newsfirstkannada.com

ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ದರ್ಶನ್; ಕಾಟೇರ 1 ವಾರದ ಕಲೆಕ್ಷನ್​ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published January 5, 2024 at 6:20pm

Update January 5, 2024 at 6:15pm

    ನಟ ದರ್ಶನ್​ ಅಭಿನಯದ ಕಾಟೇರ ಸಿನಿಮಾ ಸೂಪರ್​ ಹಿಟ್​​

    ಕಳೆದ ಮೂರು ದಿನಗಳಿಂದ ಬಾಕ್ಸಾಫೀಸ್​ನಲ್ಲಿ ಕಾಟೇರ ಕಮಾಲ್​​​

    ಕಾಟೇರ ಕೇವಲ 1 ವಾರದಲ್ಲಿ ಮಾಡಿದ ಕಲೆಕ್ಷನ್​​ ಎಷ್ಟು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಕರಿಯರ್​​ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಕಾಟೇರ. ಇತ್ತೀಚೆಗೆ ರಿಲೀಸ್​​ ಆದ ಕಾಟೇರ ಸಿನಿಮಾಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಕಾಟೇರ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸಿದೆ. ಸದ್ಯದ ಮಾಹಿತಿ ಪ್ರಕಾರ ಕೇವಲ 1 ವಾರದಲ್ಲಿ ಕಾಟೇರ 100 ಕೋಟಿ ಕ್ಲಬ್​ ಸೇರಿದೆ.

ಈ ಸಂಬಂಧ ಟ್ವೀಟ್​ ಮಾಡಿರೋ ಸಿನಿಮಾ ಜರ್ನಲಿಸ್ಟ್​​ ಶಾರದ ಎಂಬುವರು ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ರಿಲೀಸ್​ ಆದ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ಕಾಟೇರ. ಕನ್ನಡಿಗರ ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ ಕಾಟೇರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದ್ದಾನೆ. ಮೊದಲ ದಿನ 20 ಕೋಟಿ ಕಲೆಕ್ಷನ್​ ಮಾಡಿದ್ದ ಕಾಟೇರ 2ನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಮೂರನೇ ದಿನ 20 ಕೋಟಿ ಮತ್ತು 4ನೇ ದಿನ 19 ಕೋಟಿ ಕಲೆಕ್ಷನ್​ ಮಾಡಿದೆ. 6ನೇ ದಿನಕ್ಕೆ 9.78 ಕೋಟಿ ಗಳಿಸೋ ಮೂಲಕ ಚಿತ್ರ 95.36 ಕೋಟಿ ರೂ. ಸಂಗ್ರಹಿಸಿತ್ತು. ಈಗ ಚಿತ್ರ ರಿಲೀಸ್​ ಆದ ಮೊದಲ ವಾರದಲ್ಲೇ ಬರೋಬ್ಬರಿ 104.58 ಕೋಟಿ ಗಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ದರ್ಶನ್; ಕಾಟೇರ 1 ವಾರದ ಕಲೆಕ್ಷನ್​ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/01/Kaatera.jpg

Load More