BBK11: ಬಿಗ್​ಬಾಸ್ ಮನೆಯ ಬಾತ್​ ರೂಂನಲ್ಲೇ ಏಕಾಏಕಿ ಕುಸಿದು ಬಿದ್ದ ಚೈತ್ರಾ ಕುಂದಾಪುರ; ಆಗಿದ್ದೇನು?

author-image
Veena Gangani
Updated On
BBK11: ಬಿಗ್ ಬಾಸ್‌ ಮನೆಯಲ್ಲಿ ಬೆಂಕಿ ಮಾತು; ಚೈತ್ರಾ ಕುಂದಾಪುರ ಮೇಲೆ ಕೆರಳಿ ಕೆಂಡವಾದ ಕಿಚ್ಚ ಸುದೀಪ್​!
Advertisment
  • ಬಿಗ್​ಬಾಸ್​ ಮನೆಗೆ ಅಚ್ಚರಿಯ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಚೈತ್ರಾ
  • ಏಕಾಏಕಿ ಬಾತ್​ ರೂಂನಲ್ಲಿ ಕುಸಿದು ಬಿದ್ದ ಚೈತ್ರಾ ಕುಂದಾಪುರ
  • ಕುಸಿದು ಬಿದ್ದ ಚೈತ್ರಾರನ್ನು ನೋಡಿ ಉಳಿದ ಸ್ಪರ್ಧಿಗಳು ಶಾಕ್​

ಕನ್ನಡ ಬಿಗ್​ಬಾಸ್​ ಸೀಸನ್​ 11ರ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಏಕಾಏಕಿ ಬಾತ್​ ರೂಂನಲ್ಲೇ ಕುಸಿದು ಬಿದ್ದಿದ್ದಾರೆ. ಹೌದು, ಬಿಗ್​ಬಾಸ್​ ಮನೆಯ ಬಾತ್​ ರೂಂನಲ್ಲಿ ನಿಂತುಕೊಂಡಿದ್ದರು. ಆಗ ಕೂಡಲೇ ನಿಂತುಕೊಂಡ ಜಾಗದಲ್ಲೇ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ಕನಸಿನ ಮನೆಗೆ ಪ್ರವೇಶ ಮಾಡಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಫೋಟೋಸ್

publive-image

ಇನ್ನೂ ಇದನ್ನು ಗಮನಿಸಿದ ಬಿಗ್​ಬಾಸ್​ ಗೌತಮಿ ಹಾಗೂ ಮೋಕ್ಷಿತಾಗೆ ಕೂಡಲೇ ಬಾತ್​ರೂಂಗೆ ಹೀಗಿ ಚೈತ್ರಾ ಅವರಿಗೆ ಸಹಾಯ ಮಾಡಿ ಅಂತ ಹೇಳಿದ್ದಾರೆ. ಬಿಗ್​ಬಾಸ್​ ವಾಯ್ಸ್ ಕೇಳುತ್ತಿದ್ದಂತೆ ಗೌತಮಿ ಹಾಗೂ ಮೋಕ್ಷಿತಾ ಬಾತ್ ರೂಂಗೆ ಓಡಿ ಹೋಗಿದ್ದಾರೆ. ಆಗ ಚೈತ್ರಾ ಅವರು ನೆಲದ ಮೇಲೆ ಬಿದ್ದಿದ್ದರು. ಆ ಕೂಡಲೇ ಅವರ ಮುಖಕ್ಕೆ ತಣ್ಣೀರಿನಿಂದ ವರೆಸಿದ್ದಾರೆ. ಆದರೂ ಚೈತ್ರಾ ಅವರು ಎದ್ದೇಳಲ್ಲಿಲ್ಲ. ಹೀಗಾಗಿ ಬಿಗ್​ಬಾಸ್​ ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂ ಕರೆ ತನ್ನಿ ಅಂತ ಹೇಳಿದ್ದರು. ಬಳಿಕ ಎಲ್ಲ ಸ್ಪರ್ಧಿಗಳು ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂಗೆ ಕರೆದುಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment