newsfirstkannada.com

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಒಂದು ಪದದಲ್ಲಿ ಉತ್ತರ ಕೊಟ್ಟ ಕಿಚ್ಚ ಸುದೀಪ್.. ಅಭಿಮಾನಿಗಳು ಖುಷ್..!

Share :

Published January 29, 2024 at 8:10am

Update January 29, 2024 at 8:39am

    #AskKichcha ಹ್ಯಾಶ್ ಟ್ಯಾಗ್​​ನಲ್ಲಿ ಸುದೀಪ್​ಗೆ ಪ್ರಶ್ನೆ ಕೇಳಲಾಗಿತ್ತು

    ಅಭಿಮಾನಿ ಕೇಳಿದ್ದ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ..?

    ಮೊನ್ನೆಯಷ್ಟೇ ಕಾಟೇರಾ ಚಿತ್ರದ ಬಗ್ಗೆಯೂ ರಿಪ್ಲೈ ನೀಡಿದ್ದ ಸುದೀಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ನಾನು ಯಾವಾಗಲು ಒಳ್ಳೆಯದನ್ನೇ ಹಾರೈಸುತ್ತೇನೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ #AskKichcha ಹ್ಯಾಶ್ ಟ್ಯಾಗ್​ನೊಂದಿಗೆ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದ್ದರು. ದರ್ಶನ್ ಹೆಗಲ ಮೇಲೆ ಸುದೀಪ್ ಕೈಹಾಕೊಂಡಿದ್ದ ಫೋಟೋ ಶೇರ್​ ಮಾಡಿದ್ದ ಅಭಿಮಾನಿಯೊಬ್ಬ, ಒಂದು ಪದದಲ್ಲಿ ದಾಸ ದರ್ಶನ್ ಬಗ್ಗೆ ಹೇಳಿ ಎಂದಿದ್ದ. ಅದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ್, ನಾನು ಯಾವಾಗಲೂ ಅವರಿಗೆ ಒಳ್ಳೆಯದನ್ನು ಬಯಸುತ್ತೇನೆ ಎಂದು ಉತ್ತರ ನೀಡಿದ್ದಾರೆ.

ಸುದೀಪ್​​ರ ಈ ರಿಪ್ಲೈ ನೋಡಿದ ಕಿಚ್ಚ ಮತ್ತು ದಾಸನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುದೀಪ್​​ ಹಾಕಿದ್ದ ಪೋಸ್ಟ್​ಗೆ ತಮ್ಮದೇ ರೀತಿಯಲ್ಲಿ ಅಭಿಮಾನಿಗಳು ಬಣ್ಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ನೀವು ದರ್ಶನ್ ನಟನೆಯ ಕಾಟೇರ ಚಿತ್ರವನ್ನು ನೋಡಿದ್ದೀರಾ ಎಂದು ಅಭಿಮಾನಿ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಸುದೀಪ್, ನಾನು ನೋಡಿಲ್ಲ ಎಂದು ನಿಮಗೆ ಹೇಳಿದ್ಯಾರು ಎಂದು ಗೊಂದಲದ ಉತ್ತರವನ್ನು ನೀಡಿದ್ದರು.

ಸುದೀಪ್ ಮಾಡಿದ್ದ ರಿಪ್ಲೈ ಕಂಡು, ಕಾಟೇರ ಚಿತ್ರವನ್ನು ಸುದೀಪ್ ನೋಡಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ದರ್ಶನ್ ಮತ್ತು ಸುದೀಪ್ ಸ್ನೇಹದ ವಿಚಾರ ಮುನ್ನಲೆಗೆ ಬಂದಿತ್ತು. ಇದೀಗ ಮತ್ತೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಸುದೀಪ್ ನೀಡಿರುವ ಉತ್ತರ ಚರ್ಚೆಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಒಂದು ಪದದಲ್ಲಿ ಉತ್ತರ ಕೊಟ್ಟ ಕಿಚ್ಚ ಸುದೀಪ್.. ಅಭಿಮಾನಿಗಳು ಖುಷ್..!

https://newsfirstlive.com/wp-content/uploads/2024/01/SUDEEP-DARSHAN.jpg

Load More