Champions Trophy; ಭಾರತ ಶುಭಾರಂಭ, ಗಿಲ್​ ಸೆಂಚುರಿ.. ಕನ್ನಡಿಗನ ವಿನ್ನಿಂಗ್ ಶಾಟ್ ಹೇಗಿತ್ತು?

author-image
Bheemappa
Updated On
Champions Trophy; ಭಾರತ ಶುಭಾರಂಭ, ಗಿಲ್​ ಸೆಂಚುರಿ.. ಕನ್ನಡಿಗನ ವಿನ್ನಿಂಗ್ ಶಾಟ್ ಹೇಗಿತ್ತು?
Advertisment
  • ಬೌಲಿಂಗ್​ನಲ್ಲಿ ಮೊಹಮ್ಮದ್​ ಶಮಿ, ಹರ್ಷಿತ್ ರಾಣಾ ಪರಾಕ್ರಮ​
  • ಶುಭ್​ಮನ್ ಗಿಲ್ ಏಕದಿನದ ಎಷ್ಟನೇ ಶತಕ ಸಿಡಿಸಿ ಸಂಭ್ರಮಿಸಿದ್ರು?
  • ಬಾಂಗ್ಲಾ ಕೊಟ್ಟ ಟಾರ್ಗೆಟ್, ಚೇಜ್ ಮಾಡಿ ಗೆದ್ದ ರೋಹಿತ್ ಟೀಮ್

ಬೌಲಿಂಗ್​​ನಲ್ಲಿ ಮೊಹಮ್ಮದ್​ ಶಮಿ, ಹರ್ಷಿತ್ ರಾಣಾ​ ಮಿಂಚಿದ್ರೆ, ಬ್ಯಾಟಿಂಗ್​ನಲ್ಲಿ ಪ್ರಿನ್ಸ್​ ಶುಭ್​ಮನ್​ ಗಿಲ್​ ದರ್ಬಾರ್ ಜೋರಿತ್ತು. ದುಬೈನಲ್ಲಿ ಧಮಾಕ ಇನ್ನಿಂಗ್ಸ್​ ಕಟ್ಟಿದ ಶುಭ್​ಮನ್​ ಗಿಲ್​​, ಬಾಂಗ್ಲಾ ಬೌಲರ್ಸ್​ ಬೆಂಡೆತ್ತಿದರು. ಶುಭ್​ಮನ್​ ಗಿಲ್​ ಶೈನ್​ ಆದ್ರೆ ಬಾಂಗ್ಲಾ ಬೌಲರ್ಸ್​ ಸುಸ್ತು ಹೊಡೆದರು. ಟೀಮ್​ ಇಂಡಿಯಾ ಚೇಸಿಂಗ್​ ಹೇಗಿತ್ತು ಎಂದ್ರೆ?.

229 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಸಾಲಿಡ್​ ಓಪನಿಂಗ್​ ಪಡೆದುಕೊಂಡಿತು. ಕ್ಯಾಪ್ಟನ್​ ರೋಹಿತ್​ ಶರ್ಮಾ, ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಗುಡ್​ ಸ್ಟಾರ್ಟ್​ ನೀಡಿದರು. ಪವರ್​ ಪ್ಲೇನಲ್ಲಿ ಉತ್ತಮ ಆಟವಾಡಿದ ಈ ಜೋಡಿ ಮೊದಲ ವಿಕೆಟ್​ಗೆ 69 ರನ್​ಗಳ ಕಾಣಿಕೆ ನೀಡಿತು.

publive-image

36 ಎಸೆತಗಳನ್ನ ಎದುರಿಸಿ 7 ಬೌಂಡರಿಗಳನ್ನ ಚಚ್ಚಿದ ರೋಹಿತ್​ ಶರ್ಮಾ 41 ರನ್​ಗಳಿಸಿ ಔಟ್ ಆದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ವಿರಾಟ್​ ಕೊಹ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಫೇಲ್​​ ಆದರು. ಕೇವಲ 1 ಬೌಂಡರಿ ಬಾರಿಸಿದ ವಿರಾಟ್​ ಕೊಹ್ಲಿ 22 ರನ್​ಗಳಿಸಿ ಆಟ ಮುಗಿಸಿದ್ರು.

ದುಬೈ ಅಂಗಳದಲ್ಲಿ ಯುವರಾಜ ಶುಭ್​​ಮನ್​ ದರ್ಬಾರ್.!

ಹಿಟ್​ಮ್ಯಾನ್​​ ರೋಹಿತ್​ ಶರ್ಮಾ, ಕಿಂಗ್​ ವಿರಾಟ್​ ಕೊಹ್ಲಿ ವಿಕೆಟ್ ಕಬಳಿಸಿದ ಬಾಂಗ್ಲಾ ಟೈಗರ್ಸ್​​ಗೆ ಯುವರಾಜ ಶುಭ್​ಮನ್​ ಗಿಲ್​ ಸಖತ್​ ಕಾಟ ಕೊಟ್ಟರು. ದುಬೈ ಅಂಗಳದಲ್ಲಿ ಪ್ರಿನ್ಸ್ ಶುಭ್​ಮನ್​​​, ಎಚ್ಚರಿಕೆಯ ಆಟವಾಡಿದರು. ತಾಳ್ಮೆಯಿಂದ ಆಟ ಹೇಗಿತ್ತು ಅಂದ್ರೆ, ಅರ್ಧಶತಕ ಸಿಡಿಸೋಕೆ ಬರೋಬ್ಬರಿ 69 ಎಸೆತಗಳನ್ನ ತೆಗೆದುಕೊಂಡರು.

ಒಂದೆಡೆ ಶುಭ್​ಮನ್​ ಗಿಲ್​ ಕ್ರಿಸ್​ ಕಚ್ಚಿ ನಿಂತಿದ್ರೆ, ಇನ್ನೊಂದು ತುದಿಯಲ್ಲಿ ಪೆವಿಲಿಯನ್​ ಪರೇಡ್​ ನಡೀತಾ ಇತ್ತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶ್ರೇಯಸ್​​ ಅಯ್ಯರ್​, ಬ್ಯಾಟಿಂಗ್​ ಆರ್ಡರ್​ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ಅಕ್ಷರ್​ ಪಟೇಲ್​ ಹೀಗೆ ಬಂದು ಹಾಗೆ ಹೋದ್ರು. ಶ್ರೇಯಸ್​ ಆಟ 15 ರನ್​ಗಳಿಗೆ ಅಂತ್ಯವಾದ್ರೆ, ಅಕ್ಷರ್​ 8 ರನ್​ಗಳಿಸುವಷ್ಟರಲ್ಲಿ ಸುಸ್ತಾದರು.

ಆದ್ರೆ, 6ನೇ ವಿಕೆಟ್​ಗೆ ಜೊತೆಯಾದ ಶುಭ್​ಮನ್​ ಗಿಲ್​ -ಕೆ.ಎಲ್​ ರಾಹುಲ್​ ಸಾಲಿಡ್​ ಇನ್ನಿಂಗ್ಸ್​ ಮುಂದುವರೆಸಿದರು. ಶುಭ್​ಮನ್​ ಗಿಲ್​ ತಾಳ್ಮೆಯ ಆಟ ಮುಂದಿವರೆಸಿ ಆಗಾಗ ಬೌಂಡರಿ​ ಸಿಡಿಸಿ ರನ್​ ಕೊಳ್ಳೆ ಹೊಡೆದರೇ, ಕೆ.ಎಲ್​ ರಾಹುಲ್​ ಗಿಲ್​ಗೆ ಉತ್ತಮ ಸಾಥ್​ ನೀಡಿದರು.

ಬಾಂಗ್ಲಾ ಬೆಂಡೆತ್ತಿದ ಪ್ರಿನ್ಸ್​.! 8ನೇ ODI ಶತಕ ಸಿಡಿಸಿ ಸಂಭ್ರಮ.!

9 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಶುಭ್​ಮನ್​ ಗಿಲ್​ 125 ಎಸೆತಗಳಲ್ಲಿ ಶತಕ ಪೂರೈಸಿದ್ರು. ಇದರೊಂದಿಗೆ ಏಕದಿನ ಫಾರ್ಮೆಟ್​ನಲ್ಲಿ 8ನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಕೇವಲ 51 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಗಿಲ್​, ವೇಗವಾಗಿ 8 ಏಕದಿನ ಶತಕ ಸಿಡಿಸಿದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಡೆದರು.

ಇದನ್ನೂ ಓದಿ:FBIಗೆ ಭಾರತೀಯ ಕಾಶ್​ ಪಟೇಲ್ ಸರದಾರ; ಯಾವ್ದೇ ಗೃಹದಲ್ಲಿದ್ರೂ ಹುಡುಕಿ ಹೊಡೀತಿವಿ ಎಂದ ಟ್ರಂಪ್ ಆಪ್ತ!

publive-image

ಕ್ಯಾಚ್​ ಡ್ರಾಪ್​ನಿಂದ ಸಿಕ್ಕ ಜೀವದಾನವನ್ನ ಸರಿಯಾಗಿ ಬಳಸಿಕೊಂಡ ರಾಹುಲ್​ 41 ರನ್​ಗಳ ಕಾಣಿಕೆ ನೀಡಿದರು. ಭಾರತದ ಗೆಲುವಿಗೆ ಇನ್ನು 3 ರನ್ ಬೇಕಿದ್ದಾಗ ಬಾಂಗ್ಲಾ ಬೌಲರ್​ ಹಾಕಿದ ಬಾಲ್​ಗೆ ಲೆಗ್​ ಸೈಡ್ ಬಿಗ್ ಶಾಟ್ ಹೊಡೆದರು. 46.3ನೇ ಎಸೆತವನ್ನ ರಾಹುಲ್, ಸಿಕ್ಸರ್​ ಸಿಡಿಸುವ ಮೂಲಕ ಟೀಮ್​ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದರು.


">February 20, 2025

6 ವಿಕೆಟ್​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯವನ್ನ ಗೆದ್ದ ಟೀಮ್​ ಇಂಡಿಯಾ ಬದ್ಧವೈರಿ ಪಾಕ್​ ವಿರುದ್ಧದ ಕದನಕ್ಕೆ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment