newsfirstkannada.com

ಕೊನೆಗೂ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟ ಜಾರ್ಖಂಡ್ ರಾಜ್ಯಪಾಲರು, ಕಂಡೀಷನ್ ಅಪ್ಲೈ..!

Share :

Published February 2, 2024 at 7:14am

Update February 2, 2024 at 7:18am

    ಇಂದು ನೂತನ ಸಿಎಂ ಆಗಿ ಚಂಪೈ ಸೊರೇನ್ ಪದಗ್ರಹಣ

    ಹೇಮಂತ್ ಸೊರೇನ್ ಬಂಧನ, ಸಿಎಂ ಸ್ಥಾನಕ್ಕೆ ರಾಜೀನಾಮೆ

    600 ಕೋಟಿ ಅಕ್ರಮಣ ವರ್ಗಾವಣೆ ಕೇಸ್​ನಲ್ಲಿ ಸೊರೇನ್ ಅರೆಸ್ಟ್

ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ​ಸಿಎಂ ಹೇಮಂತ್​ ಸೊರೇನ್​​​ ಬಂಧನ ಬೆನ್ನಲ್ಲೇ ಜಾರ್ಖಂಡ್​​ದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ರಾಜಭವನದಿಂದ ಪ್ರಮಾಣ ವಚನ ಸ್ವೀಕಾರಕ್ಕೆ ಕರೆ ಬಂದಿಲ್ಲವಾದ್ದರಿಂದ ಆಪರೇಷನ್​ ಭೀತಿ ಎದುರಾಗಿತ್ತು.

ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಕೊನೆಗೂ ಸರ್ಕಾರ ರಚನೆಗೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಆಹ್ವಾನ ನೀಡಿದ್ದಾರೆ. ಜಾರ್ಖಂಡ್​​ನ ಮುಂದಿನ ಸಿಎಂ ಆಗಿ ಚಂಪೈ ಅವರು ಇವತ್ತು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಚಂಪೈ ಸೊರೇನ್ ಅವರು, ತಮಗೆ ಜಾರ್ಖಂಡ್​ ಮುಕ್ತಿ ಮೋರ್ಚಾದ 43 ಶಾಸಕರ ಬೆಂಬಲ ಇದೆ ಎಂದಿದ್ದಾರೆ.

ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿರುವ ರಾಜ್ಯಪಾಲರು 10 ದಿನದಲ್ಲಿ ಬಹುಮತವನ್ನು ಸಾಬೀತು ಮಾಡಬೇಕು ಎಂದು ಷರತ್ತು ವಿಧಿಸಿದ್ದಾರೆ. 81 ವಿಧಾನಸಭಾ ಸ್ಥಾನಗಳ ಹೊಂದಿರುವ ಜಾರ್ಖಂಡ್​ನಲ್ಲಿ I.N.D.I.A. ಒಕ್ಕೂಟಕ್ಕೆ ಬಹುಮತ ಇದೆ. ಹೇಮಂತ್ ಸೊರೇನ್ ಆಡಳಿತದ ಅವಧಿಯಲ್ಲಿ ಒಟ್ಟು 48 ಸ್ಥಾನಗಳ ಬೆಂಬಲ ಇತ್ತು. ಜೆಎಂಎಂ 29, ಕಾಂಗ್ರೆಸ್​ 17, ಆರ್​ಜೆಡಿ 1, ಸಿಪಿಐ 1 ಬೆಂಬಲ ಇತ್ತು. ಎನ್​​ಡಿಎ ಒಕ್ಕೂಟವು 32 ಸ್ಥಾನಗಳೊಂದಿಗೆ ವಿರೋಧ ಪಕ್ಷದಲ್ಲಿ ಕೂತಿದೆ. ಸದ್ಯ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಚಂಪೈ ಸೊರೇನ್​ಗೆ ಎಷ್ಟು ಶಾಸಕರ ಬೆಂಬಲ ಸಿಗುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಜಾರ್ಖಂಡ್​ ಟೈಗರ್​ ಎಂದೇ ಚಂಪೈ​ ಪ್ರಖ್ಯಾತಿ
67 ವರ್ಷದ ಚಂಪೈ ಸೊರೆನ್ ಸೆರೈಕೆಲಾ ಕ್ಷೇತ್ರದ ಶಾಸಕರು.. ಇದುವರೆಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಶಿಬು ಸೊರೆನ್ ಸ್ಥಾಪಿಸಿದ ಜೆಎಂಎಂ ಪಕ್ಷದ ಉಪಾಧ್ಯಕ್ಷರು ಕೂಡ ಹೌದು. ಇನ್ನು ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಹೀಗಾಗಿಯೇ ಅವರನ್ನು ಜಾರ್ಖಂಡ್​ ಟೈಗರ್​ ಎಂದು ಕರೆಯುತ್ತಾರೆ. ಹೇಮಂತ್ ಸೊರೆನ್ ಅವರ ನಿಷ್ಠಾವಂತ ಬೆಂಬಲಿಗರು ಆಗಿರುವ ಚಂಪೈ ಹೇಮಂತ್​ ಸೊರೇನ್​ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿದ್ದಾರೆ. ಸಾರಿಗೆ ಸೇರಿ ವಿವಿಧ ಖಾತೆಗಳನ್ನು ಚಂಪೈ ಸೊರೇನ್ ನಿಭಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟ ಜಾರ್ಖಂಡ್ ರಾಜ್ಯಪಾಲರು, ಕಂಡೀಷನ್ ಅಪ್ಲೈ..!

https://newsfirstlive.com/wp-content/uploads/2024/02/zarkhand.jpg

Load More