/newsfirstlive-kannada/media/post_attachments/wp-content/uploads/2025/02/IND-VS-BAN.jpg)
ಇಂಡೋ-ಬಾಂಗ್ಲಾ ಕದನಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಕೆಲವೇ ಗಂಟೆಗಳಲ್ಲಿ ಕದನ ಕಣದಲ್ಲಿ ಇಂಡಿಯನ್ಸ್ ಟೈಗರ್ಸ್-ಬಾಂಗ್ಲಾ ಟೈಗರ್ಸ್ ಮುಖಾಮುಖಿಯಾಗಲಿವೆ. ಈ ಕದನಕ್ಕೂ ಮುನ್ನ ಟೀಮ್ ಇಂಡಿಯಾ ದಿಗ್ಗಜರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕೊಹ್ಲಿ, ರೋಹಿತ್ ಪಾಲಿಗೆ ಬಹುತೇಕ ಇದೇ ಕೊನೆಯ ಐಸಿಸಿ ಟೂರ್ನಿಯಾಗಿದ್ದು, ಅಬ್ಬರದ ಆಟದೊಂದಿಗೆ ಕಿಕ್ಸ್ಟಾರ್ಟ್ ಮಾಡ್ತಾರಾ ಅನ್ನೋ ಕುತೂಹಲ ಇದೆ.
ಕೊಹ್ಲಿ-ರೋಹಿತ್ ಸೆಂಟರ್ ಆಫ್ ಅಟ್ರಾಕ್ಷನ್
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಭಿಯಾನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒನ್ಸ್ ಅಗೇನ್ ದಿಗ್ಗಜರಾದ ಕ್ಯಾಪ್ಟನ್ ಶರ್ಮಾ, ಕೊಹ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಡು ಆರ್ ಡೈ ಸರಣಿಯಾಗಿದೆ. ಈ ಟೂರ್ನಿಯ ಪರ್ಫಾಮೆನ್ಸ್ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ಕ್ರಿಕೆಟ್ ಲೋಕದ ಕಣ್ಣು ಈ ಇಬ್ಬರ ಮೇಲೆಯೇ ನೆಟ್ಟಿದೆ.
ಫ್ಯಾನ್ಸ್ಗೆ ಫುಲ್ ಮೀಲ್ಸ್!
ಕಳೆದ ಕೆಲ ತಿಂಗಳಿಂದ ವಿರಾಟ್ ಹಾಗೂ ರೋಹಿತ್ ಫಾರ್ಮ್ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಟೀಕೆಗಳನ್ನ ಎದುರಿಸಿದ್ದ ರೋ-ಕೊ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಲಯ ಕಂಡುಕೊಂಡಿದ್ದಾರೆ. ರೋಹಿತ್ ಶತಕ ಸಿಡಿಸಿ ಆರ್ಭಟಿಸಿದ್ರೆ, ವಿರಾಟ್ ಕೊಹ್ಲಿ ಕಾನ್ಫಿಡೆಂಟ್ ಆಗಿ ಬ್ಯಾಟ್ ಬೀಸಿ ಹಾಫ್ ಸೆಂಚುರಿ ಸಿಡಿಸಿದ್ರು. ಹಿಟ್ಮ್ಯಾನ್, ರನ್ಮಷೀನ್ ಬ್ಯಾಟ್ ಬೀಸಿದ ರೀತಿ ಇದೀಗ ಬಾಂಗ್ಲಾ ಟೈಗರ್ಸ್ ಭೀತಿಗೆ ಕಾರಣವಾಗಿದೆ.
ಇದನ್ನೂ ಓದಿ: ರೋಹಿತ್- ಗಂಭೀರ್ ಮಧ್ಯೆ ಟಾಕ್ ವಾರ್.. ವಿಕೆಟ್ ಕೀಪರ್, ಸ್ಪಿನ್ನರ್ಗಾಗಿ ಬಿಗ್ ಫೈಟ್
ಕೊಹ್ಲಿ ಅಂದ್ರೆ ಬೆಚ್ಚಿ ಬೀಳುತ್ತೆ ಬಾಂಗ್ಲಾ.!
ರನ್ ಮಷೀನ್ ವಿರಾಟ್ ಕೊಹ್ಲಿ ಏಕದಿನ ಫಾರ್ಮೆಟ್ನ ಸುಲ್ತಾನ. ಕಿಂಗ್ ಕೊಹ್ಲಿಯ ಗತ್ತು ಒನ್ ಡೇ ಫಾರ್ಮೆಟ್ನಲ್ಲಿ ತಗ್ಗಿದ್ದೇ ಇಲ್ಲ. ಅದ್ರಲ್ಲೂ ಐಸಿಸಿ ಟೂರ್ನಿ ಅಂದ್ರೆ ಆರ್ಭಟ ಮತ್ತಷ್ಟು ಜೋರಾಗುತ್ತೆ. ಬಾಂಗ್ಲಾ ಟೈಗರ್ಸ್ಗೂ ಸದ್ಯ ಕೊಹ್ಲಿಯದ್ದೇ ಭಯ ಕಾಡ್ತಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ ಆಡಿದ ಪಂದ್ಯಗಳಲ್ಲಿ ನೀಡಿರೋ ಸೂಪರ್-ಡೂಪರ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಬಾಂಗ್ಲಾ ಎದುರು ಏಕದಿನದಲ್ಲಿ ಕೊಹ್ಲಿ
ಬಾಂಗ್ಲಾದೇಶ ಎದುರು ಏಕದಿನದಲ್ಲಿ 16 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಬರೋಬ್ಬರಿ 75.83ರ ಸರಾಸರಿಯಲ್ಲಿ 910 ರನ್ಗಳಿಸಿದ್ದಾರೆ. 5 ಶತಕ, 3 ಹಾಫ್ ಸೆಂಚುರಿಗಳನ್ನ ಚಚ್ಚಿದ್ದಾರೆ.
ಬಾಂಗ್ಲಾ ಟೈಗರ್ಸ್ಗೆ ಹಿಟ್ಮ್ಯಾನ್ ರೋಹಿತ್ ಭಯ
ಕಿಂಗ್ ಕೊಹ್ಲಿ ಮಾತ್ರವಲ್ಲ.. ಹಿಟ್ಮ್ಯಾನ್ ರೋಹಿತ್ ಕೂಡ ಬಾಂಗ್ಲಾದೇಶ ಕ್ಯಾಂಪ್ನ ಟೆನ್ಶನ್ ಹೆಚ್ಚಿಸಿದ್ದಾರೆ. ಬಲಿಷ್ಟ ಇಂಗ್ಲೆಂಡ್ ಬೌಲಿಂಗ್ನ ಚಿಂದಿ ಉಡಾಯಿಸಿ ಸಾಲಿಡ್ ಶತಕ ಸಿಡಿಸಿ ಮಿಂಚಿರೋ ರೋಹಿತ್ ಫಾರ್ಮ್ಗೆ ಮರಳಿದ್ದಾರೆ. ಫಾರ್ಮ್ ಕಂಡುಕೊಂಡಿರೋ ರೋಹಿತ್ ಶರ್ಮಾ, ಬಾಂಗ್ಲಾ ಎದುರಿನ ಕದನ ಅಂದ್ರೆ ಸಿಡಿದೇಳ್ತಾರೆ. ಈ ಹಿಂದೆ ಮುಖಾಮುಖಿಯಾದಾಗಲೆಲ್ಲಾ ರೋಹಿತ್ನ ಕಟ್ಟಿ ಹಾಕಲಾಗದೇ ಬಾಂಗ್ಲಾ ಪಡೆ ಪರದಾಡಿದೆ. ಈ ಹಿಂದಿನ ಟ್ರ್ಯಾಕ್ ರೆಕಾರ್ಡ್, ಸದ್ಯದ ಫಾರ್ಮ್ ಬಾಂಗ್ಲಾ ಭಯಕ್ಕೆ ಕಾರಣವಾಗಿದೆ.
ಬಾಂಗ್ಲಾ ಎದುರು ಏಕದಿನದಲ್ಲಿ ರೋಹಿತ್
ಏಕದಿನ ಮಾದರಿಯಲ್ಲಿ ಬಾಂಗ್ಲಾ ಎದುರು 17 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ ಶರ್ಮಾ 786 ರನ್ಗಳಿಸಿದ್ದಾರೆ. 56.14ರ ಸಾಲಿಡ್ ಸರಾಸರಿಯಲ್ಲಿ ರನ್ಗಳಿಸಿರೋ ಹಿಟ್ಮ್ಯಾನ್ 3 ಶತಕ, 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಹಿಂದೆ ಬಾಂಗ್ಲಾ ಬೌಲರ್ಗಳ ಮೇಲೆ ಸವಾರಿ ಮಾಡಿದ ಇತಿಹಾಸ ಹೊಂದಿರೋ ರೋಹಿತ್, ಕೊಹ್ಲಿ ಮಹತ್ವದ ಟೂರ್ನಿಗೂ ಮುನ್ನ ಫಾರ್ಮ್ಗೂ ಮರಳಿದ್ದಾರೆ.
ಇದನ್ನೂ ಓದಿ: 133 ವರ್ಷದ ಇತಿಹಾಸ; ಮಾಜಿ CM ನಿಜಲಿಂಗಪ್ಪರ ರಾಜೀನಾಮೆಗೆ ಕಾರಣವಾಗಿದ್ದ ಠಾಣೆ ಇನ್ನು ನೆನಪು ಮಾತ್ರ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್