/newsfirstlive-kannada/media/post_attachments/wp-content/uploads/2025/05/Chaitra-kundapura-Marriage.jpg)
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉಡುಪಿ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ನೆರವೇರಿದೆ.
ಚೈತ್ರಾ ಕುಂದಾಪುರ ಅವರು 12 ವರ್ಷ ಪ್ರೀತಿಸಿದ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ಕೈ ಹಿಡಿದಿದ್ದು, ಇವರ ಮದುವೆ ಶಾಸ್ತ್ರ, ಸಂಪ್ರದಾಯಬದ್ಧವಾಗಿ ನಡೆದಿದೆ.
ಇದನ್ನೂ ಓದಿ: ಇಂದು ಚೈತ್ರಾ ಕುಂದಾಪುರ ಮದುವೆ; ಹುಡುಗ ಯಾರು.. 12 ವರ್ಷದ ಪ್ರೀತಿ ಹೇಗಿತ್ತು?
ಚೈತ್ರಾ ಕುಂದಾಪುರ ಅವರ ಮದುವೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್, ಗೋಲ್ಡ್ ಸುರೇಶ್, ಧನರಾಜ್ ಆಚಾರ್ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಜತ್ ಕಿಶನ್, ಚೈತ್ರಾ ಕುಂದಾಪುರ ಅವರಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಚೈತ್ರಾ ಕುಂದಾಪುರ, ರಜತ್ ಜಗಳ ವಿಕೋಪಕ್ಕೂ ಹೋಗಿತ್ತು. ಆದರೆ ರಿಯಾಲಿಟಿ ಶೋ ಮುಗಿದ ಮೇಲೆ ಆ ಘಟನೆಯನ್ನೆಲ್ಲಾ ಮರೆತಿರುವ ರಜತ್ ಕಿಶನ್ ಅವರು ಚೈತ್ರಾ ಕುಂದಾಪುರ ಅವರಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ್ ಅವರ ಈ ಮದುವೆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ