ಟೀಮ್ ಇಂಡಿಯಾದಲ್ಲಿ ಮುಖ್ಯಕೋಚ್ ರಾಜಕೀಯ.. ಕೊಹ್ಲಿ ಶಿಷ್ಯನಿಗೆ ಅವಕಾಶ​ ಸಿಗೋದು ಡೌಟ್

author-image
Bheemappa
Updated On
ಟೀಮ್ ಇಂಡಿಯಾದಲ್ಲಿ ಮುಖ್ಯಕೋಚ್ ರಾಜಕೀಯ.. ಕೊಹ್ಲಿ ಶಿಷ್ಯನಿಗೆ ಅವಕಾಶ​ ಸಿಗೋದು ಡೌಟ್
Advertisment
  • ಗಂಭೀರ್-ಕೊಹ್ಲಿ ಶಿಷ್ಯಂದಿರಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ
  • ಟೀಮ್​ ಇಂಡಿಯಾಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ
  • ಹಿರಿಯ ಆಟಗಾರನ ಬದಲಿಗೆ ಯುವ ಪ್ಲೇಯರ್​ಗೆ ಸ್ಥಾನ..?

ಚಾಂಪಿಯನ್ಸ್​ ಟ್ರೋಫಿಗೆ ಸಿದ್ಧತೆ ಆರಂಭಿಸೋಕೆ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಸೆಟ್ ಬ್ಯಾಕ್ ಎದುರಾಗಿದೆ. ಚಾಂಪಿಯನ್ಸ್​ ಟ್ರೋಫಿಯಲ್ಲಿ ಬೂಮ್ರಾ ಆಡೋದು ಬಹುತೇಕ ಡೌಟ್​ ಎನ್ನಲಾಗ್ತಿದೆ. ಹೀಗಾಗಿ ಬೂಮ್ರಾ ಬದಲಿ ಆಟಗಾರನ ಆಯ್ಕೆ ಲೆಕ್ಕಾಚಾರ ಶುರುವಾಗಿದೆ. ಈ ವಿಚಾರದಲ್ಲಿ ಗಂಭೀರ್ ರಾಜಕೀಯ ದಾಳ ಉರುಳಿಸಿದ್ದಾರೆ. ಇದು ಕೊಹ್ಲಿ ಶಿಷ್ಯ ವರ್ಸಸ್ ಗೌತಿ ಶಿಷ್ಯನ ಬ್ಯಾಟಲ್ ವಾರ್ ಆಗಿ ಮಾರ್ಪಟ್ಟಿದೆ.

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಕೌಂಟ್​ಡೌನ್​ ಶುರುವಾಗ್ತಿದೆ. ಇನ್ನಷ್ಟೇ ಟೀಮ್ ಇಂಡಿಯಾ ಚಾಂಪಿಯನ್ಸ್​ ಟ್ರೋಫಿಯ ತಯಾರಿಗಿಳಿಬೇಕಿದೆ. ಆದ್ರೆ, ಆ ತಯಾರಿ ಮುನ್ನವೇ ಟೀಮ್ ಇಂಡಿಯಾಗೆ ಹಿನ್ನಡೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.

publive-image

ಸದ್ಯ ಇಂಜುರಿಯಿಂದ ಬಳಲುತ್ತಿರುವ ವೇಗಿ ಜಸ್​​ಪ್ರಿತ್​ ಬೂಮ್ರಾ, ಆಡ್ತಾರಾ, ಇಲ್ವಾ ಅನ್ನೋ ಭವಿಷ್ಯ ನ್ಯೂಜಿಲೆಂಡ್​ ಡಾಕ್ಟರ್ಸ್​ ವರದಿ ಮೇಲೆ ನಿಂತಿದೆ. ಕೆಲ ಮೂಲಗಳ ಪ್ರಕಾರ ಚಾಂಪಿಯನ್ಸ್​ ಟ್ರೋಫಿ ವೇಳೆಗೆ ಬೂಮ್ರಾ , 100 ಪರ್ಸೆಟ್ ಫಿಟ್​ ಆಗೋದು ಬಹುತೇಕ ಡೌಟ್ ಎನ್ನಲಾಗಿದೆ. ಹೀಗಾಗಿ ಮಿನಿ ವಿಶ್ವಕಪ್​ನಿಂದ ಬೂಮ್ರಾರನ್ನು ಕೈಬಿಡೋದು ಖಚಿತ ಎನ್ನಲಾಗುತ್ತಿದ್ದು, ಮ್ಯಾನೇಜ್​ಮೆಂಟ್​ ಪರ್ಯಾಯ ಆಟಗಾರನ ಹುಡುಕಾಟಕ್ಕೆ ಮುಂದಾಗಿದೆ.

ಸಿರಾಜ್ V/S ಹರ್ಷಿತ್.. ಇಬ್ಬರಲ್ಲಿ ಯಾರಿಗೆ ಮಣೆ..?

ಬೂಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡೋದು ಡೌಟ್ ಎಂಬ ಸುದ್ದಿ ಹೊರ ಬೀಳ್ತಿದ್ದಂತೆ ಬೂಮ್ರಾ ಸ್ಥಾನಕ್ಯಾರು ಅನ್ನೋ ಪ್ರಶ್ನೆ ಉದ್ಬವವಾಗಿದೆ. ಇದಕ್ಕೆ ವಿರಾಟ್ ಕೊಹ್ಲಿಯ ಶಿಷ್ಯ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ಸಿರಾಜ್ ಜೊತೆ ಹೆಡ್​ ಕೋಚ್ ಗಂಭೀರ್ ಶಿಷ್ಯ ಹರ್ಷಿತ್ ರಾಣಾ ಹೆಸರು ರೇಸ್​ನಲ್ಲಿ ಕಾಣಿಸಿಕೊಂಡಿದೆ. ಇದೀಗ ಅನುಭವಿ ಮೊಹಮ್ಮದ್ ಸಿರಾಜ್ VS ಅನಾನುಭವಿ ಹರ್ಷಿತ್​​​​ ರಾಣಾ ನಡುವಿನ ಪೈಪೋಟಿಯಲ್ಲಿ ಯಾರಿಗೆ ಮಣೆ ಅನ್ನೋದು ಕುತೂಹಲ ಮೂಡಿಸಿದೆ.

ಹರ್ಷಿತ್​ ರಾಣಾಗೆ ಹೊಡೆಯುತ್ತಾ ಜಾಕ್ ಪಾಟ್​..?

ಜಸ್​ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅಲಭ್ಯತೆಯಲ್ಲಿ ಸಿರಾಜ್, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್​ ಆಗಿ ಮೆರೆದಾಡಿದ್ದಾರೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಟೂರ್ನಿಗಳು ಸೇರಿದಂತೆ ಏಷ್ಯಾಕಪ್​ನಂತ ಬಿಗ್​​ ಈವೆಂಟ್ಸ್​ನಲ್ಲಿ ಗೇಮ್ ಚೇಜಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಏಕದಿನ ಕ್ರಿಕೆಟ್​ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿರುವ ಸಿರಾಜ್, ಬೂಮ್ರಾ ಬದಲಿಯಾಗಿ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯೋದಕ್ಕೆ ಅತ್ಯಂತ ಸಮರ್ಥ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ.

ಆದ್ರೆ, ನ್ಯೂ ಬಾಲ್​​ನಲ್ಲಿ ಅಷ್ಟೇ ಸಿರಾಜ್ ಪ್ರತಾಪ ಎಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ಓಪನ್​ ಸ್ಟೇಟ್​ಮೆಂಟ್​ ಮಾಡಿದ್ದಾರೆ. ಅದಲ್ಲದೇ, ಈಗಾಗಲೇ ಇಂಗ್ಲೆಂಡ್​ ಸರಣಿಯಲ್ಲಿ ಬೂಮ್ರಾಗೆ ಬ್ಯಾಕ್​ ಆಪ್ ಪ್ಲೇಯರ್​​ ಆಗಿ ಯುವ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಇದನ್ನ ನೋಡಿದ್ರೆ, ಸಿರಾಜ್​ಗೆ ಚಾನ್ಸ್​ ನೀಡೋ ಅವಕಾಶ ಕಡಿಮೆಯಿದೆ. ಚಾಂಪಿಯನ್ಸ್​ ಟ್ರೋಫಿಗೂ ಡೆಲ್ಲಿ ಬಾಯ್​ ಹರ್ಷಿತ್ ರಾಣಾರನ್ನೇ ಕರೆದೊಯ್ಯುವ ಒಲವು ಮ್ಯಾನೇಜ್​ಮೆಂಟ್​ ಲೆವೆಲ್​ನಲ್ಲಿದೆ.

ಹರ್ಷಿತ್ ರಾಣಾ​ಗಾಗಿ ಹೆಡ್​​ ಕೋಚ್​ ಗಂಭೀರ್ ಪಟ್ಟು..!

ಬೂಮ್ರಾ ಬದಲಿ ಆಟಗಾರನ ಆಯ್ಕೆ ವಿಚಾರದಲ್ಲಿ ಹೆಡ್​ ಕೋಚ್ ಗಂಭೀರ್ ರಾಜಕೀಯ ಜೋರಾಗಿದೆ. ಕೊಹ್ಲಿ ಶಿಷ್ಯನಾದ ಸಿರಾಜ್​ ಬದಲಾಗಿ ನ್ಯೂ ಪೇಸರ್ ಹರ್ಷಿತ್ ರಾಣಾಗೆ ಮಣೆ ಹಾಕುವಂತೆ ಸೆಲೆಕ್ಟರ್ಸ್​ಗೆ ಒತ್ತಡ ಹೇರುತ್ತಿದ್ದಾರೆ ಅನ್ನೋದು ಸದ್ಯದ ಇನ್​​​ಸೈಡ್​ ಮಾಹಿತಿ. ಇದಕ್ಕೆ ಕಾರಣ ಕೆಕೆಆರ್ ಲಿಂಕ್​ ಹಾಗೂ ತವರು ಡೆಲ್ಲಿಯ ಹುಡುಗ​ ಅನ್ನೋದಾಗಿದೆ.

ಮೊಹಮ್ಮದ್ ಸಿರಾಜ್ ಹೇಳಿ ಕೇಳಿ ವಿರಾಟ್ ಕೊಹ್ಲಿ ಆಪ್ತ ಶಿಷ್ಯ. ಹೀಗಾಗಿ ಸಿರಾಜ್​ರನ್ನ ತಂಡದಲ್ಲಿ ಸೇರಿಸಿದ್ರೆ, ಸೀನಿಯರ್ ಆಟಗಾರರ ಪ್ರಭಾವ ಹೆಚ್ಚಾಗುತ್ತೆ. ಈ ಕಾರಣಕ್ಕಾಗಿಯೇ ಕೋಚ್​ ಗಂಭೀರ್, ಬೂಮ್ರಾರನ್ನು ಕೈ ಬಿಟ್ರೆ, ಯಂಗ್ ಪೇಸರ್ ಹರ್ಷಿತ್ ರಾಣಾಗೆ ಮಣೆ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಟಿ20 ಹಾಗೂ ಏಕದಿನ ತಂಡದಲ್ಲಿ ಒಂದೇ ಒಂದು ಪಂದ್ಯವನ್ನ ಹರ್ಷಿತ್​ ರಾಣಾ ಆಡಿಲ್ಲ. ವೈಟ್​ಬಾಲ್​ ಹಿಡಿದು ಇಂಟರ್​ನ್ಯಾಷನಲ್​ ಪಂದ್ಯವನ್ನೇ ಆಡದ ಅನಾನುಭವಿ ಹರ್ಷಿತ್​ ರಾಣಾನ ಏಕಾಏಕಿ ಚಾಂಪಿಯನ್ಸ್​ ಟ್ರೋಫಿಗೆ ಆಯ್ಕೆ ಮಾಡೋದು ಎಷ್ಟು ಸರಿ ಅನ್ನೋದು ಪ್ರಶ್ನೆಯಾಗಿದೆ.

ಇದನ್ನೂ ಓದಿ: CCL; ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಯಾರ್ ಯಾರಿಗೆ ಚಾನ್ಸ್​.. ಟ್ರೋಫಿಗೆ ಗುರಿ ಇಟ್ಟ ಕಿಚ್ಚನ ಹೊಸ ಹುರುಪು

publive-image

ಸಿರಾಜ್ ಸೈಡ್​ಲೈನ್.. ಹರ್ಷಿತ್ ರಾಣಾಗೆ ಹರ್ಷ..!

ಈಗಾಗಲೇ ಟೀಮ್​ ಮ್ಯಾನೇಜ್​​ಮೆಂಟ್​​​ ಸಿರಾಜ್​ಗೆ ಪರೋಕ್ಷವಾಗಿ ಸೈಡ್​ಲೈನ್ ಮಾಡಿರೋ ಸಂದೇಶವನ್ನ ರವಾನಿಸಿದೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಬೂಮ್ರಾಗೆ ಬ್ಯಾಕ್ ಆಫ್​ ಆಟಗಾರನಾಗಿ ಹರ್ಷಿತ್ ರಾಣಾ ಆಯ್ಕೆ ಮಾಡಿರೋ ನಿರ್ಧಾರವೇ ಈ ಮೇಸೆಜ್​ನ ಪಾಸ್​ ಮಾಡಿದೆ. ಯಾಕಂದ್ರೆ, ಹರ್ಷಿತ್​ ರಾಣಾ ಆಯ್ಕೆ ನಿರ್ಧಾರ ಇಂಗ್ಲೆಂಡ್​​​ ಸರಣಿಗೆ ಮಾತ್ರ ಸೀಮಿತವಾಗಿಲ್ಲ. ಚಾಂಪಿಯನ್ಸ್​ ಟ್ರೋಫಿಗೂ ವಿಸ್ತಾರವಾಗುವ ಸಾಧ್ಯತೆಯಿದೆ.

ಕೋಚ್​ ಪಟ್ಟವೇರಿದ ಬಳಿಕ ಪ್ರತಿ ಟೂರ್, ಪ್ರತಿ ಸಿರೀಸ್​ನಲ್ಲಿ ತನ್ನಿಷ್ಟದ ಆಟಗಾರರನ್ನೇ ಗಂಭೀರ್​ ತಂಡಕ್ಕೆ ಕರೆ ತರುತ್ತಿದ್ದಾರೆ. ಇದೀಗ ಮಹತ್ವದ ಐಸಿಸಿ ಈವೆಂಟ್ಸ್​ನ ಸೆಲೆಕ್ಷನ್ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ. ಗಂಭೀರ್​​ರ ಈ ರಾಜಕೀಯ ಟೂರ್ನಿಯಲ್ಲಿ ಟೀಮ್​ ಇಂಡಿಯಾಗೆ ಹಿನ್ನಡೆಯುಂಟು ಮಾಡೋ ಸಾಧ್ಯತೆ ಇದೆ. ಟ್ಯಾಲೆಂಟ್​ ನಿರೂಪಿಸಿರೋ ಅನುಭವಿ ವೇಗಿ ಮೊಹಮ್ಮದ್​ ಸಿರಾಜ್​ನ ಬಿಟ್ಟು, ಅನಾನುಭವಿ ಹರ್ಷಿತ್​ ರಾಣಾಗೆ ಮಣೆ ಹಾಕೋ ನಿರ್ಧಾರ ಯಾವ ಕಾರಣಕ್ಕೂ ಒಪ್ಪುವಂತದ್ದಲ್ಲ.​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment