ಚಾಂಪಿಯನ್ಸ್ ಟ್ರೋಫಿ: ಟೀಮ್​ ಇಂಡಿಯಾದ ಹೊಸ ಜರ್ಸಿ ಹೇಗಿದೆ.. ಕ್ರಿಕೆಟ್​ ಪ್ರಿಯರು ಏನಂತಾರೆ?

author-image
Gopal Kulkarni
Updated On
ಚಾಂಪಿಯನ್ಸ್ ಟ್ರೋಫಿ: ಟೀಮ್​ ಇಂಡಿಯಾದ ಹೊಸ ಜರ್ಸಿ ಹೇಗಿದೆ.. ಕ್ರಿಕೆಟ್​ ಪ್ರಿಯರು ಏನಂತಾರೆ?
Advertisment
  • ಚಾಂಪಿಯನ್ಸ್​ ಟ್ರೋಫಿಗೆ ಟೀಂ ಇಂಡಿಯಾದ ಹೊಸ ಜರ್ಸಿ ಅನಾವರಣ
  • ರೋಹಿತ್, ಜಡೇಜಾ, ಪಾಂಡ್ಯ ಅರ್ಶದೀಪ್ ಹೊಸ ಜರ್ಸಿಯಲ್ಲಿ ಪೋಸ್
  • ಟೀಂ ಇಂಡಿಯಾದ ಹೊಸ ಜರ್ಸಿಯಲ್ಲಿದೆ ಆತಿಥ್ಯವಹಿಸಿದ ಪಾಕ್ ಹೆಸರು

ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಭಾರತೀಯ ಕ್ರಿಕೆಟ್ ತಂಡದ ನ್ಯೂ ಜರ್ಸಿ ಅನಾವರಣಗೊಂಡಿದೆ. ಸೋಮವಾರ ಅಂದ್ರೆ ಫೆಬ್ರವರಿ 17 ರಂದು ತಂಡದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾರ್ದಿಕ್ ಪಾಂಡ್ಯ ಮತ್ತು ಅರ್ಶದೀಪ್ ಸಿಂಗ್, ವಿರಾಟ್​ ಕೊಹ್ಲಿ ​ ಹೊಸ ಜರ್ಸಿ ತೊಟ್ಟು ಕಲರಫುಲ್ ಫೋಟೋಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆತಿಥ್ಯವಹಿಸಿರುವ ಪಾಕಿಸ್ತಾನದ ಹೆಸರು ಕೂಡ ಜರ್ಸಿ ಮೇಲೆ ಇರುವುದು ಇನ್ನೊಂದು ವಿಶೇಷ. ಬೇರೆ ಯಾವುದೇ ಟೀಮ್ ತನ್ನ ಜರ್ಸಿ ಮೇಲೆ ಪಂದ್ಯಾವಳಿಗಳನ್ನು ಹೋಸ್ಟ್ ಮಾಡಿದ ದೇಶದ ಹೆಸರು ಇಲ್ಲ.

publive-image

ಐಸಿಸಿ ಅವಾರ್ಡ್​​ನಲ್ಲಿ ರೋಹಿತ್ ಶರ್ಮಾ ಅವರ ಹೆಸರು ಐಸಿಸಿ ಏಕದಿನ ಪಂದ್ಯಗಳಲ್ಲಿ  ವರ್ಷದ ಅತ್ಯುತ್ತಮ ಕ್ರಿಕೆಟಿಗ ಎಂಬ ಲಿಸ್ಟ್​​ನಲ್ಲಿ ಹೆಸರಿತ್ತು. ಟೆಸ್ಟ್​ ಟೀಮ್​ನಲ್ಲಿ ರವೀಂದ್ರ ಜಡೇಜಾ, ಟಿ20 ಟೀಮ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅರ್ಶದೀಪ್ ಸಿಂಗ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಅರ್ಶದೀಪ್​ ಅವರನ್ನು ವರ್ಷದ ಟಿ20 ಕ್ರಿಕೆಟ್​ ಆಟಗಾರ ಎಂಬ ಪ್ರತಿಷ್ಠಿತ ಗೌರವವನ್ನು ನೀಡಲಾಗಿತ್ತು.

publive-image

ಇದನ್ನೂ ಓದಿ:ಡೆಲ್ಲಿಗೆ ಹೀನಾಯ ಸೋಲು; ಆರ್​​​ಸಿಬಿಗೆ 8 ವಿಕೆಟ್​ಗಳ ರೋಚಕ ಜಯ

ಟಿ20 ವಿಶ್ವಕಪ್ 2024ರಲ್ಲಿ ಹೆಚ್ಚು ವಿಕೆಟ್​ ಅಂದ್ರೆ 17 ವಿಕೆಟ್ ಪಡೆದ ಹಾಗೂ 2024ರ ಸಾಲಿನಲ್ಲಿ ಒಟ್ಟು 18 ಪಂದ್ಯಗಳಲ್ಲಿ 36 ವಿಕೆಟ್​ ಕಿತ್ತ ಜಂಟಿ ಸಾಧನೆಗೆ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ ಫೆಬ್ರುವರಿ 19 ರಿಂದ ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಇ ಈ ಪಂದ್ಯದೊಂದಿಗೆ ಚಾಂಪಿಯನ್ಸ್​ ಟ್ರೋಫಿ ಶುಭಾರಂಭಗೊಳ್ಳಲಿದೆ.

ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಪಂದ್ಯ ಫೆಬ್ರುವರಿ 23 ರಂದು ದುಬೈನಲ್ಲಿ ನಡೆಯಲಿದೆ ಭಾರತದ ಕೊನೆಯ ಪಂದ್ಯ ಮಾರ್ಚ್​ 2 ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment