Breaking: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

author-image
Ganesh
Updated On
ನಟ ದರ್ಶನ್ ವಿರುದ್ಧ ರೊಚ್ಚಿಗೆದ್ದ ಒಕ್ಕಲಿಗ ಸಮುದಾಯದ ನಾಯಕರು; ಪೊಲೀಸ್ ಠಾಣೆಗೆ ದೂರು
Advertisment
  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಿದ ಪೊಲೀಸರು
  • ಬೆಂಗಳೂರಿನ ಆರ್ ಆರ್ ನಗರ ಮನೆಯಿಂದ ಅರೆಸ್ಟ್
  • ಯುವಕನೊಬ್ಬನ ಮೇಲೆ ಹಲ್ಲೆ ಕೇಸ್​ನಲ್ಲಿ ಬಂಧನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನೊಬ್ಬನ ಮೇಲೆ ಹಲ್ಲೆ ಕೇಸ್​ನಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ದರ್ಶನ್ ಅವರನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಆರ್​ಆರ್ ನಗರ ಮನೆಯಲ್ಲಿದ್ದ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ಗಿರೀಶ್ ನೇತೃತ್ವದ ತಂಡ ಅವರನ್ನು ಬಂಧಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ.. ದರ್ಶನ್ ಹಲ್ಲೆಯಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಹೊಡೆಯುವ ಬರದಲ್ಲಿ ಮರ್ಮಾಂಗಕ್ಕೆ ಒದೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment