ಕಿಚ್ಚ ಸುದೀಪ್​ ಮಂಗಳಾರತಿಗೂ ಕ್ಯಾರೇ ಎನ್ನದ ಚೈತ್ರಾ; ಮತ್ತೆ ಅದೇ ರಾಗ ಅದೇ ಹಾಡು!

author-image
Ganesh Nachikethu
Updated On
ಕಿಚ್ಚ ಸುದೀಪ್​ ಮಂಗಳಾರತಿಗೂ ಕ್ಯಾರೇ ಎನ್ನದ ಚೈತ್ರಾ; ಮತ್ತೆ ಅದೇ ರಾಗ ಅದೇ ಹಾಡು!
Advertisment
  • ಕಳೆದ ವೀಕೆಂಡ್​​ನಲ್ಲಿ ನಾಮಿನೇಷನ್​​ ವಿಚಾರಕ್ಕೆ ಕ್ಲಾಸ್​​
  • ಇಡೀ ಮನೆ ಮಂದಿಗೆಲ್ಲಾ ಕಿಚ್ಚ ಸುದೀಪ್​ ಮಂಗಳಾರತಿ
  • ಇಷ್ಟಾದ್ರೂ ಬುದ್ದಿ ಕಲಿಯದ ಸ್ಪರ್ಧಿ ಚೈತ್ರಾ ಕುಂದಾಪುರ

ಕಳೆದ ವೀಕೆಂಡ್​​ನಲ್ಲಿ ನಾಮಿನೇಷನ್​​ ವಿಚಾರಕ್ಕೆ ಇಡೀ ಮನೆ ಮಂದಿಗೆಲ್ಲಾ ನಟ ಕಿಚ್ಚ ಸುದೀಪ್​ ಮಂಗಳಾರತಿ ಮಾಡಿದ್ರು. ಬೇರೆಯವರ ಮಧ್ಯೆ ಏನೋ ಆಗಿದೆ ಎಂದಾಗ ಅದೇ ವಿಚಾರ ಇಟ್ಟುಕೊಂಡು ಯಾವುದೇ ಕಾರಣಕ್ಕೂ ನಾಮಿನೇಟ್​ ಮಾಡಬಾರ್ದು ಎಂದು ಕಿಚ್ಚ ಸುದೀಪ್​​​ ಕ್ಲಾಸ್​ ತೆಗೆದುಕೊಂಡಿದ್ರು. ಇಷ್ಟಾದ ಮೇಲೂ ಸ್ಪರ್ಧಿಗಳದ್ದು ಅದೇ ರಾಗ ಅದೇ ಹಾಡಾಗಿದೆ. ಈ ವಾರ ಕೂಡ ಮತ್ತೆ ಅದೇ ಕಾರಣ ನೀಡಿ ಎಲ್ಲರೂ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದಾರೆ.

ಕಳೆದ ವಾರ ರಜತ್ ಸುರೇಶ್​ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ರು. ಈ ವಿಚಾರವನ್ನೇ ಇಟ್ಟುಕೊಂಡು ಎಲ್ಲರೂ ರಜತ್​ ಅವರಿಗೆ ಕಳಪೆ ನೀಡಿದ್ರು. ಈ ವಿಚಾರವನ್ನು ಸುದೀಪ್ ಅವರು ವೀಕೆಂಡ್​ನಲ್ಲಿ ಪ್ರಸ್ತಾಪ ಮಾಡಿ, ಇಂಥಾ ಕಾರಣ ನೀಡಿ ನಾಮಿನೇಟ್ ಮಾಡೋದು ತಪ್ಪು. ನೀವು ಜೋಕರ್​ಗಳ ರೀತಿ ಕಾಣುತ್ತೀರಿ ಎಂದಿದ್ದರು ಸುದೀಪ್​​.


">November 26, 2024

ರಜತ್​ ನಾಮಿನೇಟ್​ ಮಾಡಿದ ಚೈತ್ರಾ!

ನಿನ್ನೆ ಮನೆಯಲ್ಲಿ ನಾಮಿನೇಷನ್ ನಡೆದಿದೆ. ಮಹಾಪ್ರಭು ಉಗ್ರಂ ಮಂಜು ಮುಂದೆ ಮನೆ ಸದಸ್ಯರು ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರಾ ಮೊದಲಿಗೆ ರಜತ್ ಅವರನ್ನು ನಾಮಿನೇಟ್ ಮಾಡಿದ್ರು. ಇದಕ್ಕೆ ಅವರು ನೀಡಿದ ಕಾರಣ ಇಷ್ಟೇ. ರಜತ್ ನನ್ನನ್ನು ಬಾಸ್ ಎಂದು ಕರೆಯುತ್ತಾ ಗೇಲಿ ಮಾಡುತ್ತಾರೆ. ವ್ಯಂಗ್ಯ ಯಾವುದು? ಅವಮಾನ ಯಾವುದು ಎಂದು ಗೊತ್ತಿಲ್ಲದಷ್ಟು ಮುಗ್ಧೆ ನಾನಲ್ಲ ಎಂದು ಹೇಳಿದ್ರು.

ಇದನ್ನೂ ಓದಿ:ಬಿಗ್​ಬಾಸ್​​ ಸಾಮ್ರಾಜ್ಯದಲ್ಲಿ ಬಿಗ್​ ಟ್ವಿಸ್ಟ್.. ಮಂಜು ಮಹಾರಾಜರ ಪಟ್ಟದ ಮೇಲೆ ಯುವರಾಣಿಯ ಕಣ್ಣು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment