Advertisment

ನನಗೆ ಊಟ ಮಾಡಿಸ್ತಾ ಇದ್ದಳು​.. ದುಡ್ಡು ಬೇಡ ಸರ್; ಸಚಿವ ಚಲುವರಾಯಸ್ವಾಮಿ ಮುಂದೆ ತಂದೆ ಕಣ್ಣೀರು

author-image
Veena Gangani
Updated On
ನನಗೆ ಊಟ ಮಾಡಿಸ್ತಾ ಇದ್ದಳು​.. ದುಡ್ಡು ಬೇಡ ಸರ್; ಸಚಿವ ಚಲುವರಾಯಸ್ವಾಮಿ ಮುಂದೆ ತಂದೆ ಕಣ್ಣೀರು
Advertisment
  • ಮೃತ ಮಗುವಿನ ಕುಟುಂಬಸ್ಥರಿಗೆ ಪರಿಹಾರ ನೀಡಿದ ಕೃಷಿ ಸಚಿವ
  • ಯಾವ ತಂದೆ ತಾಯಿಗೂ ಇಂತಹ ಪರಿಸ್ಥಿತಿ ಬರಬಾರದು ಅಂತ ಕಣ್ಣೀರು
  • ಚಲುವರಾಯಸ್ವಾಮಿ ಮುಂದೆ ಮಗಳು ಕಳೆದುಕೊಂಡ ಅಶೋಕ್ ಆಕ್ರಂದನ

ಮಂಡ್ಯ: ನಿನ್ನೆ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗು ಬಲಿಯಾಗಿತ್ತು. ವಾಣಿ-ಅಶೋಕ್ ಪುತ್ರಿ ಹೃತೀಕ್ಷಾಗೆ ನಾಯಿ ಕಚ್ಚಿತ್ತು. ಹೀಗಾಗಿ ಆ ಕೂಡಲೇ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

Advertisment

ಇದೇ ವೇಳೆ ಟ್ರಾಫಿಕ್​ ಪೊಲೀಸರು ಹೆಲ್ಮೆಟ್ ತಪಾಸಣೆಗೆಂದು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್​ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಹೃತೀಕ್ಷಾಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ.

ಇದನ್ನೂ ಓದಿ:ಮಂಡ್ಯದಲ್ಲಿ 3 ವರ್ಷದ ಮಗು ದುರಂತ.. ಸ್ಥಳದಲ್ಲಿದ್ದ ಮೂವರು ಟ್ರಾಫಿಕ್‌ ಪೊಲೀಸರಿಗೆ ಸಸ್ಪೆಂಡ್ ಶಿಕ್ಷೆ

publive-image

ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮುದ್ದಾದ ಮಗುವನ್ನು ಕಳೆದುಕೊಂಡು ಪೋಷಕರು ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಶವವಿಟ್ಟು ಅಳುತ್ತಿದ್ದರು. ಅಲ್ಲದೇ ಪೊಲೀಸರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಆ ಬೆನ್ನಲ್ಲೇ ಸ್ಥಳದಲ್ಲಿದ್ದ ಎಲ್ಲಾ 3 ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿತ್ತು.

Advertisment

publive-image

ಇದೀಗ ಮಗಳನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದ ಪೋಷಕರನ್ನು ಭೇಟಿಯಾಗಲು ಖುದ್ದು ಸಚಿವ ಚಲುವರಾಯಸ್ವಾಮಿ ಬಂದಿದ್ದರು. ಈ ವೇಳೆ ತಂದೆ ಅಶೋಕ್ ಮೊಬೈಲ್‌ನಲ್ಲಿ ಸಚಿವ ಚಲುವರಾಯಸ್ವಾಮಿ‌ಗೆ ಮಗಳ ಫೋಟೋ ತೋರಿಸಿದ್ದಾರೆ. ನೋಡಿ ಸರ್ ನನ್ನ ಮಗಳು ಹೇಗ್ ಇದ್ದಳು. ನನಗೆ ಅನ್ನವನ್ನು ತಿನ್ನಿಸುತ್ತಿದ್ದಳು. ಪಪ್ಪಾ ನನಗೆ ನೀನೇ ಸ್ನಾನ ಮಾಡಿಸು ಅಂತಾ ಹೇಳುತ್ತಿದ್ದಳು. ಈಗ ನಾನ್ ಏನು ಮಾಡೋದು ಸರ್ ಅಂತ ಕಣ್ಣೀರು ಹಾಕಿದ್ದಾರೆ. ಅಲ್ಲದೇ ನನ್ನ ಮಗಳಿಗೆ ಮದ್ದೂರಲ್ಲಿ ಚಿಕಿತ್ಸೆ ಕೊಟ್ಟಿದ್ರೆ ಹೀಗೆ ಆಗ್ತಾ ಇರಲಿಲ್ಲ. ಒಂದು ಇಂಜಕ್ಷನ್ ಕೊಟ್ಟಿದ್ರೆ ನಾವು ಮಂಡ್ಯಗೆ ಹೋಗ್ತಾ ಇರಲಿಲ್ಲ. ಮಂಡ್ಯಗೆ ಹೋಗಬೇಕು ಅಂದಾಗ ಅಂಬ್ಯುಲೆನ್ಸ್ ಕೊಡಿ ಅಂತಾ ಕೇಳಿದ್ದೆ. ಅವರು ನಮಗೆ ಆಂಬ್ಯುಲೆನ್ಸ್ ಇಲ್ಲ ಅಂದ್ರು. ಬಳಿಕ ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ಪೊಲೀಸರಿಂದ ನನ್ನ ಮಗಳು ಸತ್ತಳು ಅಂತ ಕಣ್ಣೀರು ಇಟ್ಟಿದ್ದಾರೆ. ಇದಾದ ಬಳಿಕ ಅಶೋಕ್ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದುವರೆ ಲಕ್ಷ ಹಣವನ್ನು ಪರಿಹಾರವಾಗಿ ಸಚಿವ ಚಲುವರಾಯಸ್ವಾಮಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment