ಡಿಸಿಎಂ ಡಿಕೆ ಶಿವಕುಮಾರ್​ಗೆ ನಟ ಸುದೀಪ್ ಮ್ಯಾನೇಜರ್‌ ಖಡಕ್​ ಎಚ್ಚರಿಕೆ VIDEO​

author-image
Veena Gangani
Updated On
ಡಿಸಿಎಂ ಡಿಕೆ ಶಿವಕುಮಾರ್​ಗೆ ನಟ ಸುದೀಪ್ ಮ್ಯಾನೇಜರ್‌ ಖಡಕ್​ ಎಚ್ಚರಿಕೆ VIDEO​
Advertisment
  • ಡಿಕೆ ಶಿವಕುಮಾರ್ ನಟ್ಟು, ಬೋಲ್ಟ್ ಹೇಳಿಕೆ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಏನಂದ್ರು?
  • ಏಕಾಏಕಿ ಲೈವ್​ಗೆ ಬಂದು ತೀವ್ರ ಆಕ್ರೋಶ ಹೊರ ಹಾಕಿದ ಕಿಚ್ಚ ಸುದೀಪ್ ಆಪ್ತ
  • ರಾಜಕಾರಣ ಯಾರಪ್ಪನ ಸ್ವತ್ತು ಅಲ್ಲ ಅಂತ ಕಿಡಿ ಕಾರಿದ ಸುದೀಪ್ ಮ್ಯಾನೇಜರ್‌

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸ್ಯಾಂಡಲ್‌ವುಡ್‌ ನಟ, ನಟಿಯರು, ಕಲಾವಿದರ ನಟ್ಟು, ಬೋಲ್ಟ್ ಟೈಟ್‌ ಮಾಡೋ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಇದರ ಮಧ್ಯೆ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರು ಫೇಸ್‌ಬುಕ್‌ ಲೈವ್​ಗೆ ಬಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!

ಫೇಸ್‌ಬುಕ್‌ ಲೈವ್‌ನಲ್ಲಿ ಬಂದು ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ಅವರು, ಮಂಡ್ಯ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನು ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ. ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ. ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು ಎಂದು ಕಿಡಿಕಾರಿದ್ದರು.

ಅಲ್ಲದೇ ವಿವಾದಾತ್ಮಕ ಹೇಳಿಕೆಗಳಿಗೆ ಚಕ್ರವರ್ತಿ ಚಂದ್ರಚೂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರವಿಕುಮಾರ್ ಗಣಿಗ ಅವರ ಟೀಕೆಗಳನ್ನು ಖಂಡಿಸಿ, ರಾಜಕಾರಣಿಗಳು ಚಿತ್ರರಂಗವನ್ನು ನಾಶಮಾಡಲು ಯತ್ನಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ ಮತ್ತು ರಾಜಕೀಯ ನಾಯಕರು ಹಿಟ್ಲರ್ ನೀತಿಯನ್ನು ಅನುಸರಿಸಬಾರದು ಎಂದು ಹೇಳಿದ್ದಾರೆ.

ಇದಾದ ಬಳಿಕ ಮಾತಾಡಿದ ಚಕ್ರವರ್ತಿ ಚಂದ್ರಚೂಡ್ ಅವರು, ರವಿ ಗಣಿಗ ಅವರೇ ನೀವು ಮರೆತು ಬಿಟ್ರಿ, ಡಿಕೆ ಸುರೇಶ್​ ಅವರಿಗೆ ಏನಾಯ್ತು ಅಂತ. ನಿಮ್ಮನೆಲ್ಲಾ ನಾವು ತುಂಬಾ ಪ್ರೀತಿಸುತ್ತೇವೆ. ಹೀಗೆಲ್ಲಾ ನಟ್ಟು, ಬೋಲ್ಟ್ ಅಂತ ಮಾತಾಡಿ ಕೆಟ್ಟವರು ಆಗಬಾರದು. ರಾಜಕಾರಣ ಯಾರಪ್ಪನ ಸ್ವತ್ತು ಅಲ್ಲ, ನಿಮ್ಮ ಅಪ್ಪನ ಸ್ವತ್ತು ಅಲ್ಲ ವಿಧಾನಸೌಧ. ಸಿನಿಮಾನೂ ಯಾರಪ್ಪನ ಸ್ವತ್ತು ಅಲ್ಲ. ನಿಮಗೆಲ್ಲಾ ಎಲ್ಲರನ್ನು ಒಂದು ಕಡೆ ಸೇರಿಸಲು ಆಗುತ್ತಿಲ್ಲ. ಕೋವಿಡ್ ಕಾಲದಿಂದಲೂ ಆಗಿರೋ ಹಗರಣವನ್ನು ನಾನು ಹೇಳಬಲ್ಲೇ ಅಂತ ಕಿಡಿ ಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment