Breaking News: ಚೈತ್ರಾ ಕುಂದಾಪುರ ಕೇಸ್; ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

author-image
Ganesh
Updated On
ಒಡಿಶಾ, ಬಳ್ಳಾರಿಯಲ್ಲಿ ವಂಚನೆ ಹಣ ಇಟ್ಟಿದ್ರಾ  ಹಾಲಶ್ರೀ? ಸ್ವಾಮೀಜಿಯನ್ನು ಭೇಟಿ ಮಾಡಿದ ನಾಯಕರಿಗೆ ಶುರುವಾಗಿದೆ ಟೆನ್ಶನ್​
Advertisment
  • ಎಷ್ಟು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಶ್ರೀಗಳು..?
  • ಅಭಿನವ ಶ್ರೀಗಳ ಜಾಮೀನು ಅರ್ಜಿ ಕತೆ ಏನಾಯಿತು..?
  • ಚೈತ್ರಾ ಕುಂದಾಪುರ ಕೇಸ್​ನಲ್ಲಿ 3ನೇ ಆರೋಪಿ ಹಾಲಶ್ರೀ

ಬೆಂಗಳೂರು: ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಆರೋಪ ಕೇಸ್​ನಲ್ಲಿ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಶ್ರೀ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿಯ ಬಂಧನ ಆಗಿದೆ.

ಮೊನ್ನೆ ರಾತ್ರಿ ಒಡಿಶಾದಲ್ಲಿ ಬಂಧಿಸಿರುವ ಶ್ರೀಗಳನ್ನು ಇವತ್ತು ಬೆಂಗಳೂರಿನ ಕೋರ್ಟ್​ಗೆ ಹಾಜರುಪಡಿಸಿ ಸಿಸಿಬಿ ತನ್ನ ಕಸ್ಟಡಿಗೆ ಕೇಳಿತ್ತು. ವಿಚಾರಣೆ ನಡೆಸಿರುವ 19ನೇ ಎಸಿಎಂಎಂ ಕೋರ್ಟ್, ಶ್ರೀಗಳನ್ನು 10 ದಿನಗಳವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಸಿಸಿಬಿ ಅಧಿಕಾರಿಗಳು ಶ್ರೀಗಳನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಸೆಪ್ಟೆಂಬರ್ 29ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಮಾಡಿದೆ. ಮಾತ್ರವಲ್ಲ ಶ್ರೀಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸರ್ಕಾರಿ ಪರ ವಕೀಲರಿಗೆ ಕಾಲಾವಕಾಶ ನೀಡಿದೆ. ಸೆಪ್ಟೆಂಬರ್ 29 ರಂದು ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಕೋರ್ಟ್ ಆದೇಶ ಬೆನ್ನಲ್ಲೇ ಹಾಲಶ್ರೀಗಳನ್ನು ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment