Advertisment

ಚೈತ್ರಾ ಕುಂದಾಪುರ ಮೇಲೆ ಸಾಲು ಸಾಲು ಆರೋಪ! ಹಣಕ್ಕಾಗಿ ಇಷ್ಟೆಲ್ಲಾ ಬೇಡಿಕೆ ಇಟ್ಟಿದ್ರಾ ಹಿಂದೂ ಕಾರ್ಯಕರ್ತೆ?

author-image
AS Harshith
Updated On
ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆರೋಪಿ ಚೈತ್ರಾ ಕುಂದಾಪುರ! ಇಂದು ಕೂಡ ನಡೆಯಲಿದೆಯಾ ವಿಚಾರಣೆ?
Advertisment
  • ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿ ಚೈತ್ರಾ ಕುಂದಾಪುರ
  • ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮೇಲೆ ಸಾಲು ಸಾಲು ಆರೋಪಗಳು
  • ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರನನ್ನು ಸಿಸಿಬಿಗೆ ವಶಕ್ಕೆ ಪಡೆದದ್ದು ಹೇಗೆ?

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟಿ ರೂಪಾಯಿ ವಂಚನೆ ಆರೋಪದಡಿ ತಲೆಮರೆಸಿಕೊಂಡಿದ್ದ ಅವರನ್ನು ಉಡುಪಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

Advertisment

ಚೈತ್ರಾ ಕುಂದಾಪುರ ಪೊಲೀಸರ ವಶವಾದಂತೆ ಅವರ ಮೇಲೆ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಹಲವು ಜನರಿಗೆ ವಂಚನೆ ಮಾಡಿರುವ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಅದರಂತೆಯೇ ಚಿಕ್ಕಮಗಳೂರಿನ ವ್ಯಕ್ತಿಯೋರ್ವನನ್ನು ಆರ್​ಎಸ್​ಎಸ್​ ಪ್ರಚಾರಕನನ್ನಾಗಿ ಬಿಂಬಿಸಿದ ಆರೋಪ ಈಕೆಯ ಮೇಲೆ ಕೇಳಿಬಂದಿದೆ.

publive-image

ಚಿಕ್ಕಮಗಳೂರು RSS ಮುಖಸ್ಥ ವಿಶ್ವನಾಥ್ ಹೆಸರನ್ನೂ ಬಳಸಿ ಅವರನ್ನು 93 ಸಾವಿರ ರೂಪಾಯಿ ಕೊಟ್ಟು ಬಿಜೆಪಿ ಸದಸ್ಯ ಮಾಡಿದ್ದಾರೆ. ಆರ್​ಎಸ್​ಎಸ್​ ಪ್ರಚಾರಕನಾಗಿ ನಟಿಸಿದ್ದ ಧನರಾಜ್​ಗೆ ₹1.2 ಲಕ್ಷ ಬೇಡಿಕೆ ಇಟ್ಟಿದ್ದಾರೆ. ಅಭಿನವ ಹಾಲಶ್ರೀ ಸ್ವಾಮೀಜಿಗೆ ₹1.5 ಕೋಟಿ ಕೊಡಿಸಿದ್ದಾರೆ. ಸ್ವಾಮೀಜಿ ಹೇಳಿದ್ರೆ ಟಿಕೆಟ್ ಪಕ್ಕಾ ಅಂತ ನಂಬಿಸಿ ಉದ್ಯಮಿಗೆ ಟೋಪಿ ಹಾಕಿರುವ ಆರೋಪವು ಈಗ ಚೈತ್ರಾ ಕುಂದಾಪುರ ಮೇಲೆ ಕೇಳಿ ಬಂದಿದೆ.

ಇನ್ನು ಚೈತ್ರಾ ಕುಂದಾಪುರ ಜೊತೆಗೆ ಗಗನ್ ಕಡೂರು, ಪ್ರಸಾದ್, ಅಭಿನವ್ ಸಾಥ್​ ನೀಡಿದ್ದಾರೆ ಎನ್ನಲಾಗುತ್ತಿದೆ. ಅದರೊಂದಿಗೆ ಹಾಲಶ್ರೀ ಸ್ವಾಮೀಜಿ, ರಮೇಶ್ ನಾಯ್ಕ್ ಎನ್ನುವವರು ಸಾಥ್ ನೀಡಿದ್ದಾರೆ. ಟಿಕೆಟ್ ಕೊಡದಿದ್ದಾಗ ಆರೋಪಿಗಳು ಸಾವಿನ ಕಥೆ ಕಟ್ಟಿ ಕಾಗೆ ಹಾರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

Advertisment

ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಮಿ ಗೋವಿಂದ್ ಪೂಜಾರಿ ನೀಡಿರುವ ದೂರಿನ ಅನ್ವಯ ದಾಖಲಾಗಿದ್ದ ಕೇಸ್​ ಆರೋಪದಡಿ ಬೆಂಗಳೂರು ಸಿಸಿಬಿ ಪೊಲೀಸರು ಅವರನ್ನು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಚೈತ್ರಾ ಕುಂದಾಪುರ ಅವರ ವಿರುದ್ದ IPC 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಉದ್ಯಮಿ ಗೋವಿಂದ್ ಬಾಬು ಪೂಜಾರಿ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಕೇಸ್ ನೀಡಿದ್ದರು.​ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹೇಳಿ ಐದು ಕೋಟಿ ಪಡೆದು ವಂಚಸಿರೋದಾಗಿ ದೂರು ನೀಡಿದ್ದರು. ದೂರಿನ ಅನ್ವಯ ಕೇಸ್​ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.

ಚೈತ್ರಾ ಕುಂದಾಪುರಗಾಗಿ ಹುಡುಕಾಟ

ಕೆಲ ದಿನಗಳಿಂದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಹುಡುಕಾಟ ನಡೆಸುತ್ತಿದ್ದರು. ಬೆಂಗಳೂರು ಹಾಗೂ ಉಡುಪಿ ಭಾಗದಲ್ಲಿ ಹುಡುಕಾಡಲಾಗಿತ್ತು. ಬಳಿಕ ಉಡುಪಿಯಲ್ಲಿ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisment

ಮೂವರು ವಶಕ್ಕೆ

ಇಂದು ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಚೈತ್ರಾ ಕುಂದಾಪುರ ಜೊತೆ ಇನ್ನೂ ಮೂವರನ್ನು ವಶಕ್ಕೆ ಪಡೆದಿದ್ದಾರೆ.

8 ಜನರ ಮೇಲೆ ವಂಚನೆ ಆರೋಪ

ಒಟ್ಟು 8 ಜನರ ಮೇಲೆ ವಂಚನೆ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿದ್ದು, ಇಂದು ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment