/newsfirstlive-kannada/media/post_attachments/wp-content/uploads/2025/06/CMR_TIGER_NEW.jpg)
ಚಾಮರಾಜನಗರ: ತಾಯಿ ಹುಲಿ ಸೇರಿ ನಾಲ್ಕು ಮರಿಗಳು ಉಸಿರು ಚೆಲ್ಲಿದ ಬೆನ್ನಲ್ಲೇ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದ ಗುಂಡ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಜೀವ ಕಳೆದುಕೊಂಡಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಉದ್ಯಾನವನದಲ್ಲಿ 4 ರಿಂದ 5 ವರ್ಷದ ಹೆಣ್ಣು ಹುಲಿ ಕಣ್ಮುಚ್ಚಿದೆ. ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಹುಲಿ ಸಹಜವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದನ್ನೂ ಓದಿ:ಬಾಲಿವುಡ್ ಹೀರೋಯಿನ್.. ಹುಡುಗರು ಸಿನಿಮಾದ ‘ಪಂಕಜಾ’ ಹಾಡಿನ ನಟಿ ಕಾರ್ಡಿಕ್ ಅರೆಸ್ಟ್ನಿಂದ ನಿಧನ
ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸಲಾಗುತ್ತಿದೆ. ವರದಿ ಬಂದ ಮೇಲೆ ನಿಖರವಾದ ಮಾಹಿತಿ ತಿಳಿಯಲಿದೆ. ಹಸುವಿಗೆ ವಿಷಪ್ರಾಶನ ಮಾಡಿದ್ದರಿಂದ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿ ಹುಲಿಗಳು ಜೀವ ಕಳೆದುಕೊಂಡಿದ್ದವು. ಇದರ ಬೆನ್ನಲ್ಲೇ ಹೆಣ್ಣು ಹುಲಿಯೊಂದು ಪ್ರಾಣ ಬಿಟ್ಟಿರುವುದು ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ