/newsfirstlive-kannada/media/post_attachments/wp-content/uploads/2025/06/YASH-DAYAL.jpg)
ಬಿದ್ದಲ್ಲೇ ಏಳಬೇಕು, ಕಳೆದುಕೊಂಡ ಕಡೆನೇ ಹುಡುಕಬೇಕು ಎಂಬ ನಾನ್ನುಡಿಗಳು ಯಾರಿಗೆ ಅನ್ವಯವಾಗುತ್ತೋ ಇಲ್ವೋ.. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ಗೆ ಮಾತ್ರ ಸರಿಯಾಗಿ ಅನ್ವಯವಾಗುತ್ತೆ. ಅಂದು ಆ ಒಂದು ಓವರ್ನಿಂದ ಅವಮಾನಕ್ಕೊಳಗಾಗಿದ್ದ ಅದೇ ಸ್ಟೇಡಿಯಂಗೆ ಟ್ರೋಫಿ ತಂದಿಟ್ಟ ಹೀರೋ..
ಯಶ್ ದಯಾಳ್.. ಬೆಂಕಿ ಉಗುಳುವ ಬೌಲರ್. 2 ವರ್ಷದ ಹಿಂದೆ ಈತನಿಗಿದ್ದಿದ್ದು ಖಳನಾಯಕನ ಪಟ್ಟ. ಈತನ ಕರಿಯರ್ ಮುಗಿದೇ ಹೋಯ್ತು ಎಲ್ಲರೂ ಭಾವಿಸಿದ್ರು. ಇಂದು ಅದೇ ಬೌಲರ್ ಆರ್ಸಿಬಿ ಪಾಲಿಗೆ ಆಪ್ತರಕ್ಷಕ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪಾಲಿನ ಹೀರೋ ಮಾತ್ರವಲ್ಲ. ಬಿದ್ದಲ್ಲೇ ಗೆದ್ದ ಛಲದಂಕ ಹೋರಾಟಗಾರ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಬಗ್ಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬ್ಯೂಟಿ.. ಮದುವೆ, ಮಕ್ಕಳು ಏನಿದು..?
ಜಗಮೆಚ್ಚಿದ ಬೌಲರ್
ಯಶ್ ದಯಾಳ್.. 16ನೇ ಐಪಿಎಲ್ ಸೀಸನ್ನ ನತದೃಷ್ಟ ಬೌಲರ್. ರಿಂಕು ಸಿಂಗ್ ಅನ್ನೋ ಬ್ಯಾಟಿಂಗ್ ಸುನಾಮಿ 2023ರ ಐಪಿಎಲ್ನಲ್ಲಿ ಸತತ 5 ಸಿಕ್ಸ್ ಚಚ್ಚಿ ಸೆನ್ಷೆಷನ್ ಸೃಷ್ಟಿಸಿದ್ರು. ಇದರಿಂದ ಕೆಕೆಆರ್ ರೋಚಕವಾಗಿ ಪಂದ್ಯ ಗೆಲ್ತು. ರಿಂಕು ಸಿಂಗ್ ಏನೋ ಹೀರೋ ಆದ್ರು. ಆದರೆ ವಿಲನ್ ಆಗಿದ್ದು ಬೌಲರ್ ಯಶ್ ದಯಾಳ್. ಬರೀ ಖಳನಾಯಕ ಅಷ್ಟೇ ಅಲ್ಲ. ಅವರ ಕರಿಯರ್ಗೆ ಬಿಗ್ ಡ್ಯಾಮೇಜ್ ಆಯ್ತು.
5 ಸಿಕ್ಸರ್ ಚಚ್ಚಿಸಿಕೊಂಡ ಅಘಾತದಲ್ಲೇ ಯಶ್ ದಯಾಳ್ರನ್ನ ಗುಜರಾತ್ ಟೈಟನ್ಸ್ ರಿಲೀಸ್ ಮಾಡಿ ಬಿಗ್ ಶಾಕ್ ನೀಡ್ತು. ಇದರೊಂದಿಗೆ ಗುಜರಾತ್ ಟೈಟನ್ಸ್ ಪಾಲಿಗೆ ವಿಲನ್ ಆಗಿದ್ದ ದಯಾಳ್, ಕರಿಯರ್ ಸಹ ಬಹುತೇಕ ಫಿನಿಶ್ ಆಗಿತ್ತು. ಇದೇ ನೋವಲ್ಲೇ ಮಾನಸಿಕ ಖಿನ್ನತೆಗೂ ಒಳಗಾಗಿದ್ದ ಯಶ್, 7ರಿಂದ 8 ಕೆಜಿ ತೂಕ ಕಳೆದುಕೊಂಡ್ರು. ಕೆಲ ತಿಂಗಳ ಕಾಲ ಸ್ಫರ್ಧಾತ್ಮಕ ಕ್ರಿಕೆಟ್ನಿಂದಲೂ ದೂರ ಸರಿದಿದ್ದರು. ಅಂದು ಯಾವ ಬೌಲರ್ 5 ಸಿಕ್ಸರ್ ಚಚ್ಚಿಸಿಕೊಂಡು ಅವಮಾನಕ್ಕೆ ತುತ್ತಾಗಿದ್ರೋ, ಅದೇ ಸ್ಟೇಡಿಯಂನಲ್ಲಿ ಹೀರೋ ಆಗಿದ್ದಾರೆ. ಅದೇ ಜನಗಳ ಮುಂದೆ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ದಾರೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಬಗ್ಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಾಲಿವುಡ್ ಬ್ಯೂಟಿ.. ಮದುವೆ, ಮಕ್ಕಳು ಏನಿದು..?
ಅವಮಾನಿಸಿದ ಜಾಗದಲ್ಲೇ ಚಾಂಪಿಯನ್!
2 ವರ್ಷಗಳ ಹಿಂದೆ ನಮೋ ಮೈದಾನದಲ್ಲೇ 5 ಸಿಕ್ಸರ್ ಚಚ್ಚಿಸಿಕೊಂಡಿದ್ದ ಯಶ್ ದಯಾಳ್ರನ್ನ ಅಭಿಮಾನಿಗಳು ಅವಮಾನ ಮಾಡಿದ್ರು, ಟೀಕಿಸಿದ್ರು. ಈತ ಬೌಲ್ ಆಗೋಕೆ ನಾಲಾಯಕ್ ಎಂದು ಹೀಯಾಳಿಸಿದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈತನ ಖರೀದಿಸಿದ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. ಇದೆಲ್ಲವನ್ನು ನಗುತ್ತಲೇ ಸ್ವೀಕರಿಸಿದ್ದ ಯಶ್ ದಯಾಳ್, ತನ್ನ ಅವಕಾಶಕ್ಕಾಗಿ ಕಾದಿದ್ದರು. ಸಿಕ್ಕ ಅವಕಾಶದಲ್ಲಿ ಮ್ಯಾಚ್ ವಿನ್ನರ್ ಆಗಿದ್ದ ಯಶ್ ದಯಾಳ್, ತಾನೇನು ಅನ್ನೋದನ್ನು ಫ್ರೂವ್ ಕೂಡ ಮಾಡಿದ್ದರು. ನಮೋ ಸ್ಟೇಡಿಯಂನಲ್ಲಿ ಆಗಿದ್ದ ಆ ಅಪಮಾನ ಮಾತ್ರ ಕಾಡ್ತಾನೇ ಇತ್ತು. ಅದಕ್ಕೆ ತಕ್ಕ ಉತ್ತರ ನೀಡುವ ವೇದಿಕೆ ಯಶ್ ದಯಾಳ್ಗೆ ಫೈನಲ್ ಮ್ಯಾಚ್ನಲ್ಲಿ ಸಿಕ್ಕಿತ್ತು.
ಯಶ್ ದಯಾಳ್ ಫೈರಿ ಸ್ಪೆಲ್
ಒಂದೊಳ್ಳೆ ಅವಕಾಶಕ್ಕೆ ಕಾದಿದ್ದ ಯಶ್ ದಯಾಳ್ಗೆ ಪಂಜಾಬ್ ಕಿಂಗ್ಸ್ ಎದುರಿನ ಫೈನಲ್ ಪಂದ್ಯವೇ ಸರಿಯಾದ ವೇದಿಕೆಯಾಗಿತ್ತು. ಈ ಪಂದ್ಯಲ್ಲಿ ಆಕ್ಷರಶಃ ಬಿರುಗಾಳಿಯ ಬೌಲಿಂಗ್ ಮಾಡಿದ ಯಶ್ ದಯಾಳ್, ತಾನೆಸೆದ ಮೂರು ಓವರ್ಗಳಲ್ಲಿ ಕೇವಲ 18 ರನ್ ನೀಡಿ 1 ವಿಕೆಟ್ ಪಡೆದರು. ಈತನ ಮಾರಕ ವೇಗಕ್ಕೆ ಓತ್ತಡಕ್ಕೊಳಗಾಗಿದ್ದ ಪಂಜಾಬ್, ಇತರೆ ಬೌಲರ್ಗಳಿಗೆ ವಿಕೆಟ್ ಒಪ್ಪಿಸುವಂತಾಯ್ತು. ಯಾವ ಅಂಗಳದಲ್ಲಿ ಫ್ಯಾನ್ಸ್ ಅವತ್ತು, ಟೀಕಿಸಿದ್ರೂ, ಅದೇ ಸ್ಟೇಡಿಯಂನಲ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಯಶ್ ದಯಾಳ್, 18 ವರ್ಷಗಳ ಕನಸು ನನಸಾಗಿಸುವಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದ್ದು ಸುಳ್ಳಲ್ಲ.
ಇದನ್ನೂ ಓದಿ: ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..
ಐಪಿಎಲ್ ಫೈನಲ್ನಲ್ಲಿ ಮಾತ್ರವಲ್ಲ. ಕಳೆದ 2 ವರ್ಷಗಳಿಂದಲೂ ಕ್ರೂಶಿಯಲ್ ಟೈಮ್ನಲ್ಲಿ ಕಷ್ಟದಲ್ಲಿ ಕೈಹಿಡಿದಿದ್ದ ಆರ್ಸಿಬಿ ಕೈಹಿಡಿದ್ದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್. 2024 ಹಾಗೂ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಯಶ್ ದಯಾಳ್ರ ಮ್ಯಾಚ್ ವಿನ್ನಿಂಗ್ ಸ್ಪೆಲ್. ಮೊದಲ ಕ್ವಾಲಿಫೈಯರ್ನಲ್ಲೂ ಯಶ್ ದಯಾಳ್ರ ಡೆಡ್ಲಿ ಸ್ಪೆಲ್ ಫೈನಲ್ಗೆ ಕೊಂಡೊಯ್ಯುವಲ್ಲಿ ಮಹತ್ವದ ಮಾತ್ರವನ್ನೇ ವಹಿಸ್ತು ಅನ್ನೋದನ್ನ ಮರೆಯುವಮತಿಲ್ಲ. 2 ವರ್ಷಗಳ ಕಾಲ ನೋವಲ್ಲೇ ಕಳೆದ ಯಶ್ ದಯಾಳ್, ತಾನೇನು ಅನ್ನೋದನ್ನ ಫ್ರೂವ್ ಮಾಡಲು ತಾಳ್ಮೆಯ ಸಾಕಾರ ಮೂರ್ತಿಯಂತಿದ್ದರು. ಸೋತಲ್ಲೇ ಗೆದ್ದು ತೋರಿಸಿದ ಯಶ್ ದಯಾಳ್ ಇವತ್ತು ನಿಜಕ್ಕೂ ಸ್ಫೂರ್ತಿಯ ಕಥೆ.
ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ.. ದೈವ ನುಡಿದಂತೆ ಕದ್ದ ಸ್ಥಳದಲ್ಲೇ ಸಿಕ್ಕಿಬಿದ್ದ ಕಳ್ಳ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ