Advertisment

ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!

author-image
Ganesh
Updated On
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
Advertisment
  • ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ಔಟ್
  • ಬಿಗ್​ ಬಾಸ್ ವೀಕ್ಷಕರ ರಂಜಿಸುವಲ್ಲಿ ಚೈತ್ರಾ ಯಶಸ್ವಿ
  • ಬರೋಬ್ಬರಿ 106 ದಿನಗಳ ಬಳಿಕ ಮನೆಯಿಂದ ಔಟ್

ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ತಮ್ಮ ಜರ್ನಿ ಮುಗಿಸಿ ನಿನ್ನೆ ಆಚೆ ಬಂದಿದ್ದಾರೆ. ಬರೋಬ್ಬರಿ 106 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದ ಚೈತ್ರಾ ಅವರು, ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

Advertisment

ಮನೆಯಿಂದ ಹೊರಬಿದ್ದ ಬೆನ್ನಲ್ಲೇ ಬಿಗ್​ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಎದುರಾದರು. ಈ ವೇಳೆ ಸುದೀಪ್​, ಚೈತ್ರಾ ಅವರ ಬಿಗ್​ಬಾಸ್​ ಜರ್ನಿಯ ವಿಟಿ ತೋರಿಸಿದರು. ಇದನ್ನು ನೋಡಿದ ಚೈತ್ರಾ ಕುಂದಾಪುರ ತುಂಬಾನೇ ಭಾವುಕರಾದರು. ಅದನ್ನು ಗಮನಿಸಿದ ಕಿಚ್ಚ ಸುದೀಪ್, ಚೈತ್ರಾ ಅವರ ಬಳಿ ಬಂದು ಕಣ್ಣೀರು ಒರೆಸಿದರು. ಕಿಚ್ಚ ಸುದೀಪ್ ಅವರ ಈ ದೊಡ್ಡ ಗುಣವನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ:BBK11: ಏಕಾಏಕಿ ಭವ್ಯಾ ಗೌಡಗೆ ಕಳಪೆ ಪಟ್ಟ ಸಿಕ್ಕಿದ್ದು ಏಕೆ? ಕಿಚ್ಚ ಸುದೀಪ್​ ಶಿಕ್ಷೆ ಕೊಟ್ಟಿದ್ದೇಕೆ?

ಬಳಿಕ ಮಾತನಾಡಿದ ಸುದೀಪ್, ನೀವು ತುಂಬಾ ಚೆನ್ನಾಗಿ ಆಡಿದ್ದೀರಿ. ನಿಮಗೆ ನಾವು ತೋರಿಸಿರುವ ವಿಡಿಯೋದಲ್ಲಿ ಒಂದು ಅದ್ಭುತ ಇದೆ. ಎಷ್ಟು ಸಲ ನೀವು ಕಳಪೆ ತೆಗೆದುಕೊಂಡಿದ್ದೀರಿ ಅನ್ನೋದು ಇಂಪಾರ್ಟೆಂಟ್ ಅಲ್ಲ. ವಿಡಿಯೋ ಫಿನಿಶ್ ಆಗಿರೋದು ಉತ್ತಮದೊಂದಿಗೆ. ಬಿಗ್​ಬಾಸ್​ನಿಂದ ನಿಮಗೆ ಒಳ್ಳೆಯದಾಗಿದೆ ಅಂದುಕೊಳ್ತೀನಿ ಎಂದರು.

Advertisment

ನಂತರ ಚೈತ್ರಾ ಕುಂದಾಪುರ ಮಾತನಾಡಿ.. ಮೊದಲನೇ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಬರಬಾರದು ಅಂತ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ ಇರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಹೇಗೆ ಬದುಕಬಹುದು ಅನ್ನೋದನ್ನು ಬಿಗ್​ಬಾಸ್​ ಮನೆಯಲ್ಲಿ ಕಲಿತೆ. ಇಲ್ಲಿಗೆ ಬಂದು ಇಷ್ಟು ಜನರ ಜೊತೆಗೆ ಹೇಗೆ ಬದುಕಬೇಕು ಅಂತ ಕಲಿತ್ತಿದ್ದೇನೆ. 105 ದಿನದ ಸಾರ್ಥಕವಾಗಿ ಬದುಕಿದ್ದೇನೆ ಎಂದರು.

ಇದನ್ನೂ ಓದಿ: BBK11: ಶಾಕಿಂಗ್​​ ಎಲಿಮಿನೇಷನ್​.. ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment