/newsfirstlive-kannada/media/post_attachments/wp-content/uploads/2024/12/Darshan-Bail-and-Surgery.jpg)
ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿ ನೂರಾರು ದಿನ ಜೈಲಿನಲ್ಲಿ ಕಾಲ ಕಳೆದಿದ್ದ ನಟ ದರ್ಶನ್ ಅವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ದರ್ಶನ್ ಹಾಗೂ ಅವರ ಗ್ಯಾಂಗ್‌ನ 6 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಒಟ್ಟು 17 ಆರೋಪಿಗಳಲ್ಲಿ ಐವರು ಈಗಾಗಲೇ ಜೈಲಿನಿಂದ ರಿಲೀಸ್ ಆಗಿದ್ದಾರೆ. ದರ್ಶನ್​​​ ಬಿಟ್ಟು ಬೇಲ್​​ ಸಿಕ್ಕಂತ 6 ಮಂದಿ ಮುಂದಿನ ಸೋಮವಾರ ರಿಲೀಸ್​​ ಆಗುವ ಸಾಧ್ಯತೆ ಇದೆ. ಸೋಮವಾರ ಬಿಡುಗಡೆ ಆದರೆ 12 ಮಂದಿಗೆ ರಿಲೀಫ್​ ಸಿಕ್ಕಂತೆ ಆಗುತ್ತದೆ. ಈ ಕೇಸ್​​ನ A3 ಪವನ್, A4 ರಾಘವೇಂದ್ರ, A5 ನಂದೀಶ್, A9 ಧನರಾಜ್, A10 ವಿನಯ್‌ಗೆ ಇನ್ನೂ ಜಾಮೀನು ಸಿಕ್ಕಿಲ್ಲ.
/newsfirstlive-kannada/media/post_attachments/wp-content/uploads/2024/09/Darshan-Gang-A1-to-17-Photo.jpg)
ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಅವರಿಗೆ ಸರ್ಜರಿ ಮಾಡುವ ಅಗತ್ಯವಿದೆ ಎಂದು ವೈದ್ಯರು ಸಲಹೆ ಕೊಟ್ಟಿದ್ದರು. ಆ ಮೆಡಿಕಲ್ ರಿಪೋರ್ಟ್‌ನ ಆಧಾರದ ಮೇಲೆ ಹೈಕೋರ್ಟ್ ಮಧ್ಯಂತರ ಜಾಮೀನು ಕರುಣಿಸಿತ್ತು. ಇದೀಗ ಹೈಕೋರ್ಟ್ ದರ್ಶನ್ ಅವರಿಗೆ ಪೂರ್ಣಾವಧಿಯ ಜಾಮೀನು ಮಂಜೂರು ಮಾಡಿದೆ. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಈಗ ದರ್ಶನ್ ಅವರಿಗೆ ಸರ್ಜರಿ ಆಗುತ್ತಾ? ಇಲ್ವಾ? ಜಾಮೀನಿನ ಕಾರಣದಿಂದ ದರ್ಶನ್ ಸರ್ಜರಿ ಮುಂದೂಡಲಾಗುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಸದ್ಯ BGS ಆಸ್ಪತ್ರೆಯಲ್ಲಿರುವ ನಟ ದರ್ಶನ್ ಅವರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ದರ್ಶನ್‌ಗೆ ಸರ್ಜರಿ ಮಾಡುವುದು ಇನ್ನೂ ಫೈನಲ್ ಆಗಿಲ್ಲ. ವೈದ್ಯರು ಇನ್ನೂ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇನ್ನೂ 10 ದಿನಗಳ ಕಾಲ ದರ್ಶನ್ ಅವರಿಗೆ ಚಿಕಿತ್ಸೆ ಮುಂದುವರೆಯೋ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/11/darshan13.jpg)
ಸರ್ಜರಿಗೆ ಹಿಂದೇಟು ಯಾಕೆ?
ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಅವರನ್ನ ನಂಬಿ ನೂರಾರು ಕೋಟಿ ರೂಪಾಯಿ ಇನ್ವೆಸ್ಟ್ ಮಾಡಲಾಗಿದೆ. ಒಂದು ವೇಳೆ ಈಗಲೇ ದರ್ಶನ್ ಅವರು ಸರ್ಜರಿ ಮಾಡಿಕೊಂಡ್ರೆ ಡೇವಿಲ್ ಸೇರಿದಂತೆ ಉಳಿದ ಸಿನಿಮಾಗಳಿಗೆ ತೊಂದರೆ ಆಗಲಿದೆ. ಅಲ್ಲದೇ ದರ್ಶನ್ ಸಿನಿಮಾ ವೃತ್ತಿಗೆ ತೊಂದರೆ ಆಗೋ ಸಾಧ್ಯತೆ ಇದೆ.
ಇದನ್ನೂ ಓದಿ: ಜಾಮೀನು ಸಿಕ್ಕರೂ ಪವಿತ್ರಗೌಡಗೆ ನಿರಾಸೆ.. ರಿಲೀಸ್ ಆಗೋದು ಯಾವಾಗ..?
ದರ್ಶನ್ ಮತ್ತು ಕುಟುಂಬಸ್ಥರು ಸದ್ಯಕ್ಕೆ ಸರ್ಜರಿ ಬಗ್ಗೆ ಯಾವುದೇ ಗಟ್ಟಿ ನಿರ್ಧಾರ ತೆಗೆದುಕೊಂಡಿಲ್ಲ. ಕೆಲದಿನಗಳ ಕಾಲ ಚಿಕಿತ್ಸೆ ಪಡೆದು, ಆಮೇಲೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಜಾಮೀನು ಸಿಕ್ಕ ಮೇಲೆ ಮಗ ವಿನೀಶ್ ಹಾಗೂ ಕುಟುಂಬಸ್ಥರು ಬಿಜಿಎಸ್ ಆಸ್ಪತ್ರೆಗೆ ತೆರಳಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us