BBK11: ಉಗ್ರಂ ಮಂಜುಗೆ ಹೊರಗಿನ ಗುಟ್ಟು ಹೇಳಿದ ಚೈತ್ರಾ ಕುಂದಾಪುರ; ಏನದು?

author-image
admin
Updated On
BBK11: ಉಗ್ರಂ ಮಂಜುಗೆ ಹೊರಗಿನ ಗುಟ್ಟು ಹೇಳಿದ ಚೈತ್ರಾ ಕುಂದಾಪುರ; ಏನದು?
Advertisment
  • ಬಿಗ್ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಾಟಕಗಳು ಒಂದೆರಡಲ್ಲ!
  • ಚಿಕಿತ್ಸೆಗೆ ಹೋಗಿ ಬಂದ ಚೈತ್ರಾ ಅವರಿಗೆ ಉಗ್ರಂ ಮಂಜು ಪ್ರಶ್ನೆ
  • ಅವರು ರೆಕ್ಕೆ ಮುರಿದು ಹೋಗಿದೆ ಎಂಬ ಸುಳಿವು ಕೊಟ್ಟ ಚೈತ್ರಾ

ಬಿಗ್ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಾಟಕಗಳು, ಆಟಗಾರರ ಬಣ್ಣ ಸಮಯಕ್ಕೆ ತಕ್ಕಂತೆ ಬದಲಾಗುವುದು ಹೊಸದೇನಲ್ಲ. ಸೀಸನ್ 11ರಲ್ಲೂ ಬಿಗ್ ಬಾಸ್‌ ಮನೆಯ ಡ್ರಾಮಾ ಜೋರಾಗಿದೆ. ಈ ವಾರ ನಾಮಿನೇಷನ್ ಆಗಿರೋ ಸ್ಪರ್ಧಿಗಳು ಮುಂದಿನ ವಾರಕ್ಕೂ ಮನೆಯಲ್ಲೇ ಉಳಿದುಕೊಳ್ಳಲು ನಾನಾ ಕಸರತ್ತು ಮಾಡುತ್ತಿದ್ದಾರೆ.

ಈ ವಾರದ ಎಲಿಮಿನೇಷನ್‌ಗೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿತ್ತು. ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಬಿಗ್ ಬಾಸ್ ಚೈತ್ರಾ ಕುಂದಾಪುರ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ: BBK11: ಬಿಗ್​ಬಾಸ್​ ಓಟದಲ್ಲಿ ಬಿಗ್​ ಟ್ವಿಸ್ಟ್; ಈ ವಾರದ ಕ್ಯಾಪ್ಟನ್ಸಿ ಪಟ್ಟ ಸಿಕ್ಕಿದ್ದು ಯಾರಿಗೆ? 

ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಮನೆಯಲ್ಲಿರವ ಸ್ಪರ್ಧಿಗಳಿಗೆ ಹೊರಗೆ ಹೋಗಿ ಬಂದವರಿಗೆ ಏನಾದ್ರು ಹೆಚ್ಚಿನ ಮಾಹಿತಿ ಗೊತ್ತಾಗಿದ್ಯಾ ಅನ್ನೋ ಕುತೂಹಲ ಇರುತ್ತೆ. ಹೀಗಾಗಿಯೇ ಚಿಕಿತ್ಸೆಗೆ ಹೋಗಿ ಬಂದ ಚೈತ್ರಾ ಕುಂದಾಪುರ ಅವರನ್ನ ಉಗ್ರಂ ಮಂಜು ಪ್ರಶ್ನಿಸಿದ್ದಾರೆ.

publive-image

ಬಿಗ್ ಬಾಸ್ ಮನೆ ಹೊರಗೆ ಜನರ ಅಭಿಪ್ರಾಯದ ಬಗ್ಗೆ ಉಗ್ರಂ ಮಂಜು, ಚೈತ್ರಾ ಅವರ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಚೈತ್ರಾ ಅವರು 3 ದಿನದಿಂದ ವಾತಾವರಣ ಕಂಪ್ಲೀಟ್‌ ಚೇಂಜ್ ಇದೆ ಅಂತೆ ಎಂದಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಈ ವಾತಾವರಣ ಹೇಗಿದೆ ಅಂತೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಚೈತ್ರಾ ಅವರು ಹೇಳಂಗಿಲ್ಲ ಎನ್ನುವ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: BBK11: ಬಿಗ್​​ಬಾಸ್‌ ಮನೆಯಲ್ಲಿ ಹನುಮಂತನೇ ಹೃದಯವಂತ.. ಕ್ಷಮೆಯಾಚಿಸಿದ್ದು ಯಾಕೆ ಗೌತಮಿ? 

ಮುಂದುವರಿದು ಮಾತನಾಡಿರುವ ಉಗ್ರಂ ಮಂಜು, ರೆಕ್ಕೆ ಏನು ಜಾಸ್ತಿ ಅಗಲ ಇದ್ಯಾ ಜಾಸ್ತಿ ಮುಚ್ಚಿಕೊಂಡಿದ್ಯಾ ಎಂದು ಮತ್ತೆ ಪ್ರಶ್ನಿಸಿದ್ದಾರೆ. ಆಗ ಚೈತ್ರಾ ಅವರು ರೆಕ್ಕೆ ಮುರಿದು ಹೋಗಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ನಂತರ ಮೊದಲು ರೆಕ್ಕೆ ಏನು ಚೆನ್ನಾಗಿ ಇತ್ತಾ ಎಂದು ಪ್ರಶ್ನಿಸಿದ್ದಕ್ಕೆ ಚೈತ್ರಾ ಹೇಳಂಗಿಲ್ಲ ಎಂದಿದ್ದಾರೆ.

ಹೀಗೆ ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಮಧ್ಯೆ ಸಂಭಾಷಣೆ ಮಧ್ಯೆ ಪಿಸು ಮಾತುಗಳು ನಡೆದಿದೆ. ಪಿಸು ಮಾತಿನಲ್ಲಿ ಮಾತನಾಡಿದ ಚೈತ್ರಾ, ಅವರ ಬಗ್ಗೆ ನೆಗೆಟಿವ್ ಆಗುತ್ತಾ ಇದೆ ಎಂದು ಧನರಾಜ್ ನೋಡಿ ಕೈ ಸಂಜ್ಞೆ ಮಾಡಿದ್ದಾರೆ. ಪಿಸು ಮಾತಿನಲ್ಲೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಅನ್ನೋ ಸಂದೇಶ ನೀಡಲು ಯತ್ನಿಸಿದ್ದಾರೆ. ಚೈತ್ರಾ ಅವರ ಈ ನಡೆಗೆ ಬಿಗ್ ಬಾಸ್ ಚೈತ್ರಾ ನೀವು ಪಿಸು ದನಿಯಲ್ಲಿ ಮಾತನಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಹೊರಗಿನ ವಿಚಾರ ಮನೆಯವರಿಗೆ ಹೇಳಲು ಹೋಗಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment