/newsfirstlive-kannada/media/post_attachments/wp-content/uploads/2025/05/IPL_Robotic_Dog.jpg)
ದಿ ಗ್ರ್ಯಾಂಡ್ ಐಪಿಎಲ್ ಯಶಸ್ವಿಯಾಗಿ ಸಾಗುತ್ತಿದ್ದು ಈಗಾಗಲೇ ಪ್ಲೇಆಫ್ ಹಂತದ ಲೆಕ್ಕಾಚಾರ ನಡೆಯುತ್ತಿದೆ. ಪಂದ್ಯ ನಡೆಯುವಾಗ ಹಾಗೂ ಆಟಗಾರರು ಅಭ್ಯಾಸ ಮಾಡುವಾಗ ರೋಬೋ ನಾಯಿಯೊಂದು ಮೈದಾನದಲ್ಲಿ ಕಾಣಿಸುತ್ತಿರುತ್ತದೆ. ಇದೇ ರೋಬೋ ನಾಯಿ ಈಗ ಬಿಸಿಸಿಐ ಅನ್ನು ಕೋರ್ಟ್ಗೆ ಎಳೆದು ತಂದು ನಿಲ್ಲಿಸಿದೆ. ಅಸಲಿಗೆ ಏನಿದು ರೋಬೋ ನಾಯಿ ಚಂಪಕ್?.
ಬಿಸಿಸಿಐ ಹಾಗೂ ಐಪಿಎಲ್ ಈ ಎರಡು ಸೇರಿ ಪಂದ್ಯಗಳು ನಡೆಯುವಾಗ ಎಐ ತಂತ್ರಜ್ಞಾನದ ರೋಬೋಟಿಕ್ ನಾಯಿಯನ್ನು ಏಪ್ರಿಲ್ 20 ರಂದು ಪರಿಚಯ ಮಾಡಿದ್ದವು. ಅಲ್ಲದೇ ಇದಕ್ಕೆ ಚಂಪಕ್ ಎಂದು ಹೆಸರನ್ನು ನಾಮಕರಣ ಮಾಡಿದ್ದರು. ಈ ರೋಬೋಟಿಕ್ ಪರಿಚಯ ಮಾಡಿದ್ದು ಏನೂ ಸಮಸ್ಯೆ ಆಗಿಲ್ಲ. ಆದ್ರೆ ರೋಬೋ ನಾಯಿಗೆ ನಾಮಕರಣ ಮಾಡಿದ ಹೆಸರು ಬಿಸಿಸಿಐ ಹಾಗೂ ಐಪಿಎಲ್ಗೆ ತೊಂದರೆ ತಂದಿಟ್ಟಿದೆ.
ಇದನ್ನೂ ಓದಿ: ನಿಮ್ಮ ಮಕ್ಕಳು ಕಲಿಯುವ ಶಾಲೆ, ಕಲಿಸುವ ಶಿಕ್ಷಕರು ಹೇಗಿರಬೇಕು..? ಪೋಷಕರು ಓದಲೇಬೇಕಾದ ಸ್ಟೋರಿ
ರೋಬೋ ನಾಯಿಗೆ ಚಂಪಕ್ ಎಂದು ಹೆಸರನ್ನು ನಾಮಕರಣ ಮಾಡುವುದರ ಮೂಲಕ ನಮ್ಮ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘನೆ ಮಾಡಲಾಗಿದೆ. ಹೀಗಂತ ಪ್ರಸಿದ್ಧ ಮಕ್ಕಳ ಕಾಮಿಕ್ ಪುಸ್ತಕ ಚಂಪಕ್‌ನ ಪ್ರಕಾಶಕರು ಆರೋಪಿಸಿದ್ದಾರೆ. ಆರೋಪಿಸಿದ್ದು ಅಷ್ಟೇ ಅಲ್ಲದೇ ದೆಹಲಿಯ ಹೈಕೋರ್ಟ್ಗೆ ಅರ್ಜಿ ಕೂಡ ಸಲ್ಲಿಕೆ ಮಾಡಿದೆ. ಚಂಪಕ್ ಒಂದು ಪ್ರಸಿದ್ಧ ಬ್ರಾಂಡ್ ಆಗಿರುವುದರಿಂದ ಅದರ ಘನತೆಗೆ ಅಗೌರವ ತರಲಾಗಿದೆ ಎಂದು ಕೋರ್ಟ್ ಮುಂದೆ ಹೇಳಿಕೊಂಡಿದೆ.
ಚಂಪಕ್ ಪ್ರಕಾಶಕರು ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರು ವಿಚಾರಣೆ ಮಾಡಿದರು. ಎರಡು ಕಡೆಯ ವಾದ-ವಿವಾದ ಆಲಿಸಿದ್ದಾರೆ. ಚಂಪಕ್ ಬ್ರಾಂಡ್ ಹೆಸರು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಪ್ರಕಾಶಕರ ಪರ ವಕೀಲರು ಹೇಳಿದ್ದಾರೆ. ಹೀಗಾಗಿ 4 ವಾರಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಅದು ಲಿಖಿತ ಹೇಳಿಕೆ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ದೆಹಲಿ ನ್ಯಾಯಲಯ ಸೂಚಿಸಿದೆ. ಅಲ್ಲದೇ ತಮಗಾದ ನಷ್ಟಕ್ಕೆ ಬಿಸಿಸಿಐ ಹಾಗೂ ಐಪಿಎಲ್ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರ್ಟ್ಗೆ ಒತ್ತಾಯಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ