newsfirstkannada.com

WATCH: 20 ವರ್ಷದ ನಂತ್ರ ಮತ್ತೆ ಒಂದಾದ ದರ್ಶನ್, ಪ್ರೇಮ್; KVN ಪ್ರೊಡಕ್ಷನ್ಸ್ ಬಿಗ್ ಬಜೆಟ್ ಸಿನಿಮಾದ ಪ್ಲಾನ್ ಏನು?

Share :

Published August 25, 2023 at 5:44pm

Update August 25, 2023 at 7:16pm

  ಮತ್ತೆ ಒಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೋಗಿ ಪ್ರೇಮ್

  2003ರಲ್ಲಿ ಬಿಡುಗಡೆಯಾಗಿದ್ದ ಕರಿಯ ಸಿನಿಮಾ ಇಬ್ಬರಿಗೂ ಲಕ್ಕಿ

  20 ವರ್ಷಗಳ ಬಳಿಕ KVN ಪ್ರೊಡಕ್ಷನ್ಸ್‌ ಅಡಿಯಲ್ಲಿ ಬಿಗ್ ಪ್ಲಾನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೋಗಿ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷದ ಬಳಿಕ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಈ ಜೋಡಿ ರೆಡಿಯಾಗ್ತಿದೆ. 2003ರಲ್ಲಿ ಬಿಡುಗಡೆಯಾಗಿದ್ದ ಕರಿಯ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿತ್ತು. ಕರಿಯ ಸಿನಿಮಾಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್‌ ಪ್ರೇಮ್ ಹಾಗೂ ದರ್ಶನ್ ಇಬ್ಬರ ಸಿನಿ ಕೆರಿಯರ್‌ಗೆ ಬಿಗ್‌ ಬ್ರೇಕ್ ಕೊಟ್ಟಿತ್ತು. ಇದೀಗ 20 ವರ್ಷದ ನಂತರ ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್​ ಚಿತ್ರಕ್ಕಾಗಿ ಪ್ರೇಮ್-ದರ್ಶನ್ ಒಂದಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಅವರು ದರ್ಶನ್ ಹಾಗೂ ಪ್ರೇಮ್ ಜೊತೆಗೂಡಿ ಬಿಗ್ ಬಜೆಟ್ ಸಿನಿಮಾಗೆ ಪ್ಲಾನ್ ಮಾಡಿದ್ದಾರೆ.

ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಸಿನಿಮಾ ಮಾಡೋ ಸುದ್ದಿಯನ್ನ ಕೆವಿಎನ್‌ ಪ್ರೊಡಕ್ಷನ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಇತ್ತೀಚೆಗೆ ಈ ಬಗ್ಗೆ ಮೀಟಿಂಗ್ ಮಾಡಿದ್ದು, ನಟ ದರ್ಶನ್, ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಪ್ರೇಮ್ ಭಾಗವಹಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಅವರು ದರ್ಶನ್ ಹಾಗೂ ಪ್ರೇಮ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಪ್ರೇಮ್, ದರ್ಶನ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್‌ ಮುಖ್ಯಸ್ಥರು ಮಾತುಕತೆ ಮಾಡಿರೋ ವಿಡಿಯೋವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ತನ್ನ ಯ್ಯೂಟೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ಭೇಟಿಯಿಂದ 2003ರಲ್ಲಿ ಬಿಗ್‌ ಹಿಟ್ ಕೊಟ್ಟ ದರ್ಶನ್, ಪ್ರೇಮ್ ಜೋಡಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡುವ ನಿರೀಕ್ಷೆ ಹೆಚ್ಚಾಗಿದೆ.

ಕೆವಿಎನ್‌ ಪ್ರೊಡಕ್ಷನ್ಸ್ ಕನ್ನಡ ಚಿತ್ರರಂಗದಲ್ಲೇ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ. ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಕೆವಿಎನ್ ಪ್ರೊಡಕ್ಷನ್ಸ್‌ ರಾಜಮೌಳಿ ನಿರ್ದೇಶನದ RRR ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಸದ್ಯ ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಕೆ.ಡಿ ಚಿತ್ರವನ್ನ ಜೋಗಿ ಪ್ರೇಮ್ ಅವರೇ ನಿರ್ದೇಶನ ಮಾಡುತ್ತಾ ಇದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡಬೇಕು ಅಂತಾ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಅವರು ಬಹಳ ವರ್ಷದಿಂದ ಪ್ರಯತ್ನ ಮಾಡ್ತಿದ್ದರು. ಒಳ್ಳೆಯ ನಿರ್ದೇಶಕರಿಗಾಗಿ ಕಾಯಲಾಗುತ್ತಿತ್ತು. ಇದೀಗ ಜೋಗಿ ಪ್ರೇಮ್ ಕೆವಿಎನ್‌ ಪ್ರೊಡಕ್ಷನ್ಸ್‌ ಟೀಮ್ ಸೇರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆವಿಎನ್​ ಪ್ರೊಡಕ್ಷನ್ಸ್‌ನಲ್ಲಿ ದರ್ಶನ್ ಸಿನಿಮಾ ಮಾಡೋ ಸುದ್ದಿ ಅನೌನ್ಸ್​ ಆಗಿದೆ.

ಸದ್ಯ ನಟ ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದಲ್ಲಿ ಕಾಟೇರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಾಟೇರಾ ಸಿನಿಮಾವನ್ನು ರಾಕ್​ಲೈನ್ ವೆಂಕಟೇಶ್​ ನಿರ್ಮಾಣ ಮಾಡುತ್ತಿದ್ದು, ಮಾಲಾಶ್ರೀ ಮಗಳು ಅರಾಧನಾ ಹೀರೋಯೀನ್ ಆಗಿ ನಟಿಸುತ್ತಿದ್ದಾರೆ. ಈ ಕಾಟೇರ ಸಿನಿಮಾದ ಬಳಿಕ ದರ್ಶನ್ ಹಾಗೂ ಪ್ರೇಮ್ ಜೊತೆಗೂಡಿ ಬಿಗ್ ಬಜೆಟ್ ಸಿನಿಮಾ ಮಾಡಲು ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: 20 ವರ್ಷದ ನಂತ್ರ ಮತ್ತೆ ಒಂದಾದ ದರ್ಶನ್, ಪ್ರೇಮ್; KVN ಪ್ರೊಡಕ್ಷನ್ಸ್ ಬಿಗ್ ಬಜೆಟ್ ಸಿನಿಮಾದ ಪ್ಲಾನ್ ಏನು?

https://newsfirstlive.com/wp-content/uploads/2023/08/Challenging-Star-Darshan.jpg

Load More