newsfirstkannada.com

ನಗುನಗುತ್ತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು

Share :

Published April 29, 2024 at 7:56am

Update April 29, 2024 at 10:35am

    ‘ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಗಂಭೀರವಾಗುತ್ತ ಬಂದಿತ್ತು’

    ‘ಡಾಕ್ಟರ್​ ಎಲ್ಲ ರೀತಿ ಶ್ರಮ ವಹಿಸಿದ್ರೂ ಯಾವುದೇ ಪ್ರಯತ್ನ ಕೈಗೂಡಲಿಲ್ಲ’

    ‘ಜಯಲಕ್ಷ್ಮೀಪುರಂ ನಿವಾಸದಲ್ಲಿ ಮೊದಲು ವಿಧಿವಿಧಾನಗಳನ್ನು ಪೂರೈಸಿತ್ತೇವೆ’

ಬೆಂಗಳೂರು: ಬಿಜೆಪಿ ಸಂಸದ ಹಾಗೂ ಹಿರಿಯ ರಾಜಕಾರಣಿ ವಿ ಶ್ರೀನಿವಾಸ್ ಪ್ರಸಾದ್ (76) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಡರಾತ್ರಿ 1:20ಕ್ಕೆ ನಗರದ ಓಲ್ಡ್ ಏರ್​​ಪೋರ್ಟ್​​ ರಸ್ತೆ ಬಳಿಯಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ಸಂಸದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾಗಿದ್ದು, ಅವರ ಹಿರಿಯ ಪುತ್ರಿ ಪ್ರತಿಮಾ ಪ್ರಸಾದ್ ಅವರು ನ್ಯೂಸ್​ಫಸ್ಟ್​ ಜೊತೆ ಮಾತನಾಡಿ ಭಾವುಕರಾಗಿದ್ದಾರೆ. ಕಣ್ಣೀರು ಹಾಕುತ್ತಲೇ ಮಾತನಾಡಿದ ಪ್ರತಿಮಾ ಪ್ರಸಾದ್ ಅವರು, ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಗಂಭೀರವಾಗಿತ್ತು. ಮಣಿಪಾಲ್​ನ ಎಲ್ಲ ವೈದ್ಯರು ಹೆಚ್ಚಿನ ಶ್ರಮ ವಹಿಸಿದರು. ಆದರೆ ಯಾವುದೇ ಪ್ರಯತ್ನ ಕೈಗೂಡದ ಕಾರಣ ಇಂದು ಅವರು ನಮ್ಮನ್ನು ಅಗಲಿದ್ದಾರೆ. ರಾತ್ರಿ 1:20ಕ್ಕೆ ಕೊನೆಯುಸಿರೆಳೆದರು ಎಂದು ಭಾವುಕರಾದರು.

ಕಳೆದ ಸೋಮವಾರ ಅಪ್ಪನ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ವಿ. ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅದು ಏನಾಯಿತೋ ಏನೋ ಮತ್ತೆ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಯಾವುದೂ ಕೈಗೂಡದ ಕಾರಣ ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

ಮೊದಲು ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ವಿಧಿವಿಧಾನಗಳನ್ನು ಪೂರೈಸಿದ ನಂತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ. ಮೈಸೂರಿನಲ್ಲಿ ಒಂದು ಸಾರ್ವತ್ರಿಕ ಸ್ಥಳವನ್ನು ಗುರುತಿಸಿ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಶ್ರೀನಿವಾಸ್ ಪ್ರಸಾದ್ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದರು. ತಮ್ಮ ಜರ್ನಿಯಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಅಂದುಕೊಂಡಿರಲಿಲ್ಲ. ಇದು ಬಹಳ ದುಃಖಕರವಾದ ವಿಷಯ. ಇದು ಕರ್ನಾಟಕ ಜನರಿಗೆ ದೊಡ್ಡದಾದ ನಷ್ಟವಾಗಿದೆ. ಅವರಿಗೆ ಹೈಲಿ ಡಯಾಬಿಟಿಕ್ ಸಮಸ್ಯೆ ಇತ್ತು. 11 ವರ್ಷದ ಹಿಂದೆ ಅವರಿಗೆ ರಿನಲ್ ಟ್ರಾನ್ಸ್​ಪ್ಲಾಂಟ್ ಆಗಿತ್ತು. ಅದನ್ನೂ ಫೈಟ್ ಮಾಡಿದ್ದರು ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಯ ಡಾಕ್ಟರ್​ ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ತಂದೆಯವರನ್ನು ಉಳಿಸುವುದಕ್ಕಾಗಿ ತುಂಬಾ ಪ್ರಯತ್ನ ಮಾಡಿದರು. ಆದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸಾಕಷ್ಟು ಶ್ರಮಪಟ್ಟ ವೈದ್ಯರಿಗೆ ತುಂಬು ಹೃದಯದ ಧನ್ಯವಾದಗಳು. ಯಾವಾಗಲೂ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಬರುತ್ತಿದ್ದರು. ಅವರ ಕೊನೆಯುಸಿರು ಕೂಡ ಮಣಿಪಾಲ್​ನಲ್ಲೇ ಆಗಿದೆ. ತಂದೆಯವರು ಬದುಕಿದ್ದಾಗ ಯಾವಾಗಲೂ ನಗು ನಗ್ತಾ ನನ್ನನ್ನು ಬೀಳ್ಕೊಡಿ ಅಂತಾ ನಮ್ಮನ್ನು ಕೇಳುತ್ತಿದ್ರು. ಜನರಲ್ಲೂ ಕೂಡ ಅದನ್ನೇ ಮನವಿ ಮಾಡ್ತೀನಿ, ಯಾವುದೇ ಸಮಸ್ಯೆ ಮಾಡಿಕೊಳ್ಳದೇ ಅವರನ್ನು ಕಳಿಸಿಕೊಡಬೇಕು ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಗುನಗುತ್ತಾ ಕಳುಹಿಸಿಕೊಡಿ ಎಂದಿದ್ರಂತೆ ಶ್ರೀನಿವಾಸ್ ಪ್ರಸಾದ್.. ಅಪ್ಪನ ಕುರಿತು ಹಿರಿಯ ಮಗಳು ಭಾವುಕ ನುಡಿಗಳು

https://newsfirstlive.com/wp-content/uploads/2024/04/SRINIVAS_PRASAD-1.jpg

Load More