/newsfirstlive-kannada/media/post_attachments/wp-content/uploads/2024/11/BBK1143.jpg)
ಬಿಗ್​ಬಾಸ್​ ಸೀಸನ್​ 11ರ ಸ್ಪರ್ಧಿಯಾಗಿರೋ ಚೈತ್ರಾ ಕುಂದಾಪುರ ಅವರು ಮಾಡಿದ ತಪ್ಪಿಗೆ ಇಂದಿನ ಪಂಚಾಯ್ತಿಯಲ್ಲಿ ತಕ್ಕ ಶಿಕ್ಷೆಯಾಗಿದೆ ಅಂತಲೇ ಹೇಳಬಹುದು. ಬಿಗ್​ಬಾಸ್​ ಮನೆಯಲ್ಲಿ ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲೇಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:BBK11: ಉಗ್ರಂ ಮಂಜುಗೆ ಹೊರಗಿನ ಗುಟ್ಟು ಹೇಳಿದ ಚೈತ್ರಾ ಕುಂದಾಪುರ; ಏನದು?
/newsfirstlive-kannada/media/post_attachments/wp-content/uploads/2024/11/BBK1137.jpg)
ಆದರೆ ಸುಮ್ಮನೆ ಇರದ ಚೈತ್ರಾ ಕುಂದಾಪುರ ಅವರು ಡಾಕ್ಟರ್ ಹಾಗೂ ನರ್ಸ್‌ಗಳ ಬಾಯಲ್ಲಿ ಕಂಟೆಸ್ಟೆಂಟ್‌ಗಳ ಬಗ್ಗೆ ಒಪೀನಿಯನ್ ಪಡೆದುಕೊಂಡಿದ್ದಾರೆ. ಅಲ್ಲದೇ ಬಿಗ್​ಬಾಸ್​ ಮನೆಗೆ ಮತ್ತೆ ವಾಪಸ್​ ಆದಾಗ ಎಲ್ಲರ ಮುಂದೆ ಒಂದೊಂದಾಗಿ ಅಭಿಪ್ರಾಯವನ್ನು ಹೇಳಿದ್ದಾರೆ. ಮೊದಲು ಈ ಮೂಲಕ ಬಿಗ್​ಬಾಸ್​ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ಈ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಚೈತ್ರಾಗೆ ಚಳಿ ಬಿಡಿಸಿದ್ದಾರೆ. ಇದರಿಂದ ಮನನೊಂದ ಚೈತ್ರಾ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಹೇಳುವ ಉದ್ದೇಶವೇನು ಅಂತ ಕಿಚ್ಚ ಸದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಚೈತ್ರಾ, ನಾನೇ ಡಾಕ್ಟರ್​ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್​ ಹೀಗೆ ಹೇಳಿದ್ರು, ಪ್ರತಿಯೊಬ್ಬರ ಒಪಿನಿಯನ್​ನಲ್ಲಿ ನನ್ನ ಒಪಿನಿಯನ್ ಸೇರಿಸಿ ಹೇಳಿಲ್ಲ ಅಂತ ವಾದ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಕಿಚ್ಚ ಸುದೀಪ್ ಅವರು ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತಾ ಸತ್ಯವನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: 11 ಡ್ರೈವಿಂಗ್ ಲೈಸೆನ್ಸ್.. ಬೃಹತ್​ ವಾಹನಗಳನ್ನು ಚಲಾಯಿಸಿದ ಭಾರತದ ಮೊದಲ ಮಹಿಳೆ.. ಯಾರೀ ಗಟ್ಟಿಗಿತ್ತಿ?
/newsfirstlive-kannada/media/post_attachments/wp-content/uploads/2024/11/BBK1135.jpg)
ಮೊದಲು ಚೈತ್ರಾ ಕುಂದಾಪುರ ಅವರು ಆಂಬ್ಯುಲೆನ್ಸ್ ಆಚೆ ಬರುತ್ತಿದ್ದಂತೆ ಬಿಗ್​ಬಾಸ್​ ತಂಡದಿಂದ ಸದಸ್ಯರು ಯಾವ ವಿಚಾರದ ಬಗ್ಗೆಯೂ ಮಾತಾಡಬೇಡಿ ಅಂತ ಹೇಳಿದ್ದರಂತೆ. ಆದರೆ ಅದನ್ನು ಲೆಕ್ಕಿಸದೇ ಅಷ್ಟು ಮಾತಾಡಿ ಇಂದಿನ ಕಿಚ್ಚನ ಪಂಜಾಯ್ತಿಯಲ್ಲಿ ಎಲ್ಲರ ಮುಂದೆ ನಗೆ ಪಾಟಲಿಗೆ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us