ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಬ್ಯಾಟ್ ಯಾರ ಪಾಲಾಗುತ್ತೆ..? ರೇಸ್​ನಲ್ಲಿ ನಾಲ್ವರು ಆಟಗಾರರು​..!

author-image
Ganesh
Updated On
ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಬ್ಯಾಟ್ ಯಾರ ಪಾಲಾಗುತ್ತೆ..? ರೇಸ್​ನಲ್ಲಿ ನಾಲ್ವರು ಆಟಗಾರರು​..!
Advertisment
  • ಚಿನ್ನದ ಬಾಲ್ ಕೂಡ ಸಿಗಲಿದೆ? ರೇಸ್​ನಲ್ಲಿ ಶಮಿ
  • ಚಾಂಪಿಯನ್ಸ್​ ಟ್ರೋಫಿಯಲ್ಲಿ ಹೆಚ್ಚು ವಿಕೆಟ್ ಪಡೆದವ್ರು ಯಾರು?
  • ಭಾನುವಾರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ವರ್ಷ ಗೋಲ್ಡನ್ ಬ್ಯಾಟ್ ಮತ್ತು ಬಾಲ್ ಗೆಲ್ಲುವ ರೇಸ್​ನಲ್ಲಿ ಟೀಂ ಇಂಡಿಯಾದ ಮೂವರು ಸ್ಟಾರ್​​​ಗಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾರು ಹೆಚ್ಚು ರನ್ ಗಳಿಸುತ್ತಾರೋ ಅವರಿಗೆ ಚಿನ್ನದ ಬ್ಯಾಟ್ ನೀಡಲಾಗುತ್ತದೆ. ಹೆಚ್ಚು ವಿಕೆಟ್ ಪಡೆದವರಿಗೆ ಗೋಲ್ಡನ್ ಬಾಲ್ ಸಿಗಲಿದೆ. ಪ್ರಸ್ತುತ ಇಂಗ್ಲೆಂಡ್‌ನ ಬೆನ್ ಡಕೆಟ್ ಗೋಲ್ಡನ್ ಬ್ಯಾಟ್ ಗೆಲ್ಲುವ ಓಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಡಬಲ್‌ ಬಂಪರ್.. ಸಿದ್ದರಾಮಯ್ಯ ಬಜೆಟ್‌ನಲ್ಲಿ 13 ಮಹತ್ವದ ಘೋಷಣೆಗಳು; ಏನವು?

ಚಾಂಪಿಯನ್ಸ್ ಟ್ರೋಫಿಯ 3 ಪಂದ್ಯಗಳಲ್ಲಿ ಡಕೆಟ್ 227 ರನ್ ಗಳಿಸಿದ್ದಾರೆ. ಆದರೆ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ. ಅಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಆಟಗಾರರಿಗೆ ಗೋಲ್ಡನ್ ಬ್ಯಾಟ್ ಹಿಡಿಯುವ ಅವಕಾಶ ಸಿಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್‌ನ ರಾಚಿನ್ ರವೀಂದ್ರ ಅವರು ಡಕೆಟ್‌ಗಿಂತ ಕೇವಲ ಒಂದು ರನ್ ಹಿಂದಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ 226 ರನ್ ಗಳಿಸಿದ್ದಾರೆ.

ಇನ್ನು ಕೊಹ್ಲಿ 4 ಪಂದ್ಯಗಳಲ್ಲಿ 217 ರನ್ ಗಳಿಸಿ ಈ ರೇಸ್‌ನಲ್ಲಿದ್ದಾರೆ. ಜೊತೆಗೆ ಅಯ್ಯರ್​ಗೂ ರನ್ ಗಳಿಕೆಯಲ್ಲಿ ಮೊದಲ ಸ್ಥಾನ ಪಡೆಯುವ ಅವಕಾಶ ಇದೆ. 4 ಪಂದ್ಯಗಳಲ್ಲಿ 195 ರನ್ ಗಳಿಸಿದ್ದಾರೆ. ನಂತರ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವಕಾಶ ಇದೆ. ಇವರಿಬ್ಬರು ಕ್ರಮವಾಗಿ 191 ಮತ್ತು 189 ರನ್ ಗಳಿಸಿದ್ದಾರೆ.

ಗೋಲ್ಡನ್ ಬಾಲ್ ಯಾರಿಗೆ..?

ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೆನ್ರಿ 4 ಪಂದ್ಯಗಳಲ್ಲಿ 10 ವಿಕೆಟ್‌ ಪಡೆದಿದ್ದಾರೆ. ಮೊಹಮ್ಮದ್ ಶಮಿ ಎರಡನೇ ಸ್ಥಾನದಲ್ಲಿದ್ದಾರೆ. 4 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೇವಲ 2 ಪಂದ್ಯಗಳಲ್ಲಿ 7 ವಿಕೆಟ್‌ ಕಿತ್ತಿದ್ದಾರೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ 4 ಪದ್ಯದಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ ಎಫೆಕ್ಟ್.. ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಭರ್ಜರಿ ಗಿಫ್ಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment