Advertisment

BBK11: ‘ಬಿಗ್​ಬಾಸ್​ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ’.. ಕ್ಯಾಮೆರಾ ಮುಂದೆ ಚೈತ್ರಾ ಕುಂದಾಪುರ ಕಣ್ಣೀರು

author-image
Veena Gangani
Updated On
BBK11: ಮತ್ತೆ ಬ್ರೇಕಿಂಗ್ ನ್ಯೂಸ್ ಆದ ಚೈತ್ರಾ ಕುಂದಾಪುರ; ಬಿಗ್​ಬಾಸ್ ಮನೆಯಿಂದ ಆಚೆ ಬಂದಿದ್ಯಾಕೆ?
Advertisment
  • ಕ್ಯಾಮೆರಾ ಮುಂದೆ ಬಂದು ಚೈತ್ರಾ ಕುಂದಾಪುರ ಏನಂದ್ರು?
  • ಎಪಿಸೋಡ್​ನ ಮಧ್ಯೆಯೇ ಚೈತ್ರಾ ಕುಂದಾಪುರ ಕಣ್ಣೀರು
  • ಬಿಗ್​ಬಾಸ್​ ಮೂಲ ನಿಯಮವನ್ನೇ ಉಲ್ಲಂಘನೆ ಮಾಡಿದ ಚೈತ್ರಾ

ಕನ್ನಡದ ಬಿಗ್ ಬಾಸ್​ ಸ್ಪರ್ಧಿ ಚೈತ್ರಾ ಕುಂದಾಪುರ ಕ್ಯಾಮೆರಾ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನ ಮಧ್ಯೆ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ.

Advertisment

ಇದನ್ನೂ ಓದಿ:BBK11: ಉಗ್ರಂ ಮಂಜುಗೆ ಹೊರಗಿನ ಗುಟ್ಟು ಹೇಳಿದ ಚೈತ್ರಾ ಕುಂದಾಪುರ; ಏನದು?

publive-image

ಹೌದು, ಕಳೆದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಲ್ಲಿ ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲೇಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸುಮ್ಮನೆ ಇರದ ಚೈತ್ರಾ ಕುಂದಾಪುರ ಅವರು ಡಾಕ್ಟರ್ ಹಾಗೂ ನರ್ಸ್‌ಗಳ ಬಾಯಲ್ಲಿ ಕಂಟೆಸ್ಟೆಂಟ್‌ಗಳ ಬಗ್ಗೆ ಒಪೀನಿಯನ್ ಪಡೆದುಕೊಂಡಿದ್ದಾರೆ. ಅಲ್ಲದೇ ಬಿಗ್​ಬಾಸ್​ ಮನೆಗೆ ಮತ್ತೆ ವಾಪಸ್​ ಆದಾಗ ಎಲ್ಲರ ಮುಂದೆ ಒಂದೊಂದಾಗಿ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಮೂಲಕ ಬಿಗ್​ಬಾಸ್​ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

publive-image

ಈ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಚೈತ್ರಾಗೆ ಚಳಿ ಬಿಡಿಸಿದ್ದಾರೆ. ಇದರಿಂದ ಮನನೊಂದ ಚೈತ್ರಾ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಹೇಳುವ ಉದ್ದೇಶವೇನು ಅಂತ ಕಿಚ್ಚ ಸದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಚೈತ್ರಾ, ನಾನೇ ಡಾಕ್ಟರ್​ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್​ ಹೀಗೆ ಹೇಳಿದ್ರು,  ಪ್ರತಿಯೊಬ್ಬರ ಒಪಿನಿಯನ್​ನಲ್ಲಿ ನನ್ನ ಒಪಿನಿಯನ್ ಸೇರಿಸಿ ಹೇಳಿಲ್ಲ ಅಂತ ಹೇಳಿದ್ದಾರೆ. ಇದಾದ ಬಳಿಕ ಏನೆಲ್ಲಾ ಅಯ್ತು ಎಂದು ಇಂದಿನ ಎಪಿಸೋಡ್​ನಲ್ಲಿ ತಿಳಿದು ಬರಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment