5 ಹುಲಿಗಳ ಅಂತ್ಯ ಕೇಸ್​​.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ

author-image
Bheemappa
Updated On
5 ಹುಲಿಗಳ ಅಂತ್ಯ ಕೇಸ್​​.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ
Advertisment
  • 30ಕ್ಕೂ ಹೆಚ್ಚು ಜನರನ್ನ ವಿಚಾರಣೆ ನಡೆಸಿರುವ ತನಿಖಾ ತಂಡ
  • ಹುಲಿಗಳಿದ್ದ ಸ್ಥಳದಲ್ಲಿ ಕಳೇಬರವಿದ್ದ ಹಸುವಿನ ಮಾಲೀಕ ಪತ್ತೆ
  • ಇಬ್ಬರನ್ನು ಅಜ್ಞಾತ ಸ್ಥಳದಲ್ಲಿಟ್ಟು ಅಧಿಕಾರಿಗಳಿಂದ ವಿಚಾರಣೆ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗನನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ.

ಶಿವಣ್ಣ ಹಾಗೂ ಇವರ ಮಗ ಮಾದ ಈ ಇಬ್ಬರು ಸದ್ಯ ಅರಣ್ಯ ಅಧಿಕಾರಿಗಳ ವಶದಲ್ಲಿದ್ದಾರೆ. ತಾಯಿ ಹುಲಿ ಹಾಗೂ 4 ಮರಿಗಳು ಜೀವ ಕಳೆದುಕೊಂಡ ಕೇಸ್​ಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಮಂದಿಯನ್ನು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು. ಇದರಲ್ಲಿ 7 ಜನರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ವೇಳೆ ಹುಲಿಗಳು ಜೀವ ಕಳೆದುಕೊಂಡ ಜಾಗದಲ್ಲಿ ಪತ್ತೆ ಆಗಿದ್ದ ಹಸುವಿನ ಮಾಲೀಕ ಪತ್ತೆ ಆಗಿದ್ದಾರೆ.

ಇದನ್ನೂ ಓದಿ:ಚಿನ್ನ ಖರೀದಿ ಮಾಡುವವರಿಗೆ ಗುಡ್​​ನ್ಯೂಸ್​.. ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ!

publive-image

ಶಿವಣ್ಣ ಎಂಬಾತನಿಗೆ ಹಸು ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ‌. ಈ ಹಿನ್ನೆಲೆಯಲ್ಲಿ ಶಿವಣ್ಣ ಹಾಗೂ ಇವರ ಪುತ್ರ ಮಾದನನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆಯೇ ಇಬ್ಬರನ್ನೂ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಮಗ ಮಾದ ವಿಷ ಇಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಆದರೆ ನಿಖರವಾಗಿ ತಿಳಿದಿಲ್ಲ.

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಉಸಿರು ಚೆಲ್ಲಿದ ಬೆನ್ನಲ್ಲೇ ಕಣ್ಮುಚ್ಚಿದ ಮತ್ತೊಂದು ಹುಲಿ

ಅನುಮಾನ ಇರುವುದರಿಂದ ಅಪ್ಪ-ಮಗನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಮತ್ತೊಂದೆಡೆ ಜೀವ ಹೋಗಿರುವ ಹಸುವಿಗೆ ಬೇರೆಯವರು ವಿಷ ಬೆರೆಸಿರಬಹುದು ಎಂಬ ಅನುಮಾನ ಕೂಡ ಇದೆ. ಈ ಇಬ್ಬರ ಜೊತೆಗೆ ಮತ್ತೈದು ಜನರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಹುಲಿ, ಚಿರತೆ ದಾಳಿಗೆ ಬಲಿಯಾದ ಜಾನುವಾರುಗಳ ಮಾಲೀಕರನ್ನು ಹಾಗೂ ಕಾಡಿಗೆ ಹಸು ಬಿಡುವವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment