Advertisment

‘ಕೋರ್ಟ್​ ಕೇಸ್​ ನನ್ನ ಕುಗ್ಗಿಸಿಲ್ಲ’- ಬಿಗ್​ಬಾಸ್​​ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ

author-image
Ganesh Nachikethu
Updated On
‘ಕೋರ್ಟ್​ ಕೇಸ್​ ನನ್ನ ಕುಗ್ಗಿಸಿಲ್ಲ’- ಬಿಗ್​ಬಾಸ್​​ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ
Advertisment
  • ಕಲರ್ಸ್‌ ಕನ್ನಡ ವಾಹಿನಿಯಿಂದ ಚೈತ್ರಾ ಕುಂದಾಪುರ ಬಗ್ಗೆ ಪ್ರೋಮೋ!
  • ಪ್ರೋಮೋದಲ್ಲಿ ಅಚ್ಚರಿ ವಿಷಯ ರಿವೀಲ್​ ಮಾಡಿದ ಚೈತ್ರಾ ಕುಂದಾಪುರ
  • ಕೋರ್ಟ್​ ಕೇಸ್​ ನನ್ನನ್ನೂ ಕುಗ್ಗಿಸಿಲ್ಲ ಎಂದು ಚೈತ್ರಾ ಕುಂದಾಪುರ ಹೇಳಿಕೆ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್​ ಕೊಡಿಸುತ್ತೇನೆ ಎಂದು ಉದ್ಯಮಿ ಒಬ್ಬರಿಗೆ 7 ಕೋಟಿ ಪಂಗನಾಮ ಹಾಕಿದ್ದ ಆರೋಪದಲ್ಲಿ ಜೈಲು ಸೇರಿದ್ದವರು ಚೈತ್ರಾ ಕುಂದಾಪುರ. ಜೈಲಿನಿಂದ ರಿಲೀಸ್​ ಆದ ಮೇಲೆ ಚೈತ್ರಾ ಕುಂದಾಪುರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಅಚ್ಚರಿ ಎನ್ನುವಂತೆ ದಿಢೀರ್​​ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ.

Advertisment

ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿ ಚೈತ್ರಾ ಕುಂದಾಪುರ ಬಗ್ಗೆ ಪ್ರೋಮೋ ಒಂದು ಶೇರ್‌ ಮಾಡಿದೆ. ಕಲರ್ಸ್​​ ಕನ್ನಡ ಶೇರ್​​ ಮಾಡಿರೋ ಪ್ರೋಮೋದಲ್ಲಿ ಚೈತ್ರಾ ನೋಡುವಷ್ಟು ನೋಡಿದ್ದೇವೆ. ಸಹಿಸುವಷ್ಟು ಸಹಿಸಿದ್ದೇವೆ, ಇದು ನಿಮಗೆ ಕೊನೆ ಎಚ್ಚರಿಕೆ ಎಂದಿದ್ದಾರೆ.

ನಂತರ ಮಾತಾಡಿರೋ ಚೈತ್ರಾ ನಾನು ಸಾಮಾನ್ಯ ಹಾಲು ಮಾರುವನ ಮಗಳು. ಹಿಂದುತ್ವ ನನ್ನ ರಕ್ತದಲ್ಲೇ ಇದೆ. ನನ್ನನ್ನ ಗಟ್ಟಿ ಮಾಡಿರೋದೇ ವಿರೋಧಿಗಳು. ನಾನು ಅರೆಸ್ಟ್ ಆಗಿದ್ದಾಗ ನನ್ನನ್ನ ನೋಡಲು ಉತ್ತರ ಕರ್ನಾಟಕದಿಂದ ಜನ ಬಂದಿದ್ದರು. ಅವರಿಗೆಲ್ಲಾ ನಾನು ಚಿರಋಣಿ ಎಂದರು.

ಕೋರ್ಟ್​ ಕೇಸ್​​ ಎಲ್ಲವನ್ನೂ ಎದುರಿಸುತ್ತಿದ್ದೇನೆ. ಇವೆಲ್ಲವೂ ನನ್ನನ್ನು ಕುಗ್ಗಿಸುವುದಿಲ್ಲ. ನಾನು ಜೈಲಿನಿಂದ ಹೊರ ಬಂದಾಗಲೇ ಬಿಗ್​ಬಾಸ್​ ಬಗ್ಗೆ ಕೇಳಿದ್ದೆ. ನನಗೆ ಬಿಗ್​ಬಾಸ್ ಟೀಮ್​ನಿಂದ ಕಾಲ್​ ಬಂದಾಗ ಗೊಂದಲದಲ್ಲಿದ್ದೆ. ಬಳಿಕ ಅವರು ಒಪ್ಪಿಸಿದ್ದು ಖುಷಿಯಾಯ್ತು ಎಂದರು.

Advertisment

ಯಾರು ಚೈತ್ರಾ ಕುಂದಾಪುರ?

ಚೈತ್ರಾ ಕುಂದಾಪುರ ಪ್ರಖರ ಭಾಷಣಗಾರ್ತಿ. ಇವರು ಉಡುಪಿ ಜಿಲ್ಲೆ ಕುಂದಾಪುರದವರು. ಕುಂದಾಪುರದಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು.​ ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿದ್ದ ಇವರು ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿ ಆಗಿದ್ದರು. ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಪತ್ರಕರ್ತೆಯಾಗಿ, ನಿರೂಪಕಿಯಾಗಿ ಭಾಷಣಕಾರರಾಗಿ ಗಮನ ಸೆಳೆದಿರೋ ಇವರು ಪ್ರೇಮ ಪಾಶ ಅನ್ನೋ ಚೊಚ್ಚಲ ಕೃತಿ ಬರೆದಿದ್ದಾರೆ.

7 ಕೋಟಿ ಮೋಸ ಮಾಡಿದ್ದ ಆರೋಪ

ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದಾರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು ಚೈತ್ರಾ ಕುಂದಾಪುರ ನಂಬಿಸಿದ್ದರಂತೆ. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅರೆಸ್ಟ್ ಕೂಡ ಮಾಡಿದ್ದರು. ಚೈತ್ರಾ ಮತ್ತವರ ಗ್ಯಾಂಗ್ ಕೇಂದ್ರದ ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ ನಾಯಕರ ಹೆಸರಲ್ಲಿ ಮೋಸ ಮಾಡಿದ್ದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಹೆಸರಲ್ಲಿ ನಕಲಿ ನಾಯಕರನ್ನ ಸೃಷ್ಟಿ ಮಾಡಿ ಇವರು ವಂಚನೆ ಮಾಡಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ:7 ಕೋಟಿ ಪಂಗನಾಮ ಹಾಕಿದ್ದ ಆರೋಪದಲ್ಲಿ ಜೈಲು ಸೇರಿದ್ದ ಚೈತ್ರಾ; ಬಿಗ್​​ಬಾಸ್​​ ಮನೆಗೆ ಖಡಕ್ ಎಂಟ್ರಿ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment