newsfirstkannada.com

ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

Share :

Published April 29, 2024 at 7:15am

    ಮೈಸೂರಿಗೆ ಹೋಗಿ ಕೊನೆಯದಾಗಿ ಇದೊಂದು ಮಾಡಬೇಕೆಂದಿದ್ದರು

    ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಪ್ರಸಾದ್​

    ರಾತ್ರಿ 10 ಗಂಟೆಯಿಂದ 1 ಗಂಟೆವರೆಗೆ ಏನೆಲ್ಲ ಆಯಿತು?

ಬೆಂಗಳೂರು: ಚಾಮರಾಜನಗರ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ವಿ ಶ್ರೀನಿವಾಸ್ ಪ್ರಸಾದ್ (76) ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ತಡರಾತ್ರಿ 1:20ಕ್ಕೆ ಓಲ್ಡ್ ಏರ್ಪೋರ್ಟ್ ರಸ್ತೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ಶ್ರೀನಿವಾಸ್ ಪ್ರಸಾದ್ ನಿಧನ ಹಿನ್ನೆಲೆಯಲ್ಲಿ ಅವರ ಅಳಿಯ ಹರ್ಷವರ್ಧನ್ ಅವರು ನ್ಯೂಸ್​ಫಸ್ಟ್​ ಜೊತೆ ಮಾತನಾಡಿ.. ಅವರನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿದ್ದೇವು. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿತ್ತು. ಆದರೆ ಉಸಿರಾಟದ ತೊಂದರೆ ಹೆಚ್ಚಾಗುತ್ತಾ ಬಂದಿತ್ತು. ಹೀಗಾಗಿ ಮೂರು ದಿನದ ಹಿಂದೆ ವೆಂಟಿಲೇಟರ್​ನಲ್ಲಿ ಇಡಬೇಕಾಗಿತ್ತು. ಮಣಿಪಾಲ್ ಆಸ್ಪತ್ರೆ ವೈದ್ಯರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಕಾರ್ಡಿಯಾಕ್ ಅರೆಸ್ಟ್ ಆಗಿ ರಾತ್ರಿ 1:30ರ ಸುಮಾರಿಗೆ ನಿಧನ ಹೊಂದಿದರು ಎಂದಿದ್ದಾರೆ.

ಅವರಿಗೆ ಮಂಡಿನೋವು ಏನೂ ಇರಲಿಲ್ಲ. ಅವರ ಕಾಲಿಗೆ ಒಂದು ಗಾಯವಾಗಿತ್ತು. ಅದಕ್ಕೆ ಮೈಸೂರಿನ ಮಣಿಪಾಲ್​ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅದು ಸರಿಯಾಗಿ ವಾಸಿಯಾಗಿರಲಿಲ್ಲ. ಮತ್ತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. 11 ವರ್ಷಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಆಗಿತ್ತು. ಬಿಪಿ, ಶುಗರ್ ಎಲ್ಲ ಮೊದಲಿನಿಂದಲೂ ಇತ್ತು. ನಿನ್ನೆ 3-4 ದಿನದ ಹಿಂದೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ತೀರ ಅಸ್ವಸ್ಥರಾದಂತೆ ಆದರು. ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಸ್ವಲ್ಪ ಸುಧಾರಣೆ ಕಂಡರೂ ರಾತ್ರಿ 10 ಗಂಟೆಯಿಂದ ಉಸಿರಾಡುವುದು ಕಷ್ಟವಾಯಿತು. ಹೀಗಾಗಿ ಕಾರ್ಡಿಯಾಕ್ ಅರೆಸ್ಟ್ ಆಗಿ ಕೊನೆಯುಸಿರೆಳೆದರು ಎಂದರು.

ಇದನ್ನೂ ಓದಿ: Breaking: ಬಿಜೆಪಿ ಹಿರಿಯ ನಾಯಕ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ

ಸಿಎಂ ಸಿದ್ದರಾಮಯ್ಯ ಭೇಟಿಯಾದಾಗ ಆರೋಗ್ಯವಾಗಿದ್ದರು. ಆಸ್ಪತ್ರೆಗೆ ದಾಖಲಾದ ಮೇಲೆ ಮೈಸೂರಿಗೆ ಬಂದು ವೋಟಿಂಗ್ ಮಾಡಬೇಕು ಎನ್ನುವುದು ಅವರಿಗೆ ಬಹಳ ಆಸೆ ಇತ್ತು. ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತಿದ್ದು, ಇಂದು ಮೈಸೂರಿನ ಯಾವುದಾದರೂ ಗ್ರೌಂಡ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂತ್ಯಸಂಸ್ಕಾರದ ಬಗ್ಗೆ ಕುಟುಂಬದ ಸದಸ್ಯರ ಜೊತೆ ಕುಳಿತು ಎಲ್ಲಿ ಮಾಡಬೇಕು ಎಂದು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ

https://newsfirstlive.com/wp-content/uploads/2024/04/SRINIVAS_PRASAD_NEW.jpg

Load More