Advertisment

BBK11: ಶಾಕಿಂಗ್​​ ಎಲಿಮಿನೇಷನ್​.. ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ

author-image
Veena Gangani
Updated On
BBK11: ಶಾಕಿಂಗ್​​ ಎಲಿಮಿನೇಷನ್​.. ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ
Advertisment
  • ಈ ವಾರ ಬಿಗ್​ಬಾಸ್​ನಿಂದ ಆಚೆ ಬಂದಿದ್ದು ಇವರೇ ನೋಡಿ
  • ನಾಮಿನೇಷನ್​ ಹಾಟ್​ ಸೀಟ್​ನಲ್ಲಿ ಉಳಿದಕೊಂಡಿದ್ದ ನಾಲ್ವರು
  • ಅಚ್ಚರಿಯ ರೀತಿಯಲ್ಲಿ ದೊಡ್ಮನೆಯಿಂದ ಈ ಸ್ಪರ್ಧಿ ಆಚೆಗೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 106ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಈ ಸ್ಪರ್ಧಿ ಬಂದಿದ್ದಾರೆ.

Advertisment

ಇದನ್ನೂ ಓದಿ: BBK11: ಹನುಮಂತ ರಾಕ್.. ರಜತ್, ಮಂಜು, ತ್ರಿವಿಕ್ರಮ್‌ಗೆ ಶಾಕ್‌! ಕಿಚ್ಚ ಸುದೀಪ್‌ ಹೇಳಿದ್ದೇನು?

publive-image

ಹೌದು, ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ಆಚೆ ಬಂದಿದ್ದಾರೆ. ಚೈತ್ರಾ ಕುಂದಾಪುರ ಅಚ್ಚರಿಯ ರೀತಿಯಲ್ಲೇ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ.

publive-image

ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್‌, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್‌ ಆಚಾರ್‌ ನಾಮಿನೇಷನ್ ಆಗಿದ್ದರು. ಈ ಐದು ಮಂದಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಭವ್ಯಾ ಗೌಡ ಸೇಫ್​ ಆಗಿದ್ದರು. ಇದಾದ ಬಳಿಕ ಇಂದಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಮೂವರನ್ನು ಸೇಫ್​ ಮಾಡಿದ್ದರು.

Advertisment

publive-image

ಆದ್ರೆ, ಗ್ರ್ಯಾಂಡ್​ ಫಿನಾಲಾಗೆ ಇನ್ನೂ ಎರಡು ವಾರ ಬಾಕಿ ಇರುವ ಹೊತ್ತಲ್ಲೇ 106ನೇ ದಿನಕ್ಕೆ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಇನ್ನೂ ಈ ವಾರದ ನಾಮಿನೇಷನ್‌ನಲ್ಲಿ ಸ್ಟ್ರಾಂಗ್​ ಸ್ಪರ್ಧಿಗಳೇ ಇರುವುದರಿಂದ ಈ ವಾರ ಔಟ್ ಆಗೋರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿತ್ತು.

publive-image

ಕೊನೆಯ ಕ್ಷಣದಲ್ಲಿ ಧನರಾಜ್​ ಆಚಾರ್ಯ ಹಾಗೂ ಚೈತ್ರಾ ಕುಂದಾಪುರ ಬಾಟಂ 2ನಲ್ಲಿ ಇದ್ದರು. ಆಗ ಈ ಇಬ್ಬರಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಚೈತ್ರಾ ಕುಂದಾಪುರ ಅವರಿಗೆ ಒಂದು ಲೆಟರ್​ ಸಿಗುತ್ತೆ. ಆ ಲೆಟರ್​ನಲ್ಲಿ ಧನರಾಜ್​ ನೀವು ಸೇಫ್​ ಆಗಿದ್ದೀರಿ ಅಂತ ಬರೆದಿತ್ತು. ಇದಾದ ಬಳಿಕ ಚೈತ್ರಾ ಕುಂದಾಪುರ ಅವರು ಕಣ್ಣೀರು ಹಾಕುತ್ತಾ, ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳುತ್ತಾ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment