ ಹೇಳಿದ್ದು ಏನು?
ಇದನ್ನೂ ಓದಿ: ಹುಟ್ಟುಹಬ್ಬಕ್ಕೂ ಮೊದಲೇ ಜೀವ ಕಳೆದುಕೊಂಡ ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್
ಕೆಲಸದಲ್ಲಿ ಬೆರೆಯುವ ಆಸಕ್ತಿ ಇಲ್ಲದೆ ನನ್ನದೇ ಕೆಲ ಘಟನೆಗಳಿಂದ ನೊಂದು ಮನೆಯಲ್ಲಿರುವಾಗ ಗುರುಪ್ರಸಾದ್ ಸರ್ ಅವರು ಕರೆದು ಕೆಲಸ ಕೊಟ್ಟಿದ್ದರು. ನನ್ನ ಎಲ್ಲ ನೋವುಗಳನ್ನು ಮರೆಸಿ ಮತ್ತೆ ಕೆಲಸದಲ್ಲಿ ತೊಡಗುವಂತೆ ಮಾಡಿದ್ದರು. ಅವರು ತುಂಬಾ ನೆನಪಾಗುತ್ತಿದ್ದಾರೆ. ಕೆಲಸ ಮಾಡದೇ ಮನೆಯಲ್ಲಿ ಇರಬಾರದು. ಬದುಕು ದೊಡ್ಡದಾಗಿದೆ ಎಂದು ಪ್ರೋತ್ಸಾಹ ತುಂಬಿದ್ದರು ಎಂದು ಎಂದು ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ.
ಈ ವಿಡಿಯೋ ಶೇರ್ ಮಾಡಿದ್ದಲ್ಲದೇ ರಂಗನಾಯಕ ಸಿನಿಮಾ ನಿರ್ಮಾಣದ ವೇಳೆ ಕ್ಲಿಕ್ ಮಾಡಿದಂತ ಕೆಲ ಫೋಟೋಗಳನ್ನು ಚೈತ್ರಾ ಅವರು ಹಂಚಿಕೊಂಡಿದ್ದಾರೆ. ನಟ ಜಗ್ಗೇಶ್, ನಿರ್ದೇಶಕ ಗುರುಪ್ರಸಾದ್ ಅವರ ಜೊತೆ ಚೈತ್ರಾ ಕೇಕ್ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ರಂಗನಾಯಕ ಸಿನಿಮಾದಲ್ಲಿ ಚೈತ್ರಾ ಅವರು ಜಗ್ಗೇಶ್ ಅವರ ತಾಯಿಯಾಗಿ ಅಭಿನಯ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ