/newsfirstlive-kannada/media/post_attachments/wp-content/uploads/2025/03/Virat-kohli-ChampionsTrophyFinal.jpg)
ಚಾಂಪಿಯನ್ಸ್ ಟ್ರೋಫಿ ಫೈನಲ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೆ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋಕೆ ಹೊರಟಿದೆ. ಮತ್ತೊಂದೆಡೆ ಡೇಂಜರಸ್ ನ್ಯೂಜಿಲೆಂಡ್, ದುಬೈನಲ್ಲಿ ದರ್ಬಾರ್ ನಡೆಸೋಕೆ ತುದಿಗಾಲಲ್ಲಿ ನಿಂತಿದೆ. ಹಾಗಾದ್ರೆ ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡ ಯಾವುದು? ಯಾವ ತಂಡಕ್ಕೆ ಸೂಪರ್ ಸಂಡೇ ಆಗಲಿದೆ?
ದುಬೈನಲ್ಲಿ ಇಂದು ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್, ಒನ್ ಲಾಸ್ಟ್ ಟೈಮ್ ಅದೃಷ್ಟದ ಪರೀಕ್ಷೆಗೆ ಇಳಿಯಲಿದೆ. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದ ಟೀಮ್ ಇಂಡಿಯಾ, ಫೈನಲ್ನಲ್ಲೂ ಗೆದ್ದು ಬೀಗುವ ತವಕದಲ್ಲಿದೆ. ಇನ್ನು ಲೀಗ್ನಲ್ಲಿ ರೋಹಿತ್ ಪಡೆಯ ವಿರುದ್ಧ ಸೋಲು ಅನುಭವಿಸಿದ್ದ ಕಿವೀಸ್, ಇಂದು ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹಾಗಾದ್ರೆ ಉಭಯ ತಂಡಗಳ ಸ್ಟ್ರೆಂಥ್ ಏನು? ವೀಕ್ನೆಸ್ ಏನು?
ಟೀಮ್ ಇಂಡಿಯಾ ಸ್ಟ್ರೆಂಥ್ ಏನು..?
ನೋ ಡೌಟ್, ಟೀಮ್ ಇಂಡಿಯಾಕ್ಕೆ ಬ್ಯಾಟಿಂಗೇ ಬಿಗ್ ಸ್ಟ್ರೆಂಥ್. ನಾಯಕ ರೋಹಿತ್ ಶರ್ಮಾ ಅಗ್ರೆಸಿವ್ ಬ್ಯಾಟಿಂಗ್ ಅಪ್ರೋಚ್, ಇತರೆ ಬ್ಯಾಟ್ಸ್ಮನ್ಗಳ ಆತ್ಮವಿಶ್ವಾಸ ಹೆಚ್ಚಿಸಿದ್ರೆ, ಬಿಗ್ಮ್ಯಾಚ್ ಪ್ಲೇಯರ್ ವಿರಾಟ್ ಕೊಹ್ಲಿ ಫಾರ್ಮ್ನಲ್ಲಿರೋದು, ತಂಡದ ಬಲ ಹೆಚ್ಚಿಸಿದೆ. ಮಿಡಲ್ ಆರ್ಡರ್ನಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ಬ್ಯಾಟ್ನಿಂದ ಕಾಂಟ್ರಿಬ್ಯೂಟ್ ಮಾಡ್ತಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಹೆವಿ ಸ್ಪಿನ್ ಅಟ್ಯಾಕ್, ತಂಡಕ್ಕೆ ಉತ್ತಮ ಫಲಿತಾಂಶ ನೀಡುತ್ತಿದೆ.
ಟೀಮ್ ಇಂಡಿಯಾ ಫೈನಲ್ಸ್ ಗೆಲ್ಲಬೇಕಾದ್ರೆ, ಮೊದಲು ತನ್ನ ವೀಕ್ನೆಸ್ನ ಸರಿಪಡಿಸಿಕೊಳ್ಳಬೇಕಿದೆ.
ಟೀಮ್ ಇಂಡಿಯಾ ವೀಕ್ನೆಸ್ ಏನು..?
ಮೊದಲಿಗೆ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭವೇ ಸಿಗ್ತಿಲ್ಲ. ಬಾಂಗ್ಲಾ ವಿರುದ್ಧ ರೋಹಿತ್ ಮತ್ತು ಗಿಲ್ 69 ಜೊತೆಯಾಟ ಆಡಿದ್ದು ಬಿಟ್ರೆ, ಪಾಕ್, ನ್ಯೂಜಿಲೆಂಡ್ ಮತ್ತು ಆಸಿಸ್ ವಿರುದ್ಧ ಉತ್ತಮ ಜೊತೆಯಾಟ ಬಂದಿಲ್ಲ. ಆರಂಭಿಕ ಶುಭ್ಮನ್ ಗಿಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಶತಕ ಸಿಡಿಸಿದ್ದು ಬಿಟ್ರೆ, ಕಳೆದ 3 ಪಂದ್ಯಗಳಿಂದ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ.
ಅನುಭವಿ ವೇಗಿ ಮೊಹಮ್ಮದ್ ಶಮಿ ಮೇಲೆ ಟೀಮ್ ಇಂಡಿಯಾ ಹೆಚ್ಚು ಡಿಪೆಂಡ್ ಆಗಿರೋದು ಒಳ್ಳೇದಲ್ಲ. ಟೂರ್ನಿಯಲ್ಲಿ ಕೆಟ್ಟ ಫೀಲ್ಡಿಂಗ್ ಮಾಡಿ ಕ್ಯಾಚ್ಗಳನ್ನ ಡ್ರಾಪ್ ಮಾಡಿರುವ ಟೀಮ್ ಇಂಡಿಯಾ, ಫೈನಲ್ನಲ್ಲಿ ಆ ತಪ್ಪನ್ನ ಮಾಡಬಾರದು. ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾಕ್ಕೆ ಫೈನಲ್ ಫೋಬಿಯ ಇದ್ದಂತಿದೆ. ನಾಯಕನಾಗಿ ರೋಹಿತ್ ನಾಲ್ಕು ಐಸಿಸಿ ಟೂರ್ನಿಯ ಫೈನಲ್ಸ್ನಲ್ಲಿ, ಕೇವಲ ಒಂದೇ ಒಂದು ಬಾರಿ ಮಾತ್ರ ಕಪ್ ಎತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ: 12 ವರ್ಷಗಳ ಬಳಿಕ ಮತ್ತೆ ಅವಕಾಶ.. ದುಬೈನಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲೋ ಚಾನ್ಸ್ ಎಷ್ಟಿದೆ?
ಲೀಗ್ನಲ್ಲಿ ನ್ಯೂಜಿಲೆಂಡ್ ಒಂದೇ ಒಂದು ಪಂದ್ಯ ಸೋತಿರೋದು ಬಿಟ್ರೆ, ತಂಡ ಮೇಲ್ನೋಟಕ್ಕೆ ಬಲಿಷ್ಟವಾಗೇ ಕಾಣುತ್ತಿದೆ.
ನ್ಯೂಜಿಲೆಂಡ್ ಸ್ಟ್ರೆಂಥ್ ಏನು..?
ಆರಂಭಿಕ ಬ್ಯಾಟ್ಸ್ಮನ್ ರಚ್ಚಿನ್ ರವೀಂದ್ರ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಈಗಾಗಲೇ 2 ಶತಕಗಳನ್ನ ಸಿಡಿಸಿರುವ ರಚ್ಚಿನ್, ಫೈನಲ್ನಲ್ಲೂ ಮಿಂಚುವ ವಿಶ್ವಾಶದಲ್ಲಿದ್ದಾರೆ. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಫಾರ್ಮ್ ಸಹ, ಟೀಮ್ ಇಂಡಿಯಾಕ್ಕೆ ದೊಡ್ಡ ಚಿಂತೆಯಾಗಿದೆ. ಕಾರಣ ವಿಲಿಯಮ್ಸನ್ ಇಂಡಿಯಾವನ್ನ ಪದೇ ಪದೇ ವಿಲನ್ ಆಗಿ ಕಾಡುತ್ತಾರೆ. ಡ್ಯಾರೆಲ್ ಮಿಚ್ಚೆಲ್, ಟಾಮ್ ಲ್ಯಾಥಮ್, ಗ್ಲೇನ್ ಫಿಲಿಪ್ಸ್, ಬ್ರೇಸ್ವೆಲ್ ಮತ್ತು ಸ್ಯಾಂಟ್ನರ್ ಒಳಗೊಂಡ ಕಿವೀಸ್ ಮಿಡಲ್ ಆರ್ಡರ್, ಬಲಿಷ್ಟವಾಗಿದೆ. ಜೊತೆಗೆ ಕ್ವಾಲಿಟಿ ಪೇರ್ಸ್ ಮತ್ತು ಅದ್ಭುತ ಫೀಲ್ಡಿಂಗ್ ಸೈಡ್ ಎನಿಸಿಕೊಂಡಿರೋ ಬ್ಲ್ಯಾಕ್ಕ್ಯಾಪ್ಸ್ಗೆ, ಇದೇ ದೊಡ್ಡ ಶಕ್ತಿಯಾಗಿದೆ.
ಐಸಿಸಿ ಟೂರ್ನಿಯ ಫೈನಲ್ಸ್ ಅಂತ ಬಂದ್ರೆ, ನ್ಯೂಜಿಲೆಂಡ್ ತಂಡಕ್ಕೂ ಹೇಳಿಕೊಳ್ಳುವಂತಹ ಲಕ್ ಇಲ್ಲ. ಕಾರಣ ಕಿವೀಸ್ ತಂಡದ ವೀಕ್ನೆಸ್.
ನ್ಯೂಜಿಲೆಂಡ್ ವೀಕ್ನೆಸ್ ಏನು..?
ಇದ್ದಕ್ಕಿದಂತೆ ನ್ಯೂಜಿಲೆಂಡ್ ಬ್ಯಾಟಿಂಗ್ ಲೈನ್ಅಪ್, ದಿಢೀರ್ ಕುಸಿತ ಕಾಣುತ್ತೆ. ಅನುಭವಿ ಬ್ಯಾಟರ್‌ಗಳಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಮೇಲೆ ತಂಡ, ಬ್ಯಾಟಿಂಗ್ನಲ್ಲಿ ಹೆಚ್ಚು ಡಿಪೆಂಡ್ ಆಗುತ್ತೆ. ಕಿವೀಸ್ ಸ್ಟ್ರೆಂಥೇ ಫಾಸ್ಟ್ ಬೌಲಿಂಗ್ ಅಟ್ಯಾಕ್. ಆದ್ರೀಗ ಇನ್ಫಾರ್ಮ್ ಪೇಸರ್ ಮ್ಯಾಟ್ ಹೆನ್ರಿ, ಗಾಯದ ಕಾರಣ ತಂಡದಿಂದ ಹೊರಗುಳಿಯೋ ಸಾಧ್ಯತೆ ಇದೆ. ಮಿಚ್ಚೆಲ್ ಸ್ಯಾಂಟ್ನರ್ ವಿಕೆಟ್ ಜೊತೆಗೆ ಉತ್ತಮ ಎಕಾನಮಿ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಸ್ಯಾಂಟ್ನರ್ಗೆ ಸಾಥ್ ಕೊಡೋಕೆ ಕ್ವಾಲಿಟಿ ಸ್ಪಿನ್ನರ್ಗಳು, ಕಿವೀಸ್ ತಂಡದಲ್ಲಿಲ್ಲ. ಇದೆಲ್ಲದರ ಜೊತೆಗೆ ಸ್ಯಾಂಟ್ನರ್ ಇದೇ ಮೊದಲ ಬಾರಿ ಐಸಿಸಿ ಟೂರ್ನಿಯ ಫೈನಲ್ನಲ್ಲಿ ನಾಯಕನಾಗಿದ್ದಾರೆ. ಬಿಗ್ಮ್ಯಾಚ್ನಲ್ಲಿ ಅನುಭವ ಇಲ್ಲ ಸ್ಯಾಂಟ್ನರ್, ಒತ್ತಡಕ್ಕೆ ಒಳಗಾಗೋ ಸಾಧ್ಯತೆ ಇದೆ.
ಇದು ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ಸ್ಟ್ರೆಂಥ್ ಌಂಡ್ ವೀಕ್ನೆಸ್. ಫೈನಲ್ಗೂ ಮುನ್ನ ಯಾವ ತಂಡ ವೀಕ್ನೆಸ್ ಸರಿ ಪಡಿಸಿಕೊಳ್ಳುತ್ತೋ, ಆ ತಂಡ ಪ್ರಶಸ್ತಿ ಗೆಲ್ಲೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ