ಬಿಗ್​ಬಾಸ್​ ಇತಿಹಾಸದಲ್ಲೇ ಅತೀ ದೊಡ್ಡ ರೂಲ್ಸ್​ ಬ್ರೇಕ್.. ನಿಯಮಗಳಿಗೆ ಕಿಮ್ಮತ್ತು ಕೊಡದ ಚೈತ್ರ, ತ್ರಿವಿಕ್ರಂ

author-image
Veena Gangani
Updated On
ಬಿಗ್​ಬಾಸ್​ ಇತಿಹಾಸದಲ್ಲೇ ಅತೀ ದೊಡ್ಡ ರೂಲ್ಸ್​ ಬ್ರೇಕ್.. ನಿಯಮಗಳಿಗೆ ಕಿಮ್ಮತ್ತು ಕೊಡದ ಚೈತ್ರ, ತ್ರಿವಿಕ್ರಂ
Advertisment
  • ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ ಚೈತ್ರಾ ಕುಂದಾಪುರ
  • ಬಿಗ್​ಬಾಸ್​ ಸೀಸನ್​ 11ರಲ್ಲಿ ಸ್ಪರ್ಧಿಗಳು ರೂಲ್ಸ್​ ಬ್ರೇಕ್​ಗೆ ಮೈಲುಗೈ
  • ಖುಲ್ಲಂಖುಲ್ಲಾ ರೂಲ್ಸ್ ಬ್ರೇಕ್ ಮಾಡಿದ ಚೈತ್ರಾ ಹಾಗೂ ತ್ರಿವಿಕ್ರಮ್​

ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್ ಮನೆಗೆ ಮೂಲ ನಿಯಮವನ್ನೇ ಬ್ರೇಕ್​ ಮಾಡಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರಲ್ಲಿ ಸ್ಪರ್ಧಿಗಳು ಒಂದಲ್ಲಾ ಒಂದು ಬಿಗ್​ಬಾಸ್​ ಮನೆಯ ರೂಲ್ಸ್​ ಬ್ರೇಕ್​ ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಮೆಹಂದಿ ಮಾಸುವ ಮುನ್ನವೇ ಶೂಟಿಂಗ್​ ಸೆಟ್​ಗೆ ಬಂದ ಚಿನ್ನುಮರಿ ಜಾಹ್ನವಿ; ಫ್ಯಾನ್ಸ್​ ಫುಲ್​ ಖುಷ್

publive-image

ಮೈಕ್​ ಹಾಕಿಕೊಳ್ಳದೇ ಮಾತಾಡುವುದು, ಸ್ಪರ್ಧಿಗಳು ಪಿಸು ಧ್ವನಿಯಲ್ಲಿ ಮಾತಾಡುವುದು, ದೈಹಿಕವಾಗಿ ಹಲ್ಲೆ ಮಾಡುವುದು, ಮುಖ್ಯವಾಗಿ ಜೈಲಿಗೆ ಹೋಗಿರೋ ಸ್ಪರ್ಧಿಗಳು ಆಚೆ ಬರಬಾರದು, ಅಲ್ಲದೇ ರಾಗಿ ಕಂಜಿ, ನೀರು ಬಿಟ್ಟು ಯಾವ ಪದಾರ್ಥವನ್ನು ಸೇವಿಸುವಂತಿಲ್ಲ. ಆದರೆ, ಇದೀಗ ಬಿಗ್​ಬಾಸ್​ ಮನೆಯ ಮೂಲಕ ನಿಯಮವನ್ನೇ ಈ ಇಬ್ಬರು ಸ್ಪರ್ಧಿಗಳು ಬ್ರೇಕ್​ ಮಾಡಿದ್ದಾರೆ.

ಮನೆಯವರಿಂದ ಸಮವಾಗಿ ಕಳಪೆ ಪಟ್ಟವನ್ನು ಸ್ವೀಕರಿಸಿದ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್​ ಜೈಲಿಗೆ ಹೋಗಿದ್ದಾರೆ. ಇದು ಮೂರನೇ ಬಾರಿಗೆ ಚೈತ್ರಾ ಕುಂದಾಪುರ ಜೈಲಿಗೆ ಪ್ರವೇಶ ಮಾಡಿದ್ದಾರೆ. ಅಲ್ಲದೇ ತ್ರಿವಿಕ್ರಮ್​ ಇದೇ ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಹೀಗೆ ಜೈಲಿಗೆ ಈ ಇಬ್ಬರು ಪ್ರವೇಶ ಮಾಡುತ್ತಿದ್ದಂತೆ ಕ್ಯಾಪ್ಟನ್​ ಮುಂದೆಯೇ ಆಚೆ ಬರುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇದನ್ನೇ ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ:ಜೈಲಿಂದ ಬರ್ತಿದ್ದಂತೆ ಅಲ್ಲು ಅರ್ಜುನ್​​ ಮನೆಗೆ ವಿಜಯ್ ದೇವರಕೊಂಡ ದೌಡು; ಯಾರೆಲ್ಲಾ ಬಂದಿದ್ರು?

publive-image

ಕಲರ್ಸ್​ ಕನ್ನಡ ರಿಲೀಸ್​ ಮಾಡಿದ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್​ ಜೈಲಿನಿಂದ ಆಚೆ ಹೋಗಿ ರೂಲ್ಸ್​ ಬ್ರೇಕ್​ ಮಾಡೋಣ ಅಂತ ಹೇಳಿದ್ದಾರೆ. ಇದಾದ ಬಳಿಕ ತಡ ಮಾಡದೇ ತ್ರಿವಿಕ್ರಮ್​ ಹಾಗೂ ಚೈತ್ರಾ ಇಬ್ಬರು ಜೈಲಿನಿಂದ ಆಚೆ ಬಂದಿದ್ದಾರೆ. ಇಂದಿನ ಎಪಿಸೋಡ್​ನಲ್ಲಿ ಈ ಇಬ್ಬರಿಗೆ ಕ್ಯಾಪ್ಟನ್​ ಯಾವ ಶಿಕ್ಷೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment