ICC ನಿಯಮ ದಿಕ್ಕರಿಸಿ ಪಿಸಿಬಿ ವಿವಾದ; IND vs PAK ಪಂದ್ಯ ಬಗ್ಗೆ ಪಾಕ್ ಪ್ರಧಾನಿ ತನ್ನ ಆಟಗಾರರಿಗೆ ಏನಂದ್ರು?

author-image
Ganesh
Updated On
ICC ನಿಯಮ ದಿಕ್ಕರಿಸಿ ಪಿಸಿಬಿ ವಿವಾದ; IND vs PAK ಪಂದ್ಯ ಬಗ್ಗೆ ಪಾಕ್ ಪ್ರಧಾನಿ ತನ್ನ ಆಟಗಾರರಿಗೆ ಏನಂದ್ರು?
Advertisment
  • ಭಾರತ-ಪಾಕ್​​ ಪಂದ್ಯ ಅಂದರೆ ಭರಪೂರ ಮನರಂಜನೆ
  • ಪಾಕ್ ಪ್ರಧಾನಿಗೆ ಭಾರತ ಎದುರಿನ ಗೆಲುವೇ ಮುಖ್ಯ
  • ಪಾಕ್​​ನ ಕರಾಚಿಯಲ್ಲಿ ತ್ರಿವರ್ಣ ಧ್ವಜಕ್ಕಿಲ್ಲ ಸ್ಥಾನ

ಭಾರತ-ಪಾಕ್​​ ಪಂದ್ಯ ಅಂದರೆ ಭರಪೂರ ಮನರಂಜನೆ ಫಿಕ್ಸ್​​​. ಬದ್ಧವೈರಿಗಳ ನಡುವಿನ ಕದನದಿಂದ ಸಿಗುವಷ್ಟು ಎಂಟರ್​ಟೈನ್​ಮೆಂಟ್ ಮತ್ಯಾವ ಪಂದ್ಯದಲ್ಲೂ ನೋಡಲು ಸಾಧ್ಯವಿಲ್ಲ. ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಪಾಕ್ ಫ್ಯಾನ್ಸ್​ ನೀಡಿರುವ ಒಂದು ಕರೆ ಭಾರೀ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ.

ಇಂಡೋ-ಪಾಕ್ ಸಮರ ಎರಡು ತಂಡಗಳ ನಡುವಿನ ಬ್ಯಾಟ್-ಬಾಲ್ ಕದನ ಮಾತ್ರವಲ್ಲ. ಎರಡು ದೇಶಗಳ ಪ್ರತಿಷ್ಠೆಯ ಕದನ. ಇಂಡೋ-ಪಾಕ್ ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಂಟಾಗುವ ಉನ್ಮಾದ.. ಢವ ಢವ ಅಷ್ಟಿಷ್ಟಲ್ಲ. ಇಂಥ ಹೈವೋಲ್ಟೇಜ್​ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಜಾತಕ ಪಕ್ಷಿಯಂತೆ ಕಾಯ್ತಿದೆ. ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನ ಅಭಿಮಾನಿಗಳು ನೀಡಿರುವ ಒಂದು ಕರೆ, ಇಂಡೋ ಪಾಕ್ ಪಂದ್ಯದ ರಂಗನ್ನ ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: KAS ಮರು ಪರೀಕ್ಷೆ.. ಕರವೇ ಅಧ್ಯಕ್ಷ ನಾರಾಯಣ ಗೌಡ ಕೊಟ್ಟ ಎಚ್ಚರಿಕೆ ಏನು..?

publive-image

ಇಂಡೋ, ಪಾಕ್ ಹೈವೋಲ್ಟೇಜ್ ಮ್ಯಾಚ್​ಗೆ 6 ದಿನ ಬಾಕಿಯಿದೆ. ಫ್ಯಾನ್ಸ್ ಎದೆಯಲ್ಲಿ ಮಾತ್ರ ಈಗಾಗಲೇ ಢವಢವ ಶುರುವಾಗಿದೆ. ಅಭಿಮಾನಿಗಳು ಗೆಲುವಿನ ಜಪ ಮಾಡ್ತಿದ್ದಾರೆ. ಆನ್​ ಫೀಲ್ಡ್​ ಬ್ಯಾಟಲ್​ಗೂ ಮುನ್ನ ಆಫ್​ ದಿ ಫೀಲ್ಡ್​ನಲ್ಲಿ ನಡೆಯುತ್ತಿರುವ ವಾಗ್ಬಾಣಗಳು ಪಂದ್ಯದ ಕಾವು ಹೆಚ್ಚಿಸ್ತಿವೆ.

ಆಟಗಾರರಿಗೆ ಫ್ಯಾನ್ಸ್​ ವಾರ್ನಿಂಗ್..!

ಇಂಡೋ ಪಾಕ್ ಮ್ಯಾಚ್​ಗೆ ಕ್ರಿಕೆಟ್‌ ಫ್ಯಾನ್ಸ್​ ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಪಾಕ್​ ಅಭಿಮಾನಿಗಳು ಮಾತ್ರ, ಟೀಮ್ ಇಂಡಿಯಾ ಎದುರು ಸಿಟ್ಟಿಗೆ ಬಿದಿದ್ದಾರೆ. ಬಿಸಿಸಿಐ, ಪಾಕ್​​ಗೆ ತೆರಳದ ಬಗ್ಗೆ ಅಸಮಾಧಾನಗೊಂಡಿರುವ ಪಾಕ್​ ಫ್ಯಾನ್ಸ್, ಪಾಕ್‌ ತಂಡದ ಆಟಗಾರರಿಗೆ ಖಡಕ್‌ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿರಾಟ್‌ ಕೊಹ್ಲಿ ಹಾಗೂ ಟೀಮ್ ಇಂಡಿಯಾ ಆಟಗಾರರನ್ನ ಅಪ್ಪಿಕೊಳ್ಳದಂತೆ ಎಚ್ಚರಿಸಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲ. ಪಾಕ್ ಆಟಗಾರರ ಸ್ನೇಹದ ಬಗ್ಗೆ ಮಾಜಿ ಆಟಗಾರ ಮೊಯಿನ್ ಖಾನ್ ಸಹ ಕೆಂಡಕಾರಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಜೊತೆ ಸ್ನೇಹ ಬೆಳಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ಟೀಮ್​ ಇಂಡಿಯಾದ ಹೊಸ ಜರ್ಸಿ ಹೇಗಿದೆ.. ಕ್ರಿಕೆಟ್​ ಪ್ರಿಯರು ಏನಂತಾರೆ?

publive-image

ಫ್ರೆಂಡ್ಲಿ ಆಗಿರುವುದು ಸರಿಯಲ್ಲ

ಭಾರತೀಯ ಆಟಗಾರರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಮೈದಾನದಲ್ಲಿ ಅವರೊಂದಿಗೆ ಫ್ರೆಂಡ್ಲಿ ಆಗಿರುವುದು ಸರಿಯಲ್ಲ. ಏಕೆಂದರೆ ಕ್ರಿಕೆಟ್​ನಲ್ಲಿ ಪೈಪೋಟಿ ಇದ್ದರೆ ಮಾತ್ರ ಗೆಲ್ಲುವ ಹುಮ್ಮಸ್ಸು ಇರುತ್ತದೆ. ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಬಂದಾಗಲೆಲ್ಲ ಪಾಕ್​ ಆಟಗಾರರ ಹೆಗಲು ತಟ್ಟಿ ಮಾತನಾಡುತ್ತಾರೆ. ಇಲ್ಲಿ ನಾವು ಎದುರಾಳಿ ಆಟಗಾರರಾಗಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬೇಕು-ಮೊಯಿನ್ ಖಾನ್, ಮಾಜಿ ಆಟಗಾರ

ಪಾಕ್ ಪ್ರಧಾನಿಗೆ ಭಾರತ ಎದುರಿನ ಗೆಲುವೇ ಮುಖ್ಯ
ಪಾಕ್ ಅಭಿಮಾನಿಗಳು, ಮಾಜಿ ಕ್ರಿಕೆಟರ್​ಗಳೇ ಅಲ್ಲ. ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್, ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಜೊತೆಗೆ ಟೀಮ್ ಇಂಡಿಯಾವನ್ನು ಸೋಲಿಸಲು ಕರೆ ನೀಡಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ಎದುರು ಸಮರ ಸಾರಿರುವ ಪಾಕ್ ಪ್ರಧಾನಿ, ಪಾಕ್ ಜನರ ಮನ ಗೆಲ್ಲುವ ಸವಾಲು ಹಾಕಿದ್ದಾರೆ.

ಪಾಕ್​​ನ ಕರಾಚಿಯಲ್ಲಿ ತ್ರಿವರ್ಣ ಧ್ವಜಕ್ಕಿಲ್ಲ ಸ್ಥಾನ

ಇತ್ತ ಫ್ಯಾನ್ಸ್​ ಹಾಗೂ ಮಾಜಿ ಕ್ರಿಕೆಟರ್​ಗಳು, ಟೀಮ್ ಇಂಡಿಯಾ ಆಟಗಾರರಿಂದ ಅಂತರ ಕಾಯ್ದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ರೆ, ಅತ್ತ ಪಾಕ್ ಕ್ರಿಕೆಟ್​ ಬೋರ್ಡ್​, ಭಾರತದ ತ್ರಿವರ್ಣ ಧ್ವಜ ಹಾರಿಸದೇ ಐಸಿಸಿ ರೂಲ್​ನ ಧಿಕ್ಕರಿಸಿದೆ. ಪಂದ್ಯಗಳನ್ನ ಆಯೋಜಿಸುವ ಸ್ಟೇಡಿಯಂಗಳಲ್ಲಿ ಉಳಿದ ಎಲ್ಲಾ ತಂಡಗಳ ದೇಶದ ಧ್ವಜ ಹಾರಿಸಿದೆ. ಭಾರತ ಧ್ವಜವನ್ನ ಹಾರಿಸಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ಟೀಮ್ ಇಂಡಿಯಾ, ಪಾಕ್ ಪ್ರವಾಸ ಧಿಕ್ಕರಿಸಿದ ಕಾರಣಕ್ಕಾಗಿಯೇ ಈ ನಿಲುವು ತೆಳೆದಿದೆ.

ಇದನ್ನೂ ಓದಿ: ಡೆಲ್ಲಿಗೆ ಹೀನಾಯ ಸೋಲು; ಆರ್​​​ಸಿಬಿಗೆ 8 ವಿಕೆಟ್​ಗಳ ರೋಚಕ ಜಯ

publive-image

ಗೆಳೆತನಕ್ಕೆ ಬೀಳುತ್ತಾ ಬ್ರೇಕ್​​​​​?

ಇಂಡೋ ಪಾಕ್ ಮ್ಯಾಚ್​ ಬದ್ಧವೈರಿಗಳ ಕದನ ನಿಜ. ಇಲ್ಲಿ ವಾಗ್ವಾದ, ವಾಕ್ಸಮರಗಳು ಸಾಮಾನ್ಯ. ಆದ್ರೆ, ಇತ್ತಿಚಿನ ಐಸಿಸಿ ಈವೆಂಟ್ಸ್​ಗಳಲ್ಲಿ ಸ್ಲೆಡ್ಜಿಂಗ್, ಆಟಗಾರರ ಟಾಕ್​ವಾರ್​​ಗಿಂತ ಉಭಯ ತಂಡಗಳ ಆಟಗಾರರ ಸ್ನೇಹವೇ ಹೆಚ್ಚಾಗಿ ಕಾಣ್ತಿತ್ತು. ಪರಸ್ಪರ ಉಭಯ ಕುಶಲೋಪರಿ ವಿಚಾರಿಸುತ್ತಾ, ಬಹುಮಾನಗಳನ್ನು ನೀಡುತ್ತಾ ಇಂಡೋ, ಪಾಕ್ ಬ್ಯಾಟಲ್​ಗೆ ​ಫ್ರೆಂಡ್ಶಿಪ್​ ಟಚ್ ನೀಡಿದ್ರು. ಆದ್ರೀಗ ಪಾಕ್​​ ಪ್ರಧಾನಿಯಿಂದ ಹಿಡಿದು ಅಭಿಮಾನಿಗಳ ತನಕ ಟೀಮ್ ಇಂಡಿಯಾ ಸೋಲಿಗೆ ಕರೆ ನೀಡಿದ್ದಾರೆ. ಇದು ಆಟಗಾರರ ಅನ್​ಫೀಲ್ಡ್​ ಬ್ಯಾಟಲ್​ಗೆ ಕಾರಣವಾಗುತ್ತಾ? ಕಾದು ನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment