/newsfirstlive-kannada/media/post_attachments/wp-content/uploads/2024/12/CHAITRA-KUNDAPURA-1.jpg)
ಬಿಗ್ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಮತ್ತೆ ಕಣ್ಣೀರು ಇಟ್ಟಿದ್ದಾರೆ. ಕೊಂಕು ಮಾತನ್ನಾಡೋರ ವಿರುದ್ಧ ನೆಕ್ಷ್ಟ್ ಲೇವಲ್ಗೆ ಇಳಿದಿರುವ ಚೈತ್ರಾ ಇದೀಗ ನ್ಯಾಯಕ್ಕಾಗಿ ದೇವರ ಮುಂದೆ ಹೋಗಿದ್ದಾರೆ.
ಆಗಿದ್ದೇನು..?
ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್ನ ಪ್ರೊಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಅದರಲ್ಲಿ, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಚನ್ ಅಲ್ಲಿ ಕ್ಲೀನ್ ಮಾಡುತ್ತಿರುತ್ತಾರೆ. ಆಗ ಚೈತ್ರಾ ಬಂದು ಗಲೀಜು ಮಾಡ್ತಿದ್ದಾಳೆ ಎಂದು ರಜತ್ ಪುಕಾರು ಹೇಳುತ್ತಾರೆ. ಆಗ ಚೈತ್ರಾ ಅವರು ರಜತ್ ಮೈಗೆ ಸೋಪಿನ ನೊರೆಯನ್ನು ಅಂಟಿಸಿದ್ದಾರೆ. ಇದರಿಂದ ಕೋಪಿಸಿಕೊಳ್ಳುವ ರಜತ್, ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ:BBK11; ಚೈತ್ರಾ- ಐಶ್ವರ್ಯ ನಡುವೆ ಬಿಸಿ ಬಿಸಿ ವಾಕ್ಸಮರ.. ಬಳೆಗಳನ್ನ ಒಡೆದುಕೊಂಡ ಸ್ಪರ್ಧಿ
ನಿನ್ನೆ ಯಾರಿಗೋ ಚಳಿ, ಜ್ವರ ಬಂದಿತ್ತಲ್ಲ, ಅದು ಯಾರಿಗೆ ಅನ್ನೋ ಮೂಲಕ ಚೈತ್ರಾ ಅವರನ್ನು ರಜತ್ ರೇಗಿಸಿದ್ದಾರೆ. ಅದಕ್ಕೆ ಬೇಸರಗೊಳ್ಳುವ ಚೈತ್ರಾ, ಯಾವ ಆರೋಪಕ್ಕೆ ನನ್ನನ್ನು ಈ ರೀತಿ ಮಾಡುತ್ತಿದ್ದಾರೆ? ನಾನು ನನ್ನನ್ನು ಸಾಬೀತು ಮಾಡಿಕೊಳ್ಳದೇ ಹೋದರೆ, ಬಲಿ ಕಾ ಬಕ್ರಾ ರೀತಿಯಲ್ಲಿ ಎಲ್ಲರೂ ಮಾಡಿರುವ ಆರೋಪಗಳನ್ನು ಸಾಬೀತು ಅಂತಾ ನಾನು ತಲೆಮೇಲೆ ತೆಗೆದುಕೊಳ್ಳಬೇಕಾಗುತ್ತದೆ. ಸರಿ ಇದೀನಾ ನಾನು? ನಾನು ನಾಟಕ ಮಾಡುತ್ತಿದ್ದೀನಾ? ಇಲ್ಲಿ ಆಡಿರುವ ಒಂದೊಂದು ಮಾತುಗಳಿಗೂ, ವ್ಯಂಗ್ಯಗಳಿಗೂ ಸಮಯ ಬರಲಿದೆ ಎಂದ ಚೈತ್ರಾ ದೇವರಿಗೆ ಪೂಜೆ ಮಾಡಿದ್ದಾಳೆ. ನಂತರ ದೇವರ ಮುಂದೆ ಹೋಗಿ ಕೂತಿದ್ದಾಳೆ. ಸಮಯನೇ ಉತ್ತರ ಕೊಡುತ್ತೆ ಎಂದು ಚೈತ್ರಾ ಜೋರಾಗಿ ಹೇಳಿದ್ದಾಳೆ. ಇನ್ನು ದೇವರ ಮುಂದೆ ನ್ಯಾಯಕ್ಕೆ ಕೂತಂತೆ ಕೂತಿರುವ ಚೈತ್ರಾಗೆ ಪ್ರಸಾದ ಕೂಡ ಆಗಿದೆ. ದೇವರಿಗೆ ಮುಡಿಸಿದ್ದ ಹೂ ಬಲಬಾಗದಿಂದ ಬಿದ್ದಿದೆ.
ಇದನ್ನೂ ಓದಿ:BBK11: ‘ಬಾಸ್ ಚೈತ್ರಾದ್ದು ಬರೀ ಡೌವ್ಗಳು ಸರ್’; ರಜತ್ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್
ಬೇಡಿದ ಉತ್ತರ ಸಿಕ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa#BBKPromopic.twitter.com/XgSqBJScuU— Colors Kannada (@ColorsKannada) December 24, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ